ಏಶ್ಯನ್ ಕುಸ್ತಿ ಚಾಂಪಿಯನ್ಶಿಪ್: ಬೆಳ್ಳಿ ಗೆದ್ದ ಗುರ್ಪ್ರೀತ್, ಸುನೀಲ್
Team Udayavani, Apr 28, 2019, 9:34 AM IST
ಕ್ಸಿಯಾನ್ (ಚೀನ): “ಏಶ್ಯನ್ ಕುಸ್ತಿ ಚಾಂಪಿಯನ್ಶಿಪ್’ನಲ್ಲಿ ಶನಿವಾರ ಭಾರತಕ್ಕೆ ಎರಡು ಬೆಳ್ಳಿ ಪದಕ ಒಲಿದಿದೆ. ಗ್ರೀಕೋ ರೋಮನ್ 77 ಕೆಜಿ ವಿಭಾಗದಲ್ಲಿ ಗುರ್ಪ್ರೀತ್ ಸಿಂಗ್ ಮತ್ತು 87 ಕೆಜಿ ವಿಭಾಗದಲ್ಲಿ ಸುನೀಲ್ ಕುಮಾರ್ ಬೆಳ್ಳಿ ಜಯಿಸಿದರು.
ಫೈನಲ್ನಲ್ಲಿ ಗುರ್ಪ್ರೀತ್ ಕೊರಿಯದ ಹೈಯೊನ್ವೂ ಕಿಮ್ ವಿರುದ್ಧ 0-8 ಅಂತರದಿಂದ ಪರಾಭವಗೊಂಡರು. ಫೈನಲ್ ಹಾದಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ತೋರಿದ್ದ ಗುರ್ಪ್ರೀತ್ ಸೆಮಿಫೈನಲ್ನಲ್ಲಿ 6-5 ಅಂತರದಿಂದ ಕಜಕೀಸ್ಥಾನದ ತಮೆರೆಲನ್ ಶದುಕಾಯೆವ್ ವಿರುದ್ಧ ಜಯಿಸಿದ್ದರು. ಇದಕ್ಕೂ ಮುನ್ನ ಕ್ವಾರ್ಟರ್ ಫೈನಲ್ನಲ್ಲಿ ಕತಾರ್ನ ಬಖೀತ್ ಶರಿಫ್ ಕೆ ಬಾದ್ರ್ ಅವರನ್ನು 10-0 ಅಂತರದಿಂದ ಮಣಿಸಿದ್ದರು. 87 ಕೆಜಿ ವಿಭಾಗದ ಫೈನಲ್ ಪ್ರವೇಶಿಸಿದ ಸುನೀಲ್ ಕುಮಾರ್ ಇರಾನಿನ ಹಸಿನ್ ಅಹ್ಮದ್ ನೂರಿ ವಿರುದ್ಧ 0-2 ಅಂತರದಿಂದ ಹಿನ್ನಡೆ ಕಂಡರು.
ಕಂಚು ತಪ್ಪಿಸಿಕೊಂಡ ಪ್ರೇಮ್
130 ಕೆಜಿ ಕಂಚಿನ ಸ್ಪರ್ಧೆಯಲ್ಲಿ ಭಾರತದ ಮತ್ತೋರ್ವ ರೆಸ್ಲರ್ ಪ್ರೇಮ್, ಉಜ್ಬೇಕಿಸ್ಥಾನದ ಮುಮಿಂಜೊನ್ ಅಬ್ದುಲಾವ್ ವಿರುದ್ಧ ಸೋತು ಪದಕ ತಪ್ಪಿಸಿಕೊಂಡರು. ಉಳಿದಂತೆ 55 ಕೆಜಿ ಮತ್ತು 63 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್ನಲ್ಲಿ ಮನಜೀತ್ ಮತ್ತು ವಿಕ್ರಮ್ ಕೃಶ್ನಾಥ್ ಕುರಡೆ ಸೋತು ನಿರಾಸೆ ಮೂಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!