ಮ್ಯಾಚ್ ರೆಫ್ರಿ ಡೇವಿಡ್ ಬೂನ್ಗೆ ಕೋವಿಡ್
Team Udayavani, Dec 31, 2021, 6:19 AM IST
ಸಿಡ್ನಿ: ಆಸ್ಟ್ರೇಲಿಯನ್ ಮ್ಯಾಚ್ ರೆಫ್ರಿ ಡೇವಿಡ್ ಬೂನ್ ಅವರಿಗೆ ಕೊರೊನಾ ದೃಢಪಟ್ಟಿದೆ. ಹೀಗಾಗಿ ಅವರು ಆ್ಯಷಸ್ ಸರಣಿಯ ಹೊಸವರ್ಷದ ಟೆಸ್ಟ್ ಪಂದ್ಯದಲ್ಲಿ ಕರ್ತವ್ಯ ನಿಭಾಯಿಸುವುದಿಲ್ಲ. ಇವರ ಬದಲು ಸ್ಟೀವ್ ಬರ್ನಾರ್ಡ್ ಅವರನ್ನು ಮ್ಯಾಚ್ ರೆಫ್ರಿಯನ್ನಾಗಿ ನೇಮಿಸಲಾಗಿದೆ.
ಡೇವಿಡ್ ಬೂನ್ ಮೆಲ್ಬರ್ನ್ ನಲ್ಲೇ ಉಳಿದು ವಿಕ್ಟೋರಿಯಾದ ಆರೋಗ್ಯ ಮಾರ್ಗಸೂಚಿಯನ್ನು ಪಾಲಿಸಲಿದ್ದಾರೆ. ಅವರಿನ್ನು 10 ದಿನ ಕ್ವಾರಂಟೈನ್ನಲ್ಲಿ ಇರಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯ ತಿಳಿಸಿದೆ.
ಡಿ. 27ರಿಂದ ಎರಡೂ ತಂಡಗಳ ಆಟಗಾರರಿಗೆ, ಅವರ ಕುಟುಂಬದವರಿಗೆ, ಸಹಾಯಕ ಸಿಬ್ಬಂದಿಗೆ, ಪಂದ್ಯದ ಅಧಿಕಾರಿಗಳಿಗೆ ಪಿಸಿಆರ್ ಟೆಸ್ಟ್ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ಡೇವಿಡ್ ಬೂನ್ ಅವರಿಗೆ ಸೋಂಕಿರುವುದು ಖಚಿತವಾಗಿದೆ.