ಅಫ್ಘಾನ್ ತಂಡಕ್ಕೆ ಮತ್ತೆ ಅಸ್ಗರ್ ಅಫ್ಘಾನ್ ನಾಯಕ: ರಶೀದ್ ಖಾನ್ ಔಟ್

Team Udayavani, Dec 11, 2019, 5:06 PM IST

ಕಾಬೂಲ್: ಈಗಷ್ಟೇ ವಿಶ್ವಕ್ರಿಕೆಟ್ ನಲ್ಲಿ ತನ್ನ ಛಾಪು ಮೂಡಿಸುತ್ತಿರುವ ಅಫ್ಘಾನಿಸ್ಥಾನ ತಂಡ ಮತ್ತೆ ತನ್ನ ನಾಯಕತ್ವದಲ್ಲಿ ಬದಲಾವಣೆ ಮಾಡಿಕೊಂಡಿದೆ, ಈ ಹಿಂದೆ ತಂಡದ ನಾಯಕತ್ವ ವಹಿಸಿಕೊಂಡಿದ್ದ ಅಸ್ಗರ್ ಅಫ್ಘಾನ್ ಗೆ ಮತ್ತೆ ಚುಕ್ಕಾಣಿ ನೀಡಲಾಗಿದೆ.

ಜೂನ್ ನಲ್ಲಿ ನಡೆದ ಏಕದಿನ ವಿಶ್ವಕಪ್ ಗೆ ಮೊದಲು ಅಸ್ಗರ್ ಅವರನ್ನು ತಂಡದ ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಏಕದಿನ ತಂಡವನ್ನು ಗುಲ್ಬದಿನ್ ನೈಬ್ ಮುನ್ನಡೆಸಿದ್ದರೆ, ಟೆಸ್ಟ್ ತಂಡವನ್ನು  ರಹಮತ್ ಶಾ ಮುನ್ನಡೆಸಿದ್ದರು. ಟಿ ಟ್ವೆಂಟಿ ತಂಡದ ಚುಕ್ಕಾಣಿಯನ್ನು ರಶೀದ್ ಖಾನ್ ಗೆ ನೀಡಲಾಗಿತ್ತು.

ಆದರೆ ನಂತರದ ಬೆಳವಣಿಗೆಯಲ್ಲಿ ಮೂರು ಮಾದರಿಗೂ ಸ್ಪಿನ್ನರ್ ರಶೀದ್ ಆಖನ್ ರನ್ನೇ ನಾಯಕರನ್ನಾಗಿ ನೇಮಿಸಲಾಗಿತ್ತು. ರಶೀದ್ ನಾಯಕತ್ವದಲ್ಲಿ ಅಫ್ಘಾನ್ ತಂಡ ಒಂದು ಟೆಸ್ಟ್ ಮತ್ತು ಟಿ ಟ್ವೆಂಟಿ ಸರಣಿ ಜಯಿಸಿತ್ತು.

ಇದೀಗ ಏಕಾಏಕಿ ರಶೀದ್ ಖಾನ್ ರನ್ನು ನಾಯಕತ್ವದಿಂದ ಇಳಿಸಿರುವ ಅಫ್ಘಾನ್ ಕ್ರಿಕೆಟ್ ಮಂಡಳಿ ಹಿರಿಯ ಆಟಗಾರ ಅಸ್ಗರ್ ಅಫ್ಘಾನ್ ಗೆ ಪಟ್ಟ ಕಟ್ಟಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ