ಭಾರತ-ಪಾಕ್‌: ಇಂದು “ಸೂಪರ್‌ ಫೋರ್‌’ ಸಂಡೇ; ಬದ್ಧ ಎದುರಾಳಿಗಳು ಮತ್ತೆ ಕಣಕ್ಕೆ

ಭಾರತಕ್ಕೆ ಮತ್ತೊಂದು ಗೆಲುವಿನ ತವಕ ; ಪಾಕ್‌ಗೆ ಸೇಡಿನ ಕಾತರ

Team Udayavani, Sep 4, 2022, 7:35 AM IST

ಭಾರತ-ಪಾಕ್‌: ಇಂದು “ಸೂಪರ್‌ ಫೋರ್‌’ ಸಂಡೇ; ಬದ್ಧ ಎದುರಾಳಿಗಳು ಮತ್ತೆ ಕಣಕ್ಕೆ

ದುಬಾೖ: ಏಷ್ಯಾ ಕಪ್‌ ಕ್ರಿಕೆಟ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ- ಪಾಕಿಸ್ಥಾನ ನಡುವಿನ ದ್ವಿತೀಯ ಸುತ್ತಿನ ಕಾದಾಟಕ್ಕೆ ಅಖಾಡ ಸಜ್ಜಾಗಿದೆ.

ರವಿವಾರ ದುಬಾೖಯಲ್ಲಿ ಈ ಮುಖಾಮುಖಿ ನಡೆಯಲಿದ್ದು, ಕ್ರಿಕೆಟ್‌ ಪ್ರೇಮಿಗಳು ಚುಟುಕು ಕ್ರಿಕೆಟ್‌ನ ಭಾರೀ ರೋಮಾಂಚನವನ್ನು ಕಣ್ತುಂಬಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.

ಭಾರತ-ಪಾಕಿಸ್ಥಾನ ಕಳೆದ ರವಿವಾರವೂ ಎದುರಾಗಿದ್ದವು. ಅದು “ಎ’ ವಿಭಾಗದ ಲೀಗ್‌ ಪಂದ್ಯವಾಗಿತ್ತು. 148 ರನ್‌ ಗುರಿ ಪಡೆದ ರೋಹಿತ್‌ ಶರ್ಮ ಬಳಗ 5 ವಿಕೆಟ್‌ ಗೆಲುವು ಸಾಧಿಸಿತ್ತು. ಸೆ. 4ರಂದು ನಡೆಯುವುದು “ಸೂಪರ್‌ ಫೋರ್‌’ ಮುಖಾಮುಖಿ.ಭಾರತ ಮೊದಲ ಪಂದ್ಯವನ್ನು ಗೆದ್ದ ಉತ್ಸಾಹದಲ್ಲಿದ್ದರೆ, ಪಾಕಿಸ್ಥಾನ ಸೇಡಿಗಾಗಿ ಹಪಹಪಿಸುತ್ತಿದೆ.

ಲೀಗ್‌ನಲ್ಲಿ ಎರಡೂ ತಂಡಗಳು ಹಾಂಕಾಂಗ್‌ಗೆ ಸೋಲುಣಿಸಿದ್ದವು. ಇದರಲ್ಲಿ ಪಾಕಿಸ್ಥಾನದ ಗೆಲುವು ಅಧಿಕಾರಯುತವಾಗಿತ್ತು. ಒಂದು ದಿನದ ಹಿಂದಷ್ಟೇ ಹಾಂಕಾಂಗ್‌ ಮೇಲೆ ಸವಾರಿ ಮಾಡಿ, ಜುಜುಬಿ 38 ರನ್ನಿಗೆ ಉಡಾಯಿಸಿತ್ತು; 155 ರನ್ನುಗಳ ಭಾರೀ ಅಂತರದ ಜಯಭೇರಿ ಮೊಳಗಿಸಿತ್ತು. ಆದರೆ ಭಾರತಕ್ಕೆ ಹಾಂಕಾಂಗ್‌ನ 5 ವಿಕೆಟ್‌ ಉರುಳಿಸಲಷ್ಟೇ ಸಾಧ್ಯವಾಗಿತ್ತು. ಅಂದಹಾಗೆ ಇದು ಭಾರತ-ಪಾಕಿಸ್ಥಾನ ನಡುವಿನ ಸೂಪರ್‌ ಫೋರ್‌ ಪಂದ್ಯದ ಭವಿಷ್ಯವೂ ಅಲ್ಲ, ಮೇಲುಗೈ ಮಾನದಂಡವೂ ಅಲ್ಲ. ಭಾರತ-ಪಾಕ್‌ ಪಂದ್ಯವೆಂದರೆ ಅದು “ಡಿಫ‌ರೆಂಟ್‌ ಬಾಲ್‌ ಗೇಮ್‌’. ಇಲ್ಲಿನ ರೋಮಾಂಚನಕ್ಕೆ ಕೊನೆ ಇಲ್ಲ.

ಸಮಸ್ಯೆ ಪರಿಹಾರಗೊಂಡಿಲ್ಲ
ಭಾರತ ಆಡಿದ ಎರಡೂ ಪಂದ್ಯಗಳನ್ನು ಗೆದ್ದರೂ ಕೆಲವು ಸಮಸ್ಯೆಗಳಿಗಿನ್ನೂ ಪರಿಹಾರ ಸಿಕ್ಕಿಲ್ಲ. ಮುಖ್ಯ ವಾಗಿ ಭಾರತದ ಓಪನಿಂಗ್‌ ನಿರೀಕ್ಷಿತ ಜೋಶ್‌ ಪಡೆದುಕೊಂಡಿಲ್ಲ. ರೋಹಿತ್‌-ರಾಹುಲ್‌ ಪವರ್‌ ಪ್ಲೇ ಅವಧಿಯಲ್ಲಿ ಸಿಡಿದು ನಿಲ್ಲುವ ಅಗತ್ಯವಿದೆ. ಪಾಕ್‌ ಎದುರಿನ ಕಳೆದ ಪಂದ್ಯದಲ್ಲಿ ರಾಹುಲ್‌ “ಗೋಲ್ಡನ್‌ ಡಕ್‌’ ಸಂಕಟಕ್ಕೆ ಸಿಲುಕಿದ್ದರು. ಕಳೆದ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲೂ ರಾಹುಲ್‌ ಮೊದಲ ಎಸೆತದಲ್ಲೇ ಔಟಾಗಿದ್ದನ್ನು ಮರೆಯುವಂತಿಲ್ಲ. ಈ ಸಲವಾದರೂ ಒಂದಿಷ್ಟು ರನ್‌ ಪೇರಿಸಬೇಕಿದೆ. ಹಾಗೆಯೇ ವಿರಾಟ್‌ ಕೊಹ್ಲಿ ಮೈಚಳಿ ಬಿಟ್ಟು ಆಡುವುದು ಮುಖ್ಯ. ಟಾಪ್‌-3 ಬ್ಯಾಟರ್ ಕ್ಲಿಕ್‌ ಆದರೆ ತಂಡದ ಅರ್ಧ ಸಮಸ್ಯೆ ಪರಿಹಾರ ಕಂಡಂತೆ. ಆಗ ಸೂರ್ಯಕುಮಾರ್‌ ಯಾದವ್‌ ಇನ್ನಷ್ಟು ಬಿರುಸಿನ ಬ್ಯಾಟಿಂಗ್‌ ನಡೆಸಬಹುದಾಗಿದೆ.

ಆಲ್‌ರೌಂಡರ್‌ ರವೀಂದ್ರ ಜಡೇಜ ಗಾಯಾಳಾಗಿ ಕೂಟದಿಂದ ಹೊರಬಿದ್ದದ್ದು ಭಾರತಕ್ಕೆ ಖಂಡಿತವಾಗಿಯೂ ಹಿನ್ನಡೆ. ಕಳೆದ ಸಲ ಪಾಕಿಸ್ಥಾನ ವಿರುದ್ಧ ಅವರನ್ನು 4ನೇ ಕ್ರಮಾಂಕಕ್ಕೆ ಭಡ್ತಿ ನೀಡಲಾಗಿತ್ತು. ರಿಷಭ್‌ ಪಂತ್‌ ಅವರನ್ನು ಕೈಬಿಟ್ಟ ಕಾರಣ ಲೆಫ್ಟ್-ರೈಟ್‌ ಕಾಂಬಿನೇಶನ್‌ ರೂಪಿಸುವುದು ಇದರ ಉದ್ದೇಶವಾಗಿತ್ತು. ಆದರೆ ಈ ಬಾರಿ ಪಂತ್‌ ಆಡುವುದರಲ್ಲಿ ಅನುಮಾನವಿಲ್ಲ. ಜಡೇಜ ಬದಲು ಅಕ್ಷರ್‌ ಪಟೇಲ್‌ ಆಡುತ್ತಾರೋ ಅಥವಾ ದೀಪಕ್‌ ಹೂಡಾ ಬರುತ್ತಾರೋ ಎಂಬುದು ಖಾತ್ರಿಯಾಗಿಲ್ಲ.

ಪಾಕ್‌ ಎದುರಿನ ರೂವಾರಿಯಾಗಿ ಮೂಡಿ ಬಂದವರು ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ. ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ವಿಭಾಗಗಳೆ ರಡರಲ್ಲೂ ಸಿಡಿದು ನಿಲ್ಲುವ ಮೂಲಕ ಪಾಂಡ್ಯ ತಮ್ಮ ಪವರ್‌ ತೋರಿದ್ದರು. ಪಾಂಡ್ಯ ಅವರಿಂದ ಮತ್ತೊಮ್ಮೆ ಇಂಥದೇ ಆಟದ ನಿರೀಕ್ಷೆ ಇಡಲಾಗಿದೆ.

ವೇಗದ ಬೌಲಿಂಗ್‌ ದುರ್ಬಲ
ಭಾರತದ ವೇಗದ ಬೌಲಿಂಗ್‌ ವಿಭಾಗ ಕೂಟದಲ್ಲೇ ಅತ್ಯಂತ ದುರ್ಬಲ. ಇಲ್ಲಿ ಮೂವರನ್ನು ಬಿಟ್ಟರೆ ಮತ್ತೊಂದು ಆಯ್ಕೆಯೆಂದರೆ ಪಾಂಡ್ಯ ಮಾತ್ರ. ಭುವನೇಶ್ವರ್‌ ಕುಮಾರ್‌, ಆರ್ಷದೀಪ್‌ ಸಿಂಗ್‌ ಓಕೆ. ಆದರೆ ಆವೇಶ್‌ ಖಾನ್‌ ಸಿಕ್ಕಾಪಟ್ಟೆ ದುಬಾರಿ ಆಗುತ್ತಿದ್ದಾರೆ. ಅನನುಭವಿ ಹಾಂಕಾಂಗ್‌ ವಿರುದ್ಧವೂ ಅವರಿಗೆ ನಿಯಂತ್ರಣ ಸಾಧಿಸಲಾಗಿರಲಿಲ್ಲ. ಪಾಕ್‌ ಅಗ್ರ ಕ್ರಮಾಂಕದ ಆಟಗಾರರು ಸಿಡಿದು ನಿಂತರೆ ಸಮಸ್ಯೆ ಖಚಿತ. ಅವರ ರೈಟ್‌-ಲೆಫ್ಟ್ ಕಾಂಬಿನೇಶನ್‌ ಹೆಚ್ಚು ವೈವಿಧ್ಯಮಯವಾಗಿದೆ. ಸ್ಪಿನ್‌ ದಾಳಿಯನ್ನು ಸಮರ್ಥವಾಗಿ ನಿಭಾಯಿಸಬಲ್ಲರು. ಆದರೂ ಭಾರತ ಮೊದಲ ಪಂದ್ಯದಲ್ಲಿ ಪಾಕಿಸ್ಥಾನವನ್ನು ಆಲೌಟ್‌ ಮಾಡಿದ್ದನ್ನು ಮರೆಯುವಂತಿಲ್ಲ. ಪಾಕಿಸ್ಥಾನದ ಬೌಲಿಂಗ್‌ ಸರದಿಗೂ ಒಂದು ಹೊಡೆತ ಬಿದ್ದಿದೆ. ಸ್ಟ್ರೈಕ್‌ ಬೌಲರ್‌ ಶಹನವಾಜ್‌ ದಹಾನಿ ಗಾಯಾಳಾಗಿದ್ದು, ಈ ಪಂದ್ಯದಿಂದ ಹೊರಗುಳಿಯಲಿದ್ದಾರೆ.

ಇಂದಿನ ಪಂದ್ಯ
ಸೂಪರ್‌ ಫೋರ್‌
ಭಾರತ-ಪಾಕಿಸ್ಥಾನ
ಸ್ಥಳ: ದುಬಾೖ
ಆರಂಭ: 7.30
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಟಾಪ್ ನ್ಯೂಸ್

ಕೇರಳ ಚಲನಚಿತ್ರ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಅಡೂರ್‌ ಗೋಪಾಲಕೃಷ್ಣನ್‌ ರಾಜೀನಾಮೆ

ಕೇರಳ ಚಲನಚಿತ್ರ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಅಡೂರ್‌ ಗೋಪಾಲಕೃಷ್ಣನ್‌ ರಾಜೀನಾಮೆ

ಸೇಡಿಗಾಗಿ ಪಕ್ಷ ಸ್ಥಾಪಿಸಿಲ್ಲ, ಯಾರಿಗೂ ಹೆದರಲ್ಲ: ಜನಾರ್ದನ ರೆಡ್ಡಿ

ಸೇಡಿಗಾಗಿ ಪಕ್ಷ ಸ್ಥಾಪಿಸಿಲ್ಲ, ಯಾರಿಗೂ ಹೆದರಲ್ಲ: ಜನಾರ್ದನ ರೆಡ್ಡಿ

ಸೋಮಶೇಖರ ರೆಡ್ಡಿ ವಿರುದ್ಧ ಅತ್ತಿಗೆ ಸ್ಪರ್ಧೆ

ಸೋಮಶೇಖರ ರೆಡ್ಡಿ ವಿರುದ್ಧ ಅತ್ತಿಗೆ ಸ್ಪರ್ಧೆ

ಮತದಾರರೇ ಭ್ರಷ್ಟರಾಗಿದ್ದಾರೆ ನಾನು ಚುನಾವಣೆಗೆ ನಿಲ್ಲಲಾರೆ: ಹಳ್ಳಿ ಹಕ್ಕಿ ಹೊಸ ರಾಗ

ಮತದಾರರೇ ಭ್ರಷ್ಟರಾಗಿದ್ದಾರೆ ನಾನು ಚುನಾವಣೆಗೆ ನಿಲ್ಲಲಾರೆ: ಹಳ್ಳಿ ಹಕ್ಕಿ ಹೊಸ ರಾಗ

ಆರ್‌ಬಿಐ ಸಲಹಾ ಸಮಿತಿ ಸದಸ್ಯರಾಗಿ ವಿ.ರಾಮಚಂದ್ರ ನೇಮಕ

ಆರ್‌ಬಿಐ ಸಲಹಾ ಸಮಿತಿ ಸದಸ್ಯರಾಗಿ ವಿ.ರಾಮಚಂದ್ರ ನೇಮಕ

ರಮೇಶ್‌ ಜಾರಕಿಹೊಳಿ ಬೇನಾಮಿ ಆಸ್ತಿ ಕುರಿತು ತನಿಖೆ ಮಾಡಿಸಲಿ

ರಮೇಶ್‌ ಜಾರಕಿಹೊಳಿ ಬೇನಾಮಿ ಆಸ್ತಿ ಕುರಿತು ತನಿಖೆ ಮಾಡಿಸಲಿ

ಚಿರತೆ ಸೆರೆ ಹಿಡಿಯಲು ಕಾರ್ಯಪಡೆ ರಚನೆ: ಸರ್ಕಾರ ಆದೇಶ

ಚಿರತೆ ಸೆರೆ ಹಿಡಿಯಲು ಕಾರ್ಯಪಡೆ ರಚನೆ: ಸರ್ಕಾರ ಆದೇಶಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

thumb-4

ಪಾಕಿಸ್ಥಾನ ತಂಡಕ್ಕೆ ಆನ್ ಲೈನ್ ಕೋಚ್? ಏನಿದು ವಿಚಿತ್ರ ನಿರ್ಧಾರ?

thumb-2

ಅಂಡರ್ 19: ಅರ್ಚನಾ ಕುಟುಂಬ ಫೈನಲ್‌ ನೋಡಲು ನೆರವು ನೀಡಿದ ಪೊಲೀಸ್‌ ಅಧಿಕಾರಿ

thumb-1

ದೊಡ್ಡ ಟ್ರೋಫಿ ಇನ್ನೂ ಒಂದಿದೆ: ಶಫಾಲಿ ವರ್ಮ

ಖೇಲೋ ಇಂಡಿಯಾ ಯುವ ಕ್ರೀಡಾಕೂಟದಲ್ಲಿ ಅವ್ಯವಸ್ಥೆ

ಖೇಲೋ ಇಂಡಿಯಾ ಯುವ ಕ್ರೀಡಾಕೂಟದಲ್ಲಿ ಅವ್ಯವಸ್ಥೆ

ವಿಶ್ವಕಪ್‌ನಲ್ಲಿ ಭಾರತ‌ ಕಳಪೆ ಸಾಧನೆ: ಹಾಕಿ ಕೋಚ್‌ ರೀಡ್‌ ರಾಜೀನಾಮೆ

ವಿಶ್ವಕಪ್‌ನಲ್ಲಿ ಭಾರತ‌ ಕಳಪೆ ಸಾಧನೆ: ಹಾಕಿ ಕೋಚ್‌ ರೀಡ್‌ ರಾಜೀನಾಮೆ

MUST WATCH

udayavani youtube

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ‌ ಕೂಗು

udayavani youtube

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

udayavani youtube

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

udayavani youtube

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

udayavani youtube

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಹೊಸ ಸೇರ್ಪಡೆ

ಕೇರಳ ಚಲನಚಿತ್ರ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಅಡೂರ್‌ ಗೋಪಾಲಕೃಷ್ಣನ್‌ ರಾಜೀನಾಮೆ

ಕೇರಳ ಚಲನಚಿತ್ರ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಅಡೂರ್‌ ಗೋಪಾಲಕೃಷ್ಣನ್‌ ರಾಜೀನಾಮೆ

ಸೇಡಿಗಾಗಿ ಪಕ್ಷ ಸ್ಥಾಪಿಸಿಲ್ಲ, ಯಾರಿಗೂ ಹೆದರಲ್ಲ: ಜನಾರ್ದನ ರೆಡ್ಡಿ

ಸೇಡಿಗಾಗಿ ಪಕ್ಷ ಸ್ಥಾಪಿಸಿಲ್ಲ, ಯಾರಿಗೂ ಹೆದರಲ್ಲ: ಜನಾರ್ದನ ರೆಡ್ಡಿ

ಸೋಮಶೇಖರ ರೆಡ್ಡಿ ವಿರುದ್ಧ ಅತ್ತಿಗೆ ಸ್ಪರ್ಧೆ

ಸೋಮಶೇಖರ ರೆಡ್ಡಿ ವಿರುದ್ಧ ಅತ್ತಿಗೆ ಸ್ಪರ್ಧೆ

ಮತದಾರರೇ ಭ್ರಷ್ಟರಾಗಿದ್ದಾರೆ ನಾನು ಚುನಾವಣೆಗೆ ನಿಲ್ಲಲಾರೆ: ಹಳ್ಳಿ ಹಕ್ಕಿ ಹೊಸ ರಾಗ

ಮತದಾರರೇ ಭ್ರಷ್ಟರಾಗಿದ್ದಾರೆ ನಾನು ಚುನಾವಣೆಗೆ ನಿಲ್ಲಲಾರೆ: ಹಳ್ಳಿ ಹಕ್ಕಿ ಹೊಸ ರಾಗ

ಆರ್‌ಬಿಐ ಸಲಹಾ ಸಮಿತಿ ಸದಸ್ಯರಾಗಿ ವಿ.ರಾಮಚಂದ್ರ ನೇಮಕ

ಆರ್‌ಬಿಐ ಸಲಹಾ ಸಮಿತಿ ಸದಸ್ಯರಾಗಿ ವಿ.ರಾಮಚಂದ್ರ ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.