ಅಪರಾಹ್ನ ಬಜೆಟ್‌; ರಾತ್ರಿ ಕ್ರಿಕೆಟ್‌


Team Udayavani, Jan 31, 2017, 10:34 PM IST

31-SPO-4.jpg

ಬೆಂಗಳೂರು: ಬುಧವಾರ ತೀವ್ರ ಆಸಕ್ತಿಯ ಎರಡು ವಿದ್ಯಮಾನಗಳಿಗೆ ದೇಶದ ಜನರು ಸಾಕ್ಷಿಯಾಗಲಿದ್ದಾರೆ. ಮಧ್ಯಾಹ್ನ ಕೇಂದ್ರ ಸರಕಾರ ಮಂಡಿಸುವ ಬಜೆಟ್‌ ಕುತೂಹಲವಾದರೆ, ರಾತ್ರಿ ಭಾರತ-ಇಂಗ್ಲೆಂಡ್‌ ನಡುವಿನ ನಿರ್ಣಾಯಕ ಟಿ-20 ಕದನ ಕೌತುಕ! 

ಸಂಪೂರ್ಣ ನವೀಕರಿಸಲ್ಪಟ್ಟ ಬೆಂಗಳೂರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಚುಟುಕು ಕ್ರಿಕೆಟ್‌ ಹಣಾಹಣಿ ತೀವ್ರತೆಯನ್ನು ಪಡೆದು ಕೊಳ್ಳಲಿದೆ. ಇದು ಸರಣಿ ನಿರ್ಣಾಯಕ ಪಂದ್ಯ ವಾದ್ದರಿಂದ ಕೊನೆಯ ಎಸೆತದ ತನಕ ರೋಮಾಂ ಚನ ಗರಿಗೆದರುವ ಎಲ್ಲ ಸಾಧ್ಯತೆ ಇದೆ.

ಕಾನ್ಪುರದಲ್ಲಿ ಇಂಗ್ಲೆಂಡಿಗೆ ಶರಣಾದ ಟೀಮ್‌ ಇಂಡಿಯಾ, ನಾಗ್ಪುರದಲ್ಲಿ ರೋಚಕ ಗೆಲುವನ್ನು ಸಾಧಿಸುವ ಮೂಲಕ ಸರಣಿಯನ್ನು ಜೀವಂತವಾಗಿರಿಸುವಲ್ಲಿ ಯಶಸ್ವಿಯಾಯಿತು. ಈಗ ಬೆಂಗಳೂರು ಯಾರಿಗೆ “ಸರಣಿ ಕಿರೀಟ’ ತೊಡಿಸುತ್ತದೆ ಎಂಬುದನ್ನು ಕಾಣಲು ಕ್ರಿಕೆಟ್‌ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

ಟೀಮ್‌ ಇಂಡಿಯಾ ನಾಯಕನಾದ ಬಳಿಕ ವಿರಾಟ್‌ ಕೊಹ್ಲಿ ತವರಿನಲ್ಲಿ ಯಾವುದೇ ಸರಣಿ ಸೋತದ್ದಿಲ್ಲ. ಪ್ರವಾಸಿ ಇಂಗ್ಲೆಂಡ್‌ ಎದುರಿನ ಟೆಸ್ಟ್‌ ಸರಣಿಯನ್ನು 4-0 ಅಂತರದಿಂದ, ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದ ಹೆಗ್ಗಳಿಕೆ ಭಾರತದ್ದು. ಟಿ-20 ಸರಣಿಯ ಆರಂಭದಲ್ಲೇ ಸೋಲೆದುರಾದರೂ ಇದಕ್ಕೆ ನಾಗ್ಪುರದಲ್ಲಿ ಸೇಡು ತೀರಿಸಿಕೊಳ್ಳಲಾಯಿತು. ಥ್ಯಾಂಕ್ಸ್‌ ಟು ಜಸ್‌ಪ್ರೀತ್‌ ಬುಮ್ರಾ ಮತ್ತು ಅಂಪಾಯರ್‌ ಸಿ. ಶಂಸುದ್ದೀನ್‌!

ನಾಗ್ಪುರದಲ್ಲಿ ಭಾರತವನ್ನು ಹಳಿಗೆ ತಂದದ್ದು ಬುಮ್ರಾ ಅವರ ಅಂತಿಮ ಓವರ್‌. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಇದು ಬುಮ್ರಾ ಗೆಲುವು! ಈ ಗೆಲುವಿನ ಸ್ಫೂರ್ತಿಯಲ್ಲೇ ಟೀಮ್‌ ಇಂಡಿಯಾ ಬೆಂಗಳೂರಿನಲ್ಲಿ ಹೋರಾಟ ಸಂಘ ಟಿಸಿ ಸರಣಿ ಗೆಲುವಿಗೆ ಸ್ಕೆಚ್‌ ಹಾಕಬೇಕಿದೆ. 

ಏಕದಿನ ಸರಣಿಯಲ್ಲಿ ರನ್‌ ಪ್ರವಾಹವನ್ನೇ ಕಂಡ ಬಳಿಕ ಚುಟುಕು ಕ್ರಿಕೆಟ್‌ ಕೂಡ ಇದರ ಮುಂದುವರಿದ ಭಾಗವಾಗಿರಲಿದೆ ಎಂಬುದೇ ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಇಲ್ಲಿ 140ರ ಆಸುಪಾಸಿನಲ್ಲೇ ಸ್ಕೋರ್‌ ಗಿರಕಿ ಹೊಡೆಯುತ್ತಿದೆ. 

ಎರಡರಲ್ಲೂ ಭಾರತಕ್ಕೇ ಮೊದಲು ಬ್ಯಾಟ್‌ ಮಾಡುವ ಅವಕಾಶ ಸಿಕ್ಕಿತ್ತು. ಕಾನ್ಪುರದಲ್ಲಿ ಇಂಗ್ಲೆಂಡ್‌ ಸುಲಭದಲ್ಲಿ ಚೇಸ್‌ ಮಾಡಿದರೆ, ನಾಗ್ಪುರದಲ್ಲಿ ಗೆಲುವಿನ ಹಂತದ ತನಕ ಬಂದು ಅಂತಿಮ ಓವರಿನಲ್ಲಿ ಎಡವಿತು. 18ನೇ ಹಾಗೂ 20ನೇ ಓವರಿನಲ್ಲಿ ಒಟ್ಟು ಐದೇ ರನ್‌ ಕೊಟ್ಟ ಬುಮ್ರಾ ಟೀಮ್‌ ಇಂಡಿಯಾ ಪಾಲಿನ “ಬಿಗ್‌ ಬಾಸ್‌’ ಎನಿಸಿದರು. ಅಷ್ಟೇ ಅಲ್ಲ, ಚುಟುಕು ಕ್ರಿಕೆಟ್‌ ಯಾವುದೇ ಹಂತದಲ್ಲಿ ಯಾವುದೇ ತಂಡವನ್ನು ಕುಟುಕೀತು ಎಂಬುದಕ್ಕೆ ಸ್ಪಷ್ಟ ನಿದರ್ಶನ ಒದಗಿಸಿತು. 

ಬೆಂಗಳೂರಿನಲ್ಲಿ  ಬಿಗ್‌ ಸ್ಕೋರ್‌?
ಬೆಂಗಳೂರಿನಲ್ಲಾದರೂ ಬಿಗ್‌ ಸ್ಕೋರ್‌ ದಾಖಲಾದೀತೇ ಎಂಬುದು ಕ್ರಿಕೆಟ್‌ ಪ್ರೇಮಿಗಳ ಕುತೂಹಲ. ಇಲ್ಲಿ ಈವರೆಗೆ ನಡೆದದ್ದು 4 ಟಿ-20 ಅಂತಾರಾಷ್ಟ್ರೀಯ ಪಂದ್ಯ ಮಾತ್ರ. ಎರಡರಲ್ಲಿ ಭಾರತ ಕಾಣಿಸಿಕೊಂಡಿತ್ತು. ಪಾಕಿಸ್ಥಾನ ವಿರುದ್ಧ ಆಡಿದ 2012ರ ಪಂದ್ಯದಲ್ಲಿ 5 ವಿಕೆಟ್‌ ಸೋಲನುಭವಿಸಿದರೆ, ಕಳೆದ ವರ್ಷ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶವನ್ನು ಒಂದೇ ಒಂದು ರನ್ನಿನಿಂದ ಸೋಲಿಸಿತ್ತು. ಇದೇ ಪಂದ್ಯಾವಳಿಯ ಬಾಂಗ್ಲಾ ಎದುರಿನ ಮುಖಾಮುಖೀಯಲ್ಲಿ ಆಸ್ಟ್ರೇಲಿಯ 7ಕ್ಕೆ 157 ರನ್‌ ಗಳಿಸಿದ್ದು ಈ ಅಂಗಳದ ದೊಡ್ಡ ಮೊತ್ತ.

ಈ ಬಾರಿ ಧಾರಾಳ ರನ್‌ ಹರಿವು ಕಂಡುಬರಲಿದೆ ಎಂಬುದು ಕ್ಯುರೇಟರ್‌ ಹೇಳಿಕೆ. ಸ್ಕೋರ್‌ ಎಷ್ಟೇ ಆಗಿರಲಿ, ಪಂದ್ಯ ಮಾತ್ರ “ಟೈಟ್‌ ಫಿನಿಶ್‌’ ಕಾಣುವ ಬಗ್ಗೆ ಅನುಮಾನವಿಲ್ಲ.

ಸರಣಿ ಗೆಲುವಿಗೆ ಬೇಕು ಲಕ್‌!
ಇಂಗ್ಲೆಂಡ್‌ ಇನ್‌ಸ್ಟಂಟ್‌ ಕ್ರಿಕೆಟಿನ ಸಶಕ್ತ ಹಾಗೂ ವೈವಿಧ್ಯಮಯ ತಂಡ. 1-11ರ ತನಕ ಎಲ್ಲರೂ ಅಪಾಯಕಾರಿ ಆಟಗಾರರೇ. ನಾಯಕ ಮಾರ್ಗನ್‌ ಅವರಂತೂ ಪ್ರಚಂಡ ಫಾರ್ಮ್ನಲ್ಲಿದ್ದಾರೆ. ಬೌಲಿಂಗ್‌ ಕೂಡ ಹರಿತವಾಗಿಯೇ ಇದೆ. ಆದರೆ…

ಟಿ-20 ಸರಣಿ ಗೆಲ್ಲಲು ಮುಖ್ಯವಾಗಿ ಬೇಕಿರುವುದು ಅದೃಷ್ಟ. ಇದು ಇಂಗ್ಲೆಂಡಿಗಿದೆಯೇ? ಅದು ಸರಣಿ ಗೆಲುವಿನೊಂದಿಗೆ ಭಾರತ ಪ್ರವಾಸವನ್ನು ಮುಗಿಸುವುದೇ ಅಥವಾ ಹ್ಯಾಟ್ರಿಕ್‌ ಸರಣಿ ಸೋಲಿಗೆ ತುತ್ತಾಗುವುದೇ? ಒಟ್ಟಾರೆ ಬೆಂಗಳೂರು ಕ್ರಿಕೆಟ್‌ ಕೌತುಕದ ಹೆಬ್ಟಾಗಿಲಾಗಿ ಗೋಚರಿಸುತ್ತಿದೆ!

ಕೊಹ್ಲಿಗೆ ಎರಡನೇ ತವರು
ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿಗೆ ಬೆಂಗಳೂರು ಎರಡನೇ ತವರು. ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡದ ನಾಯಕನಾಗಿರುವ ಕೊಹ್ಲಿಗೆ ಚಿನ್ನಸ್ವಾಮಿ ಅಂಗಳ ಸಾಕಷ್ಟು ಗೆಲುವಿನ ಸವಿಯನ್ನು ಉಣಿಸಿದೆ. ಬುಧವಾರವೂ ಇಂಥದೇ ಅನುಭವವಾಗಲಿ ಎಂಬುದು ಅಭಿಮಾನಿಗಳ ಹಾರೈಕೆ.

ಹಾಗೆಯೇ ರಾಜ್ಯದ ಇಬ್ಬರು ಆಟಗಾರರಾದ ಕೆ.ಎಲ್‌. ರಾಹುಲ್‌ ಮತ್ತು ಮನೀಷ್‌ ಪಾಂಡೆ ಈ ಪಂದ್ಯದಲ್ಲಿ ಆಡುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಇವರಿಬ್ಬರೂ ವಿಫ‌ಲ ರಾಗಿದ್ದರು. ಆದರೆ ನಾಗ್ಪುರದಲ್ಲಿ ಆಡಿದ್ದೇ ರಾಹುಲ್‌ ಮತ್ತು ಪಾಂಡೆ ಎಂಬುದನ್ನು ಮರೆಯುವಂತಿಲ್ಲ. ಉಳಿದಂತೆ ರೈನಾ, ಯುವರಾಜ್‌, ಧೋನಿ ಬಿರುಸಿನ ಆಟಕ್ಕೆ ಮುಂದಾದರೆ ದೊಡ್ಡ ರನ್‌ ರಾಶಿಯನ್ನು ಕಾಣಬಹುದು.

ಭಾರತ ಗೆಲುವಿನ ಕಾಂಬಿನೇಶನ್‌ನಲ್ಲಿ ಬದಲಾವಣೆ ಮಾಡುವ ಸಂಭವ ಕಡಿಮೆ. ಆದರೂ ಯುವ ಆಟಗಾರ, ಮುನ್ನುಗ್ಗಿ ಬಾರಿಸಬಲ್ಲ ರಿಷಬ್‌ ಪಂತ್‌ ಅವರಿಗೆ ಅವಕಾಶವೊಂದನ್ನು ನೀಡಲು ಕೊಹ್ಲಿ-ಕುಂಬ್ಳೆ ಯೋಚಿಸುತ್ತಿದ್ದಾರೆ. ಹಾಗೆಯೇ ಕಳೆದೆರಡು ಪಂದ್ಯಗಳಲ್ಲಿ ಪ್ರೇಕ್ಷಕನಾಗಿ ಉಳಿದಿರುವ ಸ್ವಿಂಗ್‌ ದಾಳಿಗಾರ ಭುವನೇಶ್ವರ್‌ ಕುಮಾರ್‌ ಅವರಿಗೂ ಚಾನ್ಸ್‌ ಕೊಡಬೇಕೆಂಬ ತುಡಿತವಿದೆ. ಆದರೆ ಯಾರನ್ನು ಹೊರಗಿರಿಸುವುದೆಂಬುದೇ ಪ್ರಶ್ನೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.