ಏಶ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌: ವಿಶ್ವ ವಿಜೇತನನ್ನು ಕೆಡವಿದ ಕವಿಂದರ್‌


Team Udayavani, Apr 23, 2019, 11:51 AM IST

KAVINDER-SINGH-BISHT-1

ಬ್ಯಾಂಕಾಕ್‌: ಹಾಲಿ ವಿಶ್ವ ಚಾಂಪಿಯನ್‌, ಕಜಾಕ್‌ಸ್ಥಾನದ ಕೈರತ್‌ ಯೆರಲಿಯೇವ್‌ ಅವರನ್ನು ಮಣಿಸುವ ಮೂಲಕ “ಏಶ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌’ನಲ್ಲಿ ಭಾರತದ ಕವಿಂದರ್‌ ಸಿಂಗ್‌ ಬಿಷ್ಟ್ (56 ಕೆಜಿ) ಮೊದಲ ಏಶ್ಯನ್‌ ಪದಕದ ಹಾದಿಯನ್ನು ಸುಗಮಗೊಳಿಸಿದ್ದಾರೆ.

ಮೂಲತಃ ಉತ್ತರಾಖಂಡ್‌ನ‌ವರಾದ ಕವಿಂದರ್‌, ಫಿನ್ಲಂಡ್‌ನ‌ಲ್ಲಿ ನಡೆದ ಗೀಬೀ ಟೂರ್ನಿಯಲ್ಲಿ ಬಂಗಾರ ಗೆದ್ದ ಹೆಗ್ಗಳಿಕೆ ಹೊಂದಿದ್ದಾರೆ. ಆದರೆ ಯೆರಲಿಯೇವ್‌ ಈವರೆಗೆ ಏಶ್ಯನ್‌ ಬಾಕ್ಸಿಂಗ್‌ನಲ್ಲಿ 2 ಕಂಚಿನ ಪದಕಗಳನ್ನಷ್ಟೇ ಜಯಿಸಿದ್ದಾರೆ. ಕಳೆದ ಏಶ್ಯನ್‌ ಗೇಮ್ಸ್‌ನಲ್ಲೂ ಅವರು ಕಂಚನ್ನೇ ಗೆದ್ದಿದ್ದರು.

ಪಂಘಲ್‌ ಪದಕ ಖಾತ್ರಿ
52 ಕೆಜಿ ವಿಭಾಗದಲ್ಲಿ ಸ್ಪರ್ಧೆಗಿಳಿದಿರುವ ಅಮಿತ್‌ ಪಂಘಲ್‌, ಒಲಿಂಪಿಕ್‌ ಚಾಂಪಿಯನ್‌ ಹಸನ್‌ಬಾಯ್‌ ದುಸ್ಮತೋವ್‌ ಅವರನ್ನು 3-2ರಿಂದ ಸೋಲಿಸಿ ಪದಕವನ್ನು ಖಾತ್ರಿಪಡಿಸಿದ್ದಾರೆ. 2015ರ ಕೂಟದಲ್ಲಿ ಪಂಘಲ್‌ ಕಂಚಿನ ಪದಕ ಜಯಿಸಿದ್ದರು. ಉಜ್ಬೆಕಿಸ್ಥಾನದ ದುಸ್ಮತೋವ್‌ ಕಳೆದ ಏಶ್ಯನ್‌ ಗೇಮ್ಸ್‌ ಫೈನಲ್‌ನಲ್ಲಿ ಪಂಘಲ್‌ ವಿರುದ್ಧ ಸೋಲನುಭವಿಸಿ ಚಿನ್ನ ಕಳೆದುಕೊಂಡಿದ್ದರು.
ರಾಷ್ಟ್ರೀಯ ಚಾಂಪಿಯನ್‌ ದೀಪಕ್‌ ಸಿಂಗ್‌ (49 ಕೆಜಿ) ಕೂಡ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಅಫ್ಘಾನಿಸ್ಥಾನದ ರಮಿಶ್‌ ರೆಹಮಾನಿ ಗಾಯಾಳಾದ್ದರಿಂದ ದೀಪಕ್‌ಗೆ ವಾಕ್‌ಓವರ್‌ ಲಭಿಸಿತು. ರೋಹಿತ್‌ ತೋಕಾಸ್‌ (64 ಕೆಜಿ) ಮಂಗೋಲಿಯಾದ ಚಿಂಜೋರಿಗ್‌ ಬಾತರ್ಸುಕ್‌ ವಿರುದ್ಧ ದಿಟ್ಟ ಹೋರಾಟ ನೀಡಿಯೂ ಕ್ವಾರ್ಟರ್‌ ಫೈನಲ್‌ನಲ್ಲಿ 2-3 ಅಂತರದಿಂದ ಎಡವಿದರು.

ಸೆಮಿಫೈನಲ್‌ಗೆ ಸೋನಿಯಾ
ವನಿತಾ ವಿಭಾಗದ ಸ್ಪರ್ಧೆಯಲ್ಲಿ ಸೋನಿಯಾ ಚಾಹಲ್‌ (57 ಕೆಜಿ) ಸೆಮಿಫೈನಲ್‌ ತಲುಪಿದ್ದಾರೆ. ಅವರು ಕೊರಿಯಾದ ಜೊ ಸನ್‌ ಹ್ವಾ ವಿರುದ್ಧ ಜಯ ಸಾಧಿಸಿದರು.
ಆದರೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದ ಲೊವಿÉನಾ ಬೊರ್ಗೊಹೈನ್‌ (69 ಕೆಜಿ) ಕ್ವಾರ್ಟರ್‌ ಫೈನಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್‌, ತೈವಾನ್‌ನ ಚೆನ್‌ ನೀನ್‌ ಚಿನ್‌ ವಿರುದ್ಧ 5-0 ಅಂತರದಿಂದ ಪರಾಭವಗೊಂಡರು.
ವನಿತೆಯರ ಮತ್ತೂಂದು ಸ್ಪರ್ಧೆಯಲ್ಲಿ ಸೀಮಾ ಪೂನಿಯ (+81 ಕೆಜಿ) ಚೀನದ ಯಾಂಗ್‌ ಕ್ಸಿಯೋಲಿ ವಿರುದ್ಧ 0-5 ಅಂತರದಿಂದ ಪರಾಭವಗೊಂಡರು.

ಟಾಪ್ ನ್ಯೂಸ್

2drugs

ಮೂಡಿಗೆರೆ: ಒಣ ಗಾಂಜಾ ಸಹಿತ ಆರೋಪಿ ಬಂಧನ

1-fsdfds

ಹಿಂದೂಗಳು ಹಿಂದೂಗಳಾಗಿ ಉಳಿಯಲು ‘ಅಖಂಡ’ ರಾಷ್ಟ್ರ ಮಾಡಬೇಕು: ಭಾಗವತ್

1jescon

ಕುಷ್ಟಗಿಯಲ್ಲಿ ಜೆಸ್ಕಾಂ ಯಡವಟ್ಟು:  ಗ್ರಾಹಕರಿಗೆ ಬಡ್ಡಿಯ ಹೊರೆ

ಲಾಭಿಲ್ಲದ ವ್ಯಾಪಾರಾ ಮಾಡಾಕ್‌ ಅವರೇನು ರೈತರಾ?

ಲಾಭಿಲ್ಲದ ವ್ಯಾಪಾರಾ ಮಾಡಾಕ್‌ ಅವರೇನು ರೈತರಾ?

president Kovind

ನ್ಯಾಯಾಧೀಶರ ಹೇಳಿಕೆಗಳಲ್ಲಿ ಅತ್ಯಂತ ವಿವೇಚನೆ ಅಗತ್ಯ: ರಾಷ್ಟ್ರಪತಿ ಕೋವಿಂದ್

ಹೆಂಡ್ತಿಗೆ ಹೊಡೆಯೋದು ಸರಿ ಅಂದ್ರು ನಮ್ಮವರು! ಸಮೀಕ್ಷೆ ವರದಿ ಪ್ರಕಟ

ಹೆಂಡ್ತಿಗೆ ಹೊಡೆಯೋದು ಸರಿ ಅಂದ್ರು ನಮ್ಮವರು! ಸಮೀಕ್ಷೆ ವರದಿ ಪ್ರಕಟ

hkjkhgf

ಕೊರೊನಾಕ್ಕಿಂತ ಅಪಾಯಕಾರಿ ಈ ಒಮಿಕ್ರಾನ್‌ : ಏನಿದರ ಸ್ವರೂಪ, ಏಕೆ ಆತಂಕ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಶ್ವ ಟೇಬಲ್‌ ಟೆನಿಸ್‌: ಮಣಿಕಾ-ಅರ್ಚನಾ ಮುನ್ನಡೆ

ವಿಶ್ವ ಟೇಬಲ್‌ ಟೆನಿಸ್‌: ಮಣಿಕಾ-ಅರ್ಚನಾ ಮುನ್ನಡೆ

ಜೂನಿಯರ್‌ ವಿಶ್ವಕಪ್‌ ಹಾಕಿ : ಕ್ವಾ.ಫೈನಲ್‌ಗೆ ಭಾರತ

ಜೂನಿಯರ್‌ ವಿಶ್ವಕಪ್‌ ಹಾಕಿ : ಕ್ವಾ.ಫೈನಲ್‌ಗೆ ಭಾರತ

ಇಂಡೋನೇಶ್ಯ ಓಪನ್‌ : ಸೆಮಿಯಲ್ಲಿ ಎಡವಿದ ಪಿ.ವಿ. ಸಿಂಧು

ಇಂಡೋನೇಶ್ಯ ಓಪನ್‌ : ಸೆಮಿಯಲ್ಲಿ ಎಡವಿದ ಪಿ.ವಿ. ಸಿಂಧು

ವನಿತಾ ಚಾಲೆಂಜರ್‌ ಕ್ರಿಕೆಟ್‌ ಸರಣಿ: ಮಂಧನಾ, ಶಫಾಲಿ, ಕೌರ್‌ ಗೈರು

ವನಿತಾ ಚಾಲೆಂಜರ್‌ ಕ್ರಿಕೆಟ್‌ ಸರಣಿ: ಮಂಧನಾ, ಶಫಾಲಿ, ಕೌರ್‌ ಗೈರು

1-asads

ಕೋವಿಡ್ ರೂಪಾಂತರ: ಮಹಿಳಾ ಏಕದಿನ ವಿಶ್ವಕಪ್‌ ಅರ್ಹತಾ ಪಂದ್ಯಗಳು ರದ್ದು

MUST WATCH

udayavani youtube

ಎರೆಹುಳು ಸಾಕಾಣಿಕೆ ಮಾಡಿ ಭೂಮಿಯ ಫಲವತ್ತತೆ ಹೆಚ್ಚಿಸಿ, ಕೈತುಂಬಾ ಆದಾಯವೂ ಗಳಿಸಿ

udayavani youtube

ಬೆಂಗಳೂರಿನಿಂದ ಪಾಟ್ನಾಕ್ಕೆ 139 ಪ್ರಯಾಣಿಕರನ್ನು ಹೊತ್ತ ವಿಮಾನ ತುರ್ತು ಭೂಸ್ಪರ್ಶ

udayavani youtube

Shree Chamundeshwari Kshetra Arikodi

udayavani youtube

ಮೈಮೇಲೆ ದೇವರು ಬಂದಿದ್ದಾರೆ ಎಂದು ಲಸಿಕೆ ಹಾಕಲು ಬಂದವರನ್ನೇ ಯಾಮಾರಿಸಿದ ವ್ಯಕ್ತಿ

udayavani youtube

ಕಾರು ಶೋರೂಂ ಒಳಗೆ ನುಗ್ಗಿದ ಕಾಡು ಹಂದಿ!

ಹೊಸ ಸೇರ್ಪಡೆ

2drugs

ಮೂಡಿಗೆರೆ: ಒಣ ಗಾಂಜಾ ಸಹಿತ ಆರೋಪಿ ಬಂಧನ

1-fsdfds

ಹಿಂದೂಗಳು ಹಿಂದೂಗಳಾಗಿ ಉಳಿಯಲು ‘ಅಖಂಡ’ ರಾಷ್ಟ್ರ ಮಾಡಬೇಕು: ಭಾಗವತ್

1jescon

ಕುಷ್ಟಗಿಯಲ್ಲಿ ಜೆಸ್ಕಾಂ ಯಡವಟ್ಟು:  ಗ್ರಾಹಕರಿಗೆ ಬಡ್ಡಿಯ ಹೊರೆ

ಲಾಭಿಲ್ಲದ ವ್ಯಾಪಾರಾ ಮಾಡಾಕ್‌ ಅವರೇನು ರೈತರಾ?

ಲಾಭಿಲ್ಲದ ವ್ಯಾಪಾರಾ ಮಾಡಾಕ್‌ ಅವರೇನು ರೈತರಾ?

president Kovind

ನ್ಯಾಯಾಧೀಶರ ಹೇಳಿಕೆಗಳಲ್ಲಿ ಅತ್ಯಂತ ವಿವೇಚನೆ ಅಗತ್ಯ: ರಾಷ್ಟ್ರಪತಿ ಕೋವಿಂದ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.