ಪಂಕಜ್‌ ಆಡ್ವಾಣಿಗೆ ಏಶ್ಯನ್‌ ಸ್ನೂಕರ್‌ ಪ್ರಶಸ್ತಿ

Team Udayavani, Jun 23, 2019, 5:31 AM IST

ಹೊಸದಿಲ್ಲಿ: ಭಾರತದ ಪಂಕಜ್‌ ಆಡ್ವಾಣಿ 35ನೇ ಏಶ್ಯನ ಸ್ನೂಕರ್‌ ಚಾಂಪಿಯನ್‌ಶಿಪ್‌ನ ಪ್ರಶಸ್ತಿ ಗೆದ್ದಿದ್ದಾರೆ. ಈ ಮೂಲಕ ಬಾಳ್ವೆಯಲ್ಲಿ ಗ್ರ್ಯಾನ್‌ ಸ್ಲಾಮ್‌ ಸಾಧನೆಯನ್ನು ಪೂರ್ತಿಗೊಳಿಸಿದರು.

ಪಂಕಜ್‌ ಅವರು ಎಸಿಬಿಎಸ್‌ ಏಶ್ಯನ್‌ ಸ್ನೂಕರ್‌ನ 6 ರೆಡ್‌ (ಶಾರ್ಟ್‌ ಮಾದರಿ) ಮತ್ತು15 ರೆಡ್‌ (ದೀರ್ಘ‌ ಮಾದರಿ) ಸಹಿತ ಐಬಿಎಸ್‌ಎಫ್ ವಿಶ್ವ ಚಾಂಪಿಯನ್‌ಶಿಪ್‌ನ ಎರಡೂ ಮಾದರಿಯಲ್ಲೂ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು. ಈ ಸಾಧನೆಯನ್ನು ಅವರು ಈಗಾಗಲೇ ಬಿಲಿಯರ್ಡ್ಸ್‌ನಲ್ಲೂ ಮಾಡಿದ್ದರು. 15 ರೆಡ್‌ ಏಶ್ಯನ್‌ ಸ್ನೂಕರ್‌ ಪ್ರಶಸ್ತಿ ಇಷ್ಟರವರೆಗೆ ಅವರ ಸಂಗ್ರಹದಲ್ಲಿ ಇರಲಿಲ್ಲ.

“ಎರಡು ವಿಧದ ಕ್ರೀಡೆಯಲ್ಲಿ ನನ್ನ ದೇಶವನ್ನು ಪ್ರತಿನಿಧಿಸುವಾಗ ಮಾಡಬೇಕಾದ ಸಾಧನೆಯನ್ನು ಪೂರ್ತಿಗೊಳಿಸಿರುವುದು ಖುಷಿ ತಂದಿದೆ ಎಂದು ಪಂಕಜ್‌ ಆಡ್ವಾಣಿ ಗೆಲುವಿನ ಬಳಿಕ ಹೇಳಿದರು.

ಫೈನಲ್‌ನಲ್ಲಿ 6-3 ಜಯ
ಆಡ್ವಾಣಿ ಅವರು ಫೈನಲ್‌ನಲ್ಲಿ ತಾನಾವತ್‌ ತಿರಪಾಂಗ್‌ಬೈಬೂನ್‌ ಅವರನ್ನು 6-3 ಅಂತರದಿಂದ ಸೋಲಿಸಿ ಏಶ್ಯನ್‌ ಮತ್ತು ವಿಶ್ವ ಚಾಂಪಿಯನ್‌ಶಿಪ್‌ನ ಎಲ್ಲ ಮಾದರಿಯಲ್ಲಿ ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎನಿಸಿಕೊಂಡರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ