ಏಶ್ಯ ಕಪ್ ಹಾಕಿ: ಭಾರತ ಫೈನಲಿಗೆ
Team Udayavani, Nov 4, 2017, 12:11 PM IST
ಹೊಸದಿಲ್ಲಿ: ಆತಿಥೇಯ ಮತ್ತು ಹಾಲಿ ಚಾಂಪಿಯನ್ ಜಪಾನ್ ತಂಡವನ್ನು 4-2 ಗೋಲುಗಳಿಂದ ಸೋಲಿಸಿದ ಭಾರತೀಯ ವನಿತಾ ಹಾಕಿ ತಂಡವು ಏಶ್ಯ ಕಪ್ ಹಾಕಿ ಕೂಟದ ಫೈನಲ್ ಹಂತಕ್ಕೇರಿತು.
ರವಿವಾರ ನಡೆಯುವ ಫೈನಲ್ ಹೋರಾಟದಲ್ಲಿ ಭಾರತವು ಚೀನದ ಸವಾಲನ್ನು ಎದುರಿಸಲಿದೆ. ಇದು 2009ರ ಫೈನಲ್ ಹೋರಾಟದ ಪುನರಾವರ್ತನೆಯಾಗಲಿದೆ. 2009ರ ಫೈನಲ್ನಲ್ಲಿ ಭಾರತ 3-5 ಗೋಲುಗಳಿಂದ ಸೋತಿತ್ತು. ಈ ಬಾರಿ ಸೇಡು ತೀರಿಸಿಕೊಳ್ಳುವ ಅವಕಾಶ ಭಾರತಕ್ಕೆ ಲಭಿಸಿದೆ. ಭಾರತವು ಲೀಗ್ ಹಂತದಲ್ಲಿ ಚೀನವನ್ನು 4-1 ಗೋಲುಗಳಿಂದ ಸೋಲಿಸಿತ್ತು. ಹಾಗಾಗಿ ಭಾರತಕ್ಕೆ ಪ್ರಶಸ್ತಿ ಗೆಲ್ಲಲು ಒಳ್ಳೆಯ ಅವಕಾಶ ಸಿಕ್ಕಿದೆ. ಪ್ರಶಸ್ತಿ ಗೆದ್ದ ತಂಡವು 2018ರಲ್ಲಿ ಇಂಗ್ಲೆಂಡ್ನಲ್ಲಿ ನಡೆಯುವ ವಿಶ್ವಕಪ್ನಲ್ಲಿ ಆಡುವ ಅರ್ಹತೆ ಗಳಿಸಲಿದೆ.
ಗುರ್ಜೀತ್ ಕೌರ್ (7ನೇ, 9ನೇ) ಅವಳಿ ಗೋಲು ಹೊಡೆದರೆ ನವಜೋತ್ ಕೌರ್ (9ನೇ) ಮತ್ತು ಲಾಲ್ರೆಶ್ಮಿಯಾಮಿ (38ನೇ) ಗೋಲು ಹೊಡೆದ ಇನ್ನಿಬ್ಬರು ಆಟಗಾರ್ತಿಯರಾಗಿದ್ದಾರೆ. ಇವರೆಲ್ಲರ ಉತ್ತಮ ನಿರ್ವಹಣೆಯಿಂದಾಗಿ ಭಾರತ ನಾಲ್ಕನೇ ಬಾರಿ ಫೈನಲಿಗೇರಿತು. 2004ರಲ್ಲಿ ಪ್ರಶಸ್ತಿ ಜಯಿಸಿದ್ದ ಭಾರತ 1999 ಮತ್ತು 2009ರಲ್ಲಿ ರನ್ನರ್ ಅಪ್ ಸ್ಥಾನ ಪಡೆದಿತ್ತು.
ಭಾರತವು ಸಿಂಗಾಪುರ (10-0), ಚೀನ (4-1) ಮತ್ತು ಮಲೇಶ್ಯವನ್ನು 2-0 ಗೋಲುಗಳಿಂದ ಸೋಲಿಸಿ ನಾಕೌಟ್ ಹಂತಕ್ಕೇರಿತ್ತು. ಕ್ವಾರ್ಟರ್ಫೈನಲ್ನಲ್ಲಿ ಭಾರತವು ಕಝಾಕ್ಸ್ಥಾನವನ್ನು 7-1 ಗೋಲುಗಳಿಂದ ಭರ್ಜರಿಯಾಗಿ ಉರುಳಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ
CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ
IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?
IPL; ಪಂಜಾಬ್ ಕಿಂಗ್ಸ್-ಮುಂಬೈ ಇಂಡಿಯನ್ಸ್ : ಒಂದೇ ದೋಣಿಯ ಪಯಣಿಗರು