ದಿನವಿಡೀ ಕುಣಿದು ಕುಪ್ಪಳಿಸಿದ ಕುಕ್‌!


Team Udayavani, Dec 29, 2017, 6:15 AM IST

AP12_28_2017_000011A.jpg

ಮೆಲ್ಬರ್ನ್: ತೃತೀಯ ದಿನವಿಡೀ ಕ್ರೀಸ್‌ ಆಕ್ರಮಿಸಿಕೊಂಡು ಅಜೇಯ ದ್ವಿಶತಕದೊಂದಿಗೆ ಮುನ್ನುಗ್ಗಿದ ಅಲಸ್ಟೇರ್‌ ಕುಕ್‌ ಸಾಹಸದಿಂದ ಮೆಲ್ಬರ್ನ್ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಪಡೆ ಆತಿಥೇಯ ಆಸ್ಟ್ರೇಲಿಯಕ್ಕೆ ಬಿಸಿ ಮುಟ್ಟಿಸಲು ಹೊರಟಿದೆ.

ಆಸ್ಟ್ರೇಲಿಯದ 327ಕ್ಕೆ ಉತ್ತರವಾಗಿ 2 ವಿಕೆಟಿಗೆ 192 ರನ್‌ ಮಾಡಿದ್ದ ಇಂಗ್ಲೆಂಡ್‌, ಗುರುವಾರದ ಆಟ ಮುಂದುವರಿಸಿ 9 ವಿಕೆಟಿಗೆ 491 ರನ್‌ ಪೇರಿಸಿದೆ. ಇದರಲ್ಲಿ ಕುಕ್‌ ಪಾಲು ಅಜೇಯ 244 ರನ್‌. ಇಂಗ್ಲೆಂಡ್‌ ಹೊಂದಿರುವ ಮುನ್ನಡೆ 164 ರನ್‌. ಪಂದ್ಯವಿನ್ನೂ 2 ದಿನ ಬಾಕಿ ಇದೆ. ಈಗಾಗಲೇ ಸರಣಿ ಸೋತಿರುವ ಆಂಗ್ಲರ ಪಡೆ ಕಾಂಗರೂಗಳಿಗೆ ಬಾಕ್ಸಿಂಗ್‌ ಡೇ ಪಂಚ್‌ ಕೊಟ್ಟಿàತೇ ಎಂಬುದೊಂದು ಕುತೂಹಲ.

ದಿನವಿಡೀ ಮೆರೆದ ಕುಕ್‌
ತೃತೀಯ ದಿನವಿಡೀ ಮೆಲ್ಬರ್ನ್ ಅಂಗಳದಲ್ಲಿ ಮೆರೆದಾಡಿದ ಕುಕ್‌ ಆಸ್ಟ್ರೇಲಿಯದ ಬೌಲರ್‌ಗಳನ್ನು ಕಾಡುತ್ತಲೇ ಹೋದರು. ಮ್ಯಾರಥಾನ್‌ ಬ್ಯಾಟಿಂಗಿನೊಂದಿಗೆ ಒಂದೊಂದೇ ದಾಖಲೆಯನ್ನು ವಶಪಡಿಸಿಕೊಳ್ಳುವುದೇ ಕುಕ್‌ ಕಾಯಕವಾಯಿತು. ಅವರಿಗೆ ಜಾನಿ ಬೇರ್‌ಸ್ಟೊ (22), ಮೊಯಿನ್‌ ಅಲಿ (20) ಮತ್ತು ಕ್ರಿಸ್‌ ವೋಕ್ಸ್‌ (26) ಸಾಮಾನ್ಯ ಬೆಂಬಲವಿತ್ತರು. ಆದರೆ 9ನೇ ವಿಕೆಟಿಗೆ ಆಗಮಿಸಿದ ಸ್ಟುವರ್ಟ್‌ ಬ್ರಾಡ್‌ ಇವರೆಲ್ಲರನ್ನೂ ಮೀರಿಸಿದರು; ಮಾಜಿ ಕಪ್ತಾನನೊಂದಿಗೆ ಶತಕದ ಜತೆಯಾಟ ನಿಭಾಯಿಸಿದ ಹೆಗ್ಗಳಿಕೆಗೆ ಪಾತ್ರರಾದರು.

ಕುಕ್‌-ಬ್ರಾಡ್‌ 18 ಚಿಲ್ಲರೆ ಓವರ್‌ಗಳಲ್ಲಿ ಭರ್ತಿ 100 ರನ್‌ ಪೇರಿಸಿದರು. ಇದು ಆ್ಯಶಸ್‌ನಲ್ಲಿ ಇಂಗ್ಲೆಂಡಿನ 9ನೇ ವಿಕೆಟಿಗೆ 91 ವರ್ಷಗಳ ಬಳಿಕ ದಾಖಲಾದ ಮೊದಲ ಶತಕದ ಜತೆಯಾಟ. ಇಲ್ಲಿ ಇನ್ನೊಂದು ಸ್ವಾರಸ್ಯವಿದೆ, ಕುಕ್‌ ಮತ್ತು ಬ್ರಾಡ್‌ ಟೆಸ್ಟ್‌ ಇನ್ನಿಂಗ್ಸ್‌ ಒಂದರಲ್ಲಿ ಜತೆಯಾಗಿ ಆಡುತ್ತಿರುವುದು ಇದು ಕೇವಲ 2ನೇ ಸಲ!

ಸ್ಟುವರ್ಟ್‌ ಬ್ರಾಡ್‌ 63 ಎಸೆತಗಳಿಂದ 56 ರನ್‌ ಮಾಡಿ (8 ಬೌಂಡರಿ, 1 ಸಿಕ್ಸರ್‌) ಔಟಾದರು. ಕೊನೆಯವರಾಗಿ ಬಂದ ಜೇಮ್ಸ್‌ ಆ್ಯಂಡರ್ಸನ್‌ 15 ಎಸೆತ ಎದುರಿಸಿದ್ದು, ಇನ್ನೂ ಖಾತೆ ತೆರೆದಿಲ್ಲ. ಕುಕ್‌ 244 ರನ್ನಿಗಾಗಿ 409 ಎಸೆತ ನಿಭಾಯಿಸಿದ್ದಾರೆ; 27 ಸಲ ಚೆಂಡನ್ನು ಬೌಂಡರಿ ದಾಟಿಸಿದ್ದಾರೆ.

ಕುಕ್‌ 104ರಿಂದ ದಿನದಾಟ ಮುಂದುವರಿಸಿದ್ದರು. ಇವರೊಂದಿಗೆ 49 ರನ್‌ ಗಳಿಸಿ ಆಡುತ್ತಿದ್ದ ನಾಯಕ ಜೋ ರೂಟ್‌ 61 ರನ್‌ ಮಾಡಿ ಔಟಾದರು (133 ಎಸೆತ, 7 ಬೌಂಡರಿ). ಆಸ್ಟ್ರೇಲಿಯ ಪರ ಹ್ಯಾಝಲ್‌ವುಡ್‌, ಲಿಯೋನ್‌ ಮತ್ತು ಕಮಿನ್ಸ್‌ ತಲಾ 3 ವಿಕೆಟ್‌ ಉರುಳಿಸಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯ-327. ಇಂಗ್ಲೆಂಡ್‌-9 ವಿಕೆಟಿಗೆ 491 (ಕುಕ್‌ ಬ್ಯಾಟಿಂಗ್‌ 244, ರೂಟ್‌ 61, ಬ್ರಾಡ್‌ 56, ಹ್ಯಾಝಲ್‌ವುಡ್‌ 95ಕ್ಕೆ 3, ಲಿಯೋನ್‌ 109ಕ್ಕೆ 3, ಕಮಿನ್ಸ್‌ 117ಕ್ಕೆ 3).

ಟಾಪ್ ನ್ಯೂಸ್

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.