ದುಬಾೖಯಲ್ಲಿ ಏಶ್ಯಕಪ್ ಕ್ರಿಕೆಟ್
Team Udayavani, Feb 29, 2020, 5:44 AM IST
ಕೋಲ್ಕತಾ: ದುಬಾೖಯಲ್ಲಿ ಮುಂದಿನ ಏಶ್ಯಕಪ್ ಕ್ರಿಕೆಟ್ ಕೂಟ ನಡೆಯಲಿದೆ. ಈ ಕೂಟದಲ್ಲಿ ಭಾರತ ಮತ್ತು ಪಾಕಿಸ್ಥಾನ ತಂಡಗಳು ಭಾಗವಹಿಸಲಿವೆ ಎಂದು ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ)ಯ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಸೆಪ್ಟಂಬರ್‌ನಲ್ಲಿ ನಡೆಯಲಿರುವ ಈ ಕೂಟವು ಪಾಕಿಸ್ಥಾನದ ಆತಿಥ್ಯದಲ್ಲಿ ನಡೆಯಲಿದೆ. ಭದ್ರತಾ ಕಾರಣಗಳಿಗಾಗಿ ಭಾರತವು ಪಾಕಿಸ್ಥಾನಕ್ಕೆ ಪ್ರಯಾಣಿಸಲು ಸಾಧ್ಯವಿಲ್ಲವೆಂದು ಬಿಸಿಸಿಐ ಸ್ಪಷ್ಟಪಡಿಸಿದ್ದರಿಂದ ಈ ಕೂಟವನ್ನು ದುಬಾೖಗೆ ಸ್ಥಳಾಂತರಿಸಲಾಗಿದೆ. ಏಶ್ಯಕಪ್ ಕೂಟದ ಆತಿಥ್ಯವನ್ನು ಪಾಕಿಸ್ಥಾನ ವಹಿಸಿದರೆ ನನಗೇನೂ ಸಮಸ್ಯೆಯಿಲ್ಲ. ಆದರೆ ಈ ಕೂಟ ತಟಸ್ಥ ತಾಣದಲ್ಲಿ ನಡೆಯಬೇಕಾಗಿದೆ ಎಂದು ಬಿಸಿಸಿಐ ಈ ಹಿಂದೆ ಹೇಳಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬುಮ್ರಾ ಸತತ 7 ಐಪಿಎಲ್ ಋತುಗಳಲ್ಲಿ 15 ಪ್ಲಸ್ ವಿಕೆಟ್ ಉರುಳಿಸಿದ ಭಾರತದ ಮೊದಲ ಬೌಲರ್
ಪಾಂಡ್ಯ-ಸಂಜು ಪಡೆಗಳ ಕ್ವಾಲಿಫೈಯರ್ ಪವರ್; ಇಂದು ಗುಜರಾತ್-ರಾಜಸ್ಥಾನ್ ಮುಖಾಮುಖಿ
ವನಿತಾ ಟಿ20 ಚಾಲೆಂಜರ್ ಸರಣಿ: ಸೂಪರ್ ನೋವಾಗೆ ಸೂಪರ್ ಗೆಲುವು
ವನಿತೆಯರ 100 ಮೀ. ಹರ್ಡಲ್: ಜ್ಯೋತಿ ರಾಷ್ಟ್ರೀಯ ದಾಖಲೆ
ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಮ್: ನವೋಮಿ ಒಸಾಕಾ ಪತನ