Udayavni Special

ಭಜರಂಗ್‌ ಬಂಗಾರದ ರಂಗು


Team Udayavani, Aug 20, 2018, 6:00 AM IST

pti8.jpg

ಜಕಾರ್ತಾ: ಹರ್ಯಾಣದ ಜಗಜಟ್ಟಿ, 24ರ ಹರೆಯದ ಭಜರಂಗ್‌ ಪೂನಿಯ ಜಕಾರ್ತಾ ಏಶ್ಯನ್‌ ಗೇಮ್ಸ್‌ನಲ್ಲಿ ಭಾರತದ ಬಂಗಾರದ ಖಾತೆ ತೆರೆದಿದ್ದಾರೆ. ರವಿವಾರದುದ್ದಕ್ಕೂ ನಡೆದ 65 ಕೆಜಿ ಫ್ರೀಸ್ಟೈಲ್‌ ಕುಸ್ತಿ ಸ್ಪರ್ಧೆಯಲ್ಲಿ ಪ್ರಚಂಡ ಪ್ರದರ್ಶನಗೈದ ಅವರು ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಕೂಟಕ್ಕೂ ಮೊದಲು ಬಂಗಾರದ ಸಾಧನೆಗೈಯುವುದಾಗಿ ಹೇಳಿದ್ದ ಭಜರಂಗ್‌ ಈಗ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ.

ಅತ್ಯಂತ ಕುತೂಹಲಕಾರಿಯಾಗಿ ಸಾಗಿದ ಅಂತಿಮ ಪಂದ್ಯದಲ್ಲಿ ಭಜರಂಗ್‌ ಪೂನಿಯ ಜಪಾನಿನ ದೈಚಿ ತಕತಾನಿ ಅವರನ್ನು 11-8 ಅಂಕಗಳ ಅಂತರದಿಂದ ಚಿತ್‌ ಮಾಡಿದರು. ಪ್ರಚಂಡ ಆರಂಭ ಪಡೆದ ಭಜರಂಗ್‌ 6-0 ಅಂತರದಿಂದ ಮುನ್ನುಗ್ಗಿದಾಗ ಸುಲಭದಲ್ಲೇ ಚಿನ್ನ ಗೆಲ್ಲುತ್ತಾರೆಂಬ ನಿರೀಕ್ಷೆ ಮೂಡಿತ್ತು. ಆದರೆ ಈ ಹಂತದಲ್ಲಿ ಜಪಾನಿ ಎದುರಾಳಿ ಅಮೋಘ ರೀತಿಯಲ್ಲಿ ತಿರುಗಿ ಬಿದ್ದರು. ಅವರೂ ಸತತ 6 ಅಂಕ ಸಂಪಾದಿಸಿ ಪಂದ್ಯವನ್ನು 6-6 ಸಮಬಲಕ್ಕೆ ತಂದು ನಿಲ್ಲಿಸಿದರು.

ಮುಂದಿನ ಹಂತದಲ್ಲಿ ಭಜರಂಗ್‌ ಪೂನಿಯ ರಕ್ಷಣಾತ್ಮಕ ಹೋರಾಟಕ್ಕಿಳಿದದ್ದು ಲಾಭವಾಗಿ ಪರಿಣಮಿಸಿತು. ತಾಂತ್ರಿಕವಾಗಿ ಹೆಚ್ಚು ಪರಿಣಾಮಕಾರಿ ಪಟ್ಟುಗಳನ್ನು ಪ್ರಯೋಗಿಸಿ ಜಪಾನಿ ಕುಸ್ತಿಪಟುವಿಗೆ ಸುಸ್ತು ಹೊಡೆಸಿದರು. ಇದು ಏಶ್ಯಾಡ್‌ನ‌ಲ್ಲಿ ಭಜರಂಗ್‌ಗೆ ಒಲಿದ ಸತತ 2ನೇ ಪದಕ. ಕಳೆದ ಸಲ ಕಂಚಿನ ಪದಕ ಜಯಿಸಿದ್ದರು.

ಫೈನಲ್‌ ಹಾದಿಯಲ್ಲಿ ಭಜರಂಗ್‌ ಪೂನಿಯ ಉಜ್ಬೆಕಿಸ್ಥಾನದ ಸಿರೋಜಿದ್ದಿನ್‌ ಖಸನೋವ್‌ (13-3), ತಜಿಕಿಸ್ಥಾನದ ಫೈಜೀವ್‌ ಅದ್ದುಲ್‌ಕೋಸಿಮ್‌ (12-2) ಮತ್ತು ಮಂಗೋಲಿಯದ ಎನ್‌ ಬಟಾ¾ಗ್ನೆ„ ಬಶುಲು (10-0) ಅವರನ್ನು ಭಾರೀ ಅಂತರದಲ್ಲಿ ಮಣಿಸಿದ್ದರು. ಹೀಗಾಗಿ ಸಹಜವಾಗಿಯೇ ಭಜರಂಗ್‌ ಮೇಲೆ ಬಂಗಾರದ ನಿರೀಕ್ಷೆ ಇತ್ತು. ಒಲಿಂಪಿಕ್ಸ್‌ನಲ್ಲಿ 2 ಪದಕ ಗೆದ್ದ ಭಾರತ ಏಕೈಕ ಕ್ರೀಡಾಪಟು ಎಂಬ ಹೆಗ್ಗಳಿಕೆಯುಳ್ಳ ಸುಶೀಲ್‌ ಕುಮಾರ್‌ ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋತ ಆಘಾತಲ್ಲಿದ್ದ ಭಾರತೀಯರಲ್ಲಿ ಪೂನಿಯ ಹೊಸ ಭರವಸೆ ಮೂಡಿಸಿದರು. ಇತರ ಕುಸ್ತಿಪಟುಗಳಾದ ಸಂದೀಪ್‌ ತೋಮರ್‌ (57 ಕೆಜಿ), ಮೌಸಮ್‌ ಖತ್ರಿ (97 ಕೆಜಿ) ಮತ್ತು ಪವನ್‌ ಕುಮಾರ್‌ (86 ಕೆಜಿ) ಕೂಡ ಬೇಗನೇ ನಿರ್ಗಮಿಸಿದ್ದರು. “ರೆಪಿಶೇಜ್‌’ನಲ್ಲಿ ಪವನ್‌ ಕುಮಾರ್‌ಗೆ ಕಂಚಿನ ಅವಕಾಶ ಇತ್ತಾದರೂ ಅವರು ಈ ಇಂಡೋನೇಶ್ಯ ಸ್ಪರ್ಧಿ ವಿರುದ್ಧ 0-11 ಅಂತರದ ಸೋಲು ಕಾಣಬೇಕಾಯಿತು.

ಸತತ 4ನೇ ಬಂಗಾರ
ಇದು ವಿಶ್ವ ಮಟ್ಟದಲ್ಲಿ ಭಜರಂಗ್‌ ಪೂನಿಯ ಗೆದ್ದ ಸತತ 4ನೇ ಚಿನ್ನದ ಪದಕ ಎಂಬುದು ವಿಶೇಷ. ಜಕಾರ್ತಾಕ್ಕೆ ಬರುವ ಮುನ್ನ ಅವರು ಗೋಲ್ಡ್‌ಕೋಸ್ಟ್‌ ಕಾಮನ್ವೆಲ್ತ್‌ ಗೇಮ್ಸ್‌, ಟಿಬಿಲಿಸಿ ಗ್ರ್ಯಾನ್‌ಪ್ರಿ (ಜಾರ್ಜಿಯಾ) ಮತ್ತು ಯಾಸರ್‌ ಡೊಗು ಇಂಟರ್‌ನ್ಯಾಶನಲ್‌ ಚಾಂಪಿಯನ್‌ಶಿಪ್‌ನಲ್ಲಿ (ಇಸ್ತಾನ್‌ಬುಲ್‌)ಬಂಗಾರ ಜಯಿಸಿದ್ದರು.

ಅಪರೂಪದ ಕುಸ್ತಿ ಸಾಧಕ
ಭಜರಂಗ್‌ ಏಶ್ಯಾಡ್‌ ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದ ಭಾರತದ 7ನೇ ಸಾಧಕ. ಇದಕ್ಕೂ ಮುನ್ನ ಯೋಗೇಶ್ವರ್‌ ದತ್‌ (2014), ಕರ್ತಾರ್‌ ಸಿಂಗ್‌ (1978, 1986), ಸತ್ಪಾಲ್‌ ಸಿಂಗ್‌ (1962), ರಾಜಿಂದರ್‌ ಸಿಂಗ್‌ (1978), ಚಾಂಗಿª ರಾಮ್‌ (1970) ಮತ್ತು ಮಾರುತಿ ಮಾನೆ (1962) ಈ ಸಾಧನೆಗೈದಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Punjab-2

IPL-2020ಯ ಮೊದಲ ಸೂಪರ್ ಓವರ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್

Stoins1

ಅರಬ್ ನಾಡಿನಲ್ಲಿ ಸ್ಟೊಯ್ನ್ಸ್ ಬಿರುಗಾಳಿ ; ಪಂಜಾಬ್ ಗೆಲುವಿಗೆ 158 ಗುರಿ

sukbir

ಕೃಷಿ ಮಸೂದೆಗೆ ಅಂಕಿತ ಹಾಕಬೇಡಿ,ರೈತರು ನಮ್ಮನ್ನೆಂದು ಕ್ಷಮಿಸಲ್ಲ:ರಾಷ್ಟ್ರಪತಿಗೆ ಬಾದಲ್ ಮನವಿ

NEWS-TDY-01

ಚೆನ್ನೈ ವಿರುದ್ಧದ ಮೊದಲ ಪಂದ್ಯಕ್ಕೆ ರಾಜಸ್ಥಾನ್ ತಂಡಕ್ಕೆ ಬಟ್ಲರ್ ಅಲಭ್ಯ

ಚಿತ್ರದುರ್ಗ ಜಿಲ್ಲೆಯಲ್ಲಿ 254 ಜನರಿಗೆ ಕೋವಿಡ್ ಪಾಸಿಟಿವ್! 421 ಮಂದಿ ಗುಣಮುಖ

ಚಿತ್ರದುರ್ಗ ಜಿಲ್ಲೆಯಲ್ಲಿ 254 ಜನರಿಗೆ ಕೋವಿಡ್ ಪಾಸಿಟಿವ್! 421 ಮಂದಿ ಗುಣಮುಖ

punjab-delhin

ಐಪಿಎಲ್ 2020: ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ

ಚಾಮರಾಜನಗರ : ಕೋವಿಡ್ ಸೋಂಕಿಗೆ ಓರ್ವ ಸಾವು, 73 ಮಂದಿ ಗುಣಮುಖ, 66 ಹೊಸ ಪ್ರಕರಣ ದೃಢ

ಚಾಮರಾಜನಗರ : ಕೋವಿಡ್ ಸೋಂಕಿಗೆ ಓರ್ವ ಸಾವು, 73 ಮಂದಿ ಗುಣಮುಖ, 66 ಹೊಸ ಪ್ರಕರಣ ದೃಢ






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Stoins1

ಅರಬ್ ನಾಡಿನಲ್ಲಿ ಸ್ಟೊಯ್ನ್ಸ್ ಬಿರುಗಾಳಿ ; ಪಂಜಾಬ್ ಗೆಲುವಿಗೆ 158 ಗುರಿ

NEWS-TDY-01

ಚೆನ್ನೈ ವಿರುದ್ಧದ ಮೊದಲ ಪಂದ್ಯಕ್ಕೆ ರಾಜಸ್ಥಾನ್ ತಂಡಕ್ಕೆ ಬಟ್ಲರ್ ಅಲಭ್ಯ

punjab-delhin

ಐಪಿಎಲ್ 2020: ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ

ಐಪಿಎಲ್‌ ಟೀವಿ ವೀಕ್ಷಣೆ ಗರಿಷ್ಠ: ಬ್ರಿಜೇಶ್‌

ಈ ಬಾರಿ ಐಪಿಎಲ್‌ ಟೀವಿ ವೀಕ್ಷಣೆ ಗರಿಷ್ಠ: ಬ್ರಿಜೇಶ್‌

IPL ಕಲರವ : ಮೊದಲ ಪಂದ್ಯ ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್

IPL ಕಲರವ : ಮೊದಲ ಪಂದ್ಯ ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್

MUST WATCH

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತ

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!



ಹೊಸ ಸೇರ್ಪಡೆ

Punjab-2

IPL-2020ಯ ಮೊದಲ ಸೂಪರ್ ಓವರ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್

ತಮಿಳುನಾಡು ಮಾದರಿಯಲ್ಲಿ ತಮಟೆ ಕಲಾವಿದರಿಗೆ ಸೌಲಭ್ಯ ಕಲ್ಪಿಸಲು ಹೋರಾಟ: ರವಿಶಂಕರ್

ತಮಿಳುನಾಡು ಮಾದರಿಯಲ್ಲಿ ತಮಟೆ ಕಲಾವಿದರಿಗೆ ಸೌಲಭ್ಯ ಕಲ್ಪಿಸಲು ಹೋರಾಟ: ರವಿಶಂಕರ್

Stoins1

ಅರಬ್ ನಾಡಿನಲ್ಲಿ ಸ್ಟೊಯ್ನ್ಸ್ ಬಿರುಗಾಳಿ ; ಪಂಜಾಬ್ ಗೆಲುವಿಗೆ 158 ಗುರಿ

sukbir

ಕೃಷಿ ಮಸೂದೆಗೆ ಅಂಕಿತ ಹಾಕಬೇಡಿ,ರೈತರು ನಮ್ಮನ್ನೆಂದು ಕ್ಷಮಿಸಲ್ಲ:ರಾಷ್ಟ್ರಪತಿಗೆ ಬಾದಲ್ ಮನವಿ

NEWS-TDY-01

ಚೆನ್ನೈ ವಿರುದ್ಧದ ಮೊದಲ ಪಂದ್ಯಕ್ಕೆ ರಾಜಸ್ಥಾನ್ ತಂಡಕ್ಕೆ ಬಟ್ಲರ್ ಅಲಭ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.