ದೇಶಕ್ಕಾಗಿ ಮೂರನೇ ಚಿನ್ನ ಜಯಿಸುವೆ: ಜಜಾರಿಯಾ

Team Udayavani, Aug 23, 2021, 7:20 AM IST

ದೇಶಕ್ಕಾಗಿ ಮೂರನೇ ಚಿನ್ನ ಜಯಿಸುವೆ: ಜಜಾರಿಯಾ

ಹೊಸದಿಲ್ಲಿ: ದೇಶಕ್ಕಾಗಿ ಮೂರನೇ ಚಿನ್ನ ಜಯಿಸುವೆ ಎಂಬುದಾಗಿ ಲೆಜೆಂಡ್ರಿ ಪ್ಯಾರಾಲಿಂಪಿಯನ್‌ ದೇವೇಂದ್ರ ಜಜಾರಿಯಾ ಬಹಳ ಆತ್ಮವಿಶ್ವಾಸದಿಂದ ಹೇಳಿದ್ದಾರೆ.

“ನನಗೀಗ 40 ವರ್ಷ. ಸಾಧನೆಗೆ ಯಾವತ್ತೂ ವಯಸ್ಸು ಅಡ್ಡಿಯಾಗದು. ಟೋಕಿಯೋದಲ್ಲಿ ಮೂರನೇ ಚಿನ್ನ ಗೆಲ್ಲುವ ಹೊರತಾಗಿ ನಾನು ಬೇರೇನೂ ಆಲೋಚನೆ ಮಾಡುವುದಿಲ್ಲ’ ಎಂದು ಜಾವೆಲಿನ್‌ ಎಸೆತಗಾರ ಜಜಾರಿಯಾ ಹೇಳಿದರು.

ದೇವೇಂದ್ರ ಜಜಾರಿಯಾ 2004ರ ಅಥೇನ್ಸ್‌ ಕೂಟದಲ್ಲಿ ಮೊದಲ ಪ್ಯಾರಾಲಿಂಪಿಕ್ಸ್‌ ಚಿನ್ನ ಗೆದ್ದರು. 12 ವರ್ಷಗಳ ಬಳಿಕ ರಿಯೋ ಗೇಮ್ಸ್‌ ಎಫ್‌46 ಜಾವೆಲಿನ್‌ನಲ್ಲಿ ಚಿನ್ನಕ್ಕೆ ಕೊರಳೊಡ್ಡಿದರು. ಇದೀಗ ಟೋಕಿಯೋದಲ್ಲಿ ಮತ್ತೂಂದು ಚಿನ್ನ ಗೆಲ್ಲುವುದು ಅವರ ಗುರಿ. ಇದು ಜಜಾರಿಯಾ ಅವರ ಕೊನೆಯ ಪ್ಯಾರಾಲಿಂಪಿಕ್ಸ್‌ ಆಗುವ ಸಾಧ್ಯತೆ ಇರುವುದರಿಂದ ಚಿನ್ನ ಗೆಲ್ಲಲು ಗರಿಷ್ಠ ಪ್ರಯತ್ನ ಮಾಡುವುದರಲ್ಲಿ ಅನುಮಾನವಿಲ್ಲ.

“ದೇಶಕ್ಕಾಗಿ ಮೂರನೇ ಚಿನ್ನ ಗೆಲ್ಲುವುದು ನನ್ನ ಗುರಿ. ಮತ್ತೂಂದು ವಿಶ್ವದಾಖಲೆ ನಿರ್ಮಿಸುವ ಯೋಜನೆಯೂ ಇದೆ. ಇದಕ್ಕಾಗಿ ಗರಿಷ್ಠ ಪ್ರಯತ್ನ ಮಾಡಲಿದ್ದೇನೆ’ ಎಂದು ಖೇಲ್‌ರತ್ನ ಪುರಸ್ಕೃತ ಜಜಾರಿಯಾ ಹೇಳಿದರು.

65.71 ಮೀ. ಸಾಧನೆ :

“ಈ ಬಾರಿ ಅಭ್ಯಾಸ ಉತ್ತಮ ಮಟ್ಟದಲ್ಲೇ ಸಾಗಿದೆ. ಜೂನ್‌ನಲ್ಲಿ ಕೊನೆಯ ಸಲ ಅಭ್ಯಾಸ ನಡೆಸಿದ್ದೆ. ಆಗ 65.71 ಮೀ. ಎಸೆಯುವಲ್ಲಿ ಯಶಸ್ವಿಯಾಗಿದ್ದೆ. 40 ವರ್ಷದ ನಾನು 20 ವರ್ಷದ ಆ್ಯತ್ಲೀಟ್‌ಗಳ ಜತೆ ಅಭ್ಯಾಸ ಮಾಡಬೇಕಾದ್ದರಿಂದ ತರಬೇತಿ ಅವಧಿಯಲ್ಲಿ ಕೆಲವು ಸಕಾರಾತ್ಮಕ ಬದಲಾವಣೆ ಮಾಡಿಕೊಳ್ಳಬೇಕಾಯಿತು. 7 ಕೆಜಿ ತೂಕ ಇಳಿಸಿಕೊಂಡಿದ್ದೇನೆ. ನನ್ನ ಪಾಲಿಗೆ 40 ಎನ್ನುವುದು ಕೇವಲ ಒಂದು ಸಂಖ್ಯೆ…’ ಎಂದರು.

ಮಕ್ಕಳೇ ದೊಡ್ಡ ಸ್ಫೂರ್ತಿ :

“ಕಳೆದ 7 ತಿಂಗಳಲ್ಲಿ ಒಮ್ಮೆ ಮಾತ್ರ ಮನೆಗೆ ಹೋಗಿದ್ದೆ. 10 ವರ್ಷದ ಮಗಳು ನನ್ನನ್ನು ಅರ್ಥ ಮಾಡಿಕೊಂಡಿದ್ದಾಳೆ. ಟೋಕಿಯೋದಿಂದ ಪದಕದೊಂದಿಗೆ ಮರಳಿದ ಬಳಿಕ ಸಂಭ್ರಮ ಆಚರಿಸೋಣ ಎಂದಿದ್ದಾಳೆ. ಆದರೆ ಮಗನಿಗೆ ನಾನು ಮನೆಗೆ ಮರಳಬೇಕೆಂಬ ಆಸೆ. ಇವರಿಬ್ಬರು ನನ್ನ ಪದಕ ಬೇಟೆಗೆ ದೊಡ್ಡ ಸ್ಫೂರ್ತಿ ಆಗಲಿದ್ದಾರೆ’ ಎಂದು ದೇವೇಂದ್ರ ಜಜಾರಿಯಾ ಹೇಳಿದರು.

ಪ್ಯಾರಾಲಿಂಪಿಕ್ಸ್‌ : ವಿದ್ಯಾರ್ಥಿಗಳಿಗೆ ಪ್ರವೇಶ? :

ಟೋಕಿಯೊ: ಜಪಾನ್‌ನಲ್ಲಿ ಕೊರೊನಾ ಕೇಸ್‌ ಏರುತ್ತಿರುವ ನಡುವೆಯೇ ಟೋಕಿಯೊ ಪ್ಯಾರಾಲಿಂಪಿಕ್ಸ್‌ ಕೂಟಕ್ಕೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಬಗ್ಗೆ ಸಂಘಟನಾ ಸಮಿತಿ ಆಲೋಚಿಸುತ್ತಿದೆ.

ಟೋಕಿಯೊ ಗವರ್ನರ್‌ ಯುರಿಕೊ ಕೊçಕೆ ಕೂಡ ಈ ಕುರಿತು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲಿಯ ತನಕ ಪೋಷಕರು ಮತ್ತು ಶಾಲೆಯವರು ಬೆಂಬಲ ನೀಡುತ್ತಾರೋ ಅಲ್ಲಿಯ ತನಕ ವಿದ್ಯಾರ್ಥಿಗಳನ್ನು ಸ್ಟೇಡಿಯಂಗೆ ಕಳುಹಿಸುವುದು ಕೊçಕೆ ಉದ್ದೇಶ. ಆಗ ಸುಮಾರು 1,40,000ದಷ್ಟು ವಿದ್ಯಾರ್ಥಿಗಳಿಗೆ ವಿವಿಧ ಹಂತಗಳಲ್ಲಿ ಈ ಅವಕಾಶ ಸಿಗುವ ಸಾಧ್ಯತೆ ಇದೆ.

ಪ್ಯಾರಾಲಿಂಪಿಕ್ಸ್‌ ಸೆ. 5ರ ತನಕ ನಡೆಯಲಿದೆ. ಸೆ. 12ರ ತನಕ ಟೋಕಿಯೋದಲ್ಲಿ ಕೊರೊನಾ ತುರ್ತು ಸ್ಥಿತಿ ಜಾರಿಯಲ್ಲಿದೆ. ಶನಿವಾರದ ತನಕ ಸತತ 4ನೇ ದಿನ ಜಪಾನ್‌ ರಾಜಧಾನಿಯಲ್ಲಿ 5 ಸಾವಿರ ಪಾಸಿಟಿವ್‌ ಕೇಸ್‌ಗಳು ಕಂಡುಬಂದಿವೆ. ರವಿವಾರ ಈ ಸಂಖ್ಯೆ ತುಸು ಕಡಿಮೆಯಾಗಿದೆ (4,392). ಈ ಆತಂಕದ ನಡುವೆಯೇ ಮಂಗಳವಾರದಿಂದ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟ ಆರಂಭವಾಗಲಿದೆ.

ಟಾಪ್ ನ್ಯೂಸ್

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqwewq

IPL; ಲಕ್ನೋ ಸೂಪರ್‌ ಜೈಂಟ್ಸ್‌ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ

1-ewewewq

IPL; ಆಸ್ಟ್ರೇಲಿಯನ್‌ ಆಲ್‌ರೌಂಡರ್‌ ಮಾರ್ಷ್‌ ಔಟ್‌

Kohli IPL 2024

IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್‌ ನೀಡಿದ ಆರ್‌ಸಿಬಿ!

1-eewqewqe

IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ

IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ

IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.