ಕೆನಡಾ: 14 ಕಿರಿಯ ಹಾಕಿ ಆಟಗಾರರ ಸಾವು
Team Udayavani, Apr 8, 2018, 7:10 AM IST
ಒಟ್ಟಾವಾ: ಕೆನಡಾದಲ್ಲಿ ಭಾರೀ ಕ್ರೀಡಾ ದುರಂತವೊಂದು ನಡೆದಿದೆ. ಸ್ಥಳೀಯ ಹಾಕಿ ಲೀಗ್‌ಗೆ ತೆರಳುತ್ತಿದ್ದ ಕಿರಿಯ ಆಟಗಾರರಿದ್ದ ಬಸ್ ಮತ್ತು ಟ್ರಕ್ ನಡುವೆ ಡಿಕ್ಕಿಯಾಗಿ ಒಟ್ಟು 14 ಮಂದಿ ಸಾವಿಗೀಡಾಗಿದ್ದಾರೆ. ಬಸ್‌ನಲ್ಲಿದ್ದ ಇನ್ನೂ 14 ಮಂದಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಏರುವ ನಿರೀಕ್ಷೆಯಿದೆ.
ಶುಕ್ರವಾರ ತಡರಾತ್ರಿ ಘಟನೆ ನಡೆದಿದೆ. ಸಾಸ್ಕಾಚೆವಾನ್ ಎಂಬಲ್ಲಿ ನಡೆಯಬೇಕಿದ್ದ ಕಿರಿಯರ ಹಾಕಿ ಪ್ಲೇ-ಆಫ್ ಪಂದ್ಯಕ್ಕೆ ಹಂಬೋಲ್ಟ್ ಬ್ರಾಂಕೋಸ್ ತಂಡ ತೆರಳುತ್ತಿದ್ದ ವೇಳೆ ಸಾಸ್ಕಾಚೆವಾನ್ ಗ್ರಾಮೀಣ ಹೆದ್ದಾರಿಯಲ್ಲಿ ಟ್ರಕ್ ಮತ್ತು ಬಸ್ ನಡುವೆ ಡಿಕ್ಕಿಯಾಗಿದೆ. ಪರಿಣಾಮ ಬಸ್‌ನಲ್ಲಿದ್ದ 14 ಹಾಕಿ ಆಟಗಾರರು ಸತ್ತಿದ್ದಾರೆ. ಇನ್ನುಳಿದವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ.
ಘಟನೆಯ ಅನಂತರ ಕೆನಡಾ ಪ್ರಧಾನಿ ಜಸ್ಟಿನ್ ಟ್ರಾಡ್ನೂ ನೊಂದವರಿಗೆ ಸಾಂತ್ವನ ಹೇಳಿದ್ದಾರೆ. “ಈ ಪರಿಸ್ಥಿತಿಯನ್ನು ಹೇಗೆ ಸಹಿಸಿಕೊಳ್ಳುತ್ತಾರೋ ಗೊತ್ತಿಲ್ಲ. ಆದರೆ ಎಲ್ಲ ನೊಂದವರೊಂದಿಗೆ ಎಂದೆಂದೂ ನಾನಿರುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Athletics: ಕಿರಿಯರ ಏಷ್ಯನ್ ಆ್ಯತ್ಲೆಟಿಕ್ಸ್ ಜಾವೆಲಿನ್ನಲ್ಲಿ ದೀಪಾಂಶುಗೆ ಬಂಗಾರ
Gukesh: ಚಾಂಪಿಯನ್ ಗುಕೇಶ್ಗೆ ಭವ್ಯ ಸ್ವಾಗತ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್