ಐಎಸ್ಎಲ್: ಕೋಲ್ಕತ ತಂಡಕ್ಕೆ ದಾಖಲೆಯ ಮೂರನೇ ಕಿರೀಟ
Team Udayavani, Mar 15, 2020, 9:25 AM IST
ಮಡಗಾಂವ್ (ಗೋವಾ): ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಕೂಟ ಕೊರೊನಾ ಹಾವಳಿ ಶುರುವಾಗಿರುವ ವೇಳೆಯೇ ಮುಗಿದಿದೆ. ಅಟ್ಲೆಟಿಕೊ ಡಿ ಕೋಲ್ಕತ ತಂಡ 3-1 ಗೋಲುಗಳಿಂದ ಚೆನ್ನೈಯಿನ್ ಎಫ್ಸಿ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿದೆ. ಇದು ಕೋಲ್ಕತಕ್ಕೆ ಒಲಿದಿರುವ
ದಾಖಲೆಯ 3ನೇ ಕಿರೀಟ. ಈ ತಂಡ ಐಎಸ್ಎಲ್ ಇತಿಹಾಸದ ಅತಿ ಯಶಸ್ವಿ ತಂಡವಾಗಿ ದಾಖಲೆ ನಿರ್ಮಿಸಿದೆ.
ಕೋಲ್ಕತ ಪರ ಜೇವಿಯರ್ ಹೆರ್ನಾಂಡೆಜ್ ಎರಡು ಗೋಲು ಬಾರಿಸಿದರು (10, 93ನೇ ನಿಮಿಷ). ಎಡು ಗಾರ್ಸಿಯ 48ನೇ ನಿಮಿಷದಲ್ಲಿ ಇನ್ನೊಂದು ಗೋಲು ಬಾರಿಸಿ, ತಂಡದ ಸ್ಥಿತಿಯನ್ನು ಮಜಬೂತುಗೊಳಿಸಿದರು. ಚೆನ್ನೈಯಿನ್ ಪರ ದಾಖಲಾಗಿದ್ದು ಒಂದೇ ಒಂದು ಗೋಲು. ನೆರಿಜಸ್ ವಾಲ್ಸಿಸ್ 69ನೇ ನಿಮಿಷದಲ್ಲಿ ಈ ಸಾಹಸ ಮಾಡಿದರು