ಏಶ್ಯನ್‌ ಶೂಟಿಂಗ್‌: ಸೌರಭ್‌ ರಜತ

Team Udayavani, Nov 12, 2019, 5:05 AM IST

ದೋಹಾ (ಕತಾರ್‌): ಭಾರತದ ಯುವ ಶೂಟರ್‌ ಸೌರಭ್‌ ಚೌಧರಿ 14ನೇ ಏಶ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಅವರು 10 ಮೀ. ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಈ ಸಾಧನೆ ಮಾಡಿದರು.

ವಿಶ್ವಕಪ್‌ ಮತ್ತು ಏಶ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ 17ರ ಹರೆಯದ ಸೌರಭ್‌ ಚೌಧರಿ, ಸೋಮವಾರದ ಸ್ಪರ್ಧೆಯಲ್ಲಿ 244.5 ಅಂಕ ಗಳಿಸಿ ದ್ವಿತೀಯ ಸ್ಥಾನಿಯಾದರು. ಉತ್ತರ ಕೊರಿಯಾದ ಕಿಮ್‌ ಸಾಂಗ್‌ ಗುಕ್‌ ವಿಶ್ವದಾಖಲೆಯೊಂದಿಗೆ ಚಿನ್ನಕ್ಕೆ ಗುರಿ ಇರಿಸಿದರು (246.5). ಇರಾನ್‌ನ ಫೊರೌಗಿ ಜಾವೇದ್‌ ಕಂಚು ಗೆದ್ದರು (221.8).

ಅರ್ಹತಾ ಸುತ್ತಿನಲ್ಲಿ ತಲಾ 583 ಅಂಕ ಗಳಿಸಿದ ಸೌರಭ್‌ ಚೌಧರಿ ಮತ್ತು ಅಭಿಷೇಕ್‌ ವರ್ಮ ಕ್ರಮವಾಗಿ 7ನೇ ಹಾಗೂ 6ನೇ ಸ್ಥಾನದೊಂದಿಗೆ ಫೈನಲ್‌ ತಲುಪಿದ್ದರು. ಆದರೆ 8 ಶೂಟರ್‌ಗಳ ಫೈನಲ್‌ನಲ್ಲಿ ವರ್ಮ 5ನೇ ಸ್ಥಾನಕ್ಕೆ ತೃಪ್ತಿಪಟ್ಟರು (181.5). ಇವರಿಬ್ಬರೂ ಈಗಾಗಲೇ 2020ರ ಒಲಿಂಪಿಕ್ಸ್‌ ಅರ್ಹತೆ ಸಂಪಾದಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ