ಆ್ಯಶಸ್‌ ಟೆಸ್ಟ್‌ ಸರಣಿ : ಜೆರ್ಸಿಯಲ್ಲಿ ಆಟಗಾರರ ಹೆಸರು

Team Udayavani, Jul 24, 2019, 6:12 AM IST

ಲಂಡನ್‌: ವನ್‌ ಡೇ ಮತ್ತು ಟಿ20 ಮಾದರಿಯಲ್ಲಿ ಇರುವಂತೆ ಇದೇ ಮೊದಲ ಬಾರಿಗೆ ಟೆಸ್ಟ್‌ ಪಂದ್ಯದಲ್ಲೂ ವೈಟ್‌ ಜೆರ್ಸಿ ಮೇಲೆ ಆಟಗಾರರ ಹೆಸರು ಮತ್ತು ನಂಬರ್‌ ಮುದ್ರಣವಾಗಲಿದೆ. ಈ ಮೂಲಕ ಟೆಸ್ಟ್‌ ಕ್ರಿಕೆಟಿಗೆ ಹೊಸ ಲುಕ್‌ ನೀಡುವ ಪ್ರಯತ್ನವೊಂದು ನಡೆಯಲಿದೆ. ಆ್ಯಶಸ್‌ ಸರಣಿಯಲ್ಲೇ ಈ ಪ್ರಯೋಗ ನಡೆಯಲಿದೆ.

ಇಂಗ್ಲೆಂಡ್‌ ಕ್ರಿಕೆಟ್‌ ಸಮಿತಿ ಟ್ವಿಟರ್‌ನಲ್ಲಿ ಜೋ ರೂಟ್‌ ಅವರ ಜೆರ್ಸಿಯಲ್ಲಿ ಹೆಸರು ಮತ್ತು ನಂಬರ್‌ ಪ್ರದರ್ಶಿಸುವ ಮೂಲಕ ಜೆರ್ಸಿ ಬದಲಾಗಲಿರುವುದನ್ನು ದೃಢಪಡಿಸಿದೆ. ಆದರೆ ಆಸ್ಟ್ರೇಲಿಯದವರೂ ಈ ಬದಲಾವಣೆಯನ್ನು ಅನುಸರಿಸುತ್ತಾರೆಯೇ ಎನ್ನುವುದು ತಿಳಿದುಬಂದಿಲ್ಲ.

ಸಾಂಪ್ರದಾಯಿಕ ಎದುರಾಳಿಗಳಾಗಿರುವ ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯ ನಡುವಿನ ಪ್ರತಿಷ್ಠಿತ ಆ್ಯಶಸ್‌ ಸರಣಿ ಟೆಸ್ಟ್‌ ಕ್ರಿಕೆಟಿನ ಹಲವು ಬದಲಾವಣೆಗಳಿಗೆ ನಾಂದಿ ಹಾಡಲಿದೆ ಎಂದು ಕೆಲ ಸಮಯದ ಹಿಂದೆ ಹೇಳಲಾಗಿತ್ತು. ಇಂಗ್ಲೆಂಡ್‌ ಈ ಮಾತನ್ನು ಕನಿಷ್ಠ ಜೆರ್ಸಿ ಮಟ್ಟಿಗಾದರೂ ನಿಜ ಮಾಡಲು ಮುಂದಾಗಿದೆ.

ಏಕದಿನ ಮತ್ತು ಟಿ20 ಕ್ರಿಕೆಟಿನಲ್ಲಿ ಆಟಗಾರರ ಹೆಸರು ಮತ್ತು ಲಕ್ಕಿ ನಂಬರ್‌ ಮುದ್ರಿಸುವ ಸಂಪ್ರದಾಯ ಪ್ರಾರಂಭವಾಗಿ ಅನೇಕ ವರ್ಷಗಳಾಗಿತ್ತು. ಆದರೆ ಟೆಸ್ಟ್‌ ನಲ್ಲಿ ಇನ್ನೂ ಈ ಸಂಪ್ರದಾಯ ಬಂದಿಲ್ಲ. ಆದರೆ ಕ್ರಿಕೆಟ್‌ ಅಭಿಮಾನಿಗಳಿಂದ ಇಂಗ್ಲೆಂಡ್‌ನ‌ ಈ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

1ರಿಂದ 11ರ ತನಕ ನಂಬರ್‌ ಮುದ್ರಿಸುವುದಕ್ಕೇನೂ ಅಡ್ಡಿಯಿಲ್ಲ. ಆದರೆ ಜೆರ್ಸಿಯಲ್ಲಿ ದೊಡ್ಡ ನಂಬರ್‌ಗಳನ್ನು ಮತ್ತು ಆಟಗಾರರ ಹೆಸರು ಮುದ್ರಿಸುವುದರಿಂದ ಆಗುವ ಲಾಭವೇನು? ಇದೆಲ್ಲ ಕ್ರಿಕೆಟಿನ ವ್ಯಾಪಾರೀಕರಣದ ಹುನ್ನಾರ. ಆಟಗಾರರ ಹೆಸರುಗಳಿಗೆ ಹೆಚ್ಚು ಬೇಡಿಕೆಯಿರುವುದೇ ಈ ನಿರ್ಧಾರದ ಹಿಂದಿನ ವಾಸ್ತವ ವಿಚಾರ.
– ಯಾರ್ಕ್‌ಶಯರ್‌, ಸಿಸಿಸಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ