ಎಟಿಪಿ ಫೈನಲ್ಸ್: ಹಿಂದೆ ಸರಿದ ನಡಾಲ್
Team Udayavani, Nov 8, 2018, 6:20 AM IST
ಮ್ಯಾಡ್ರಿಡ್: ಸ್ಪೇನ್ನ ಟೆನಿಸ್ ತಾರೆ ರಫೆಲ್ ನಡಾಲ್ ಗಾಯದ ಸಮಸ್ಯೆಯಿಂದಾಗಿ ಲಂಡನ್ನಲ್ಲಿ ನಡೆಯಲಿರುವ ವರ್ಷಾಂತ್ಯದ ಪ್ರತಿಷ್ಠಿತ ಎಟಿಪಿ ಫೈನಲ್ಸ್ನಿಂದ ಹಿಂದೆ ಸರಿದಿದ್ದಾರೆ.
ನಡಾಲ್ ಅವರು ಬಾರ್ಸಲೋನದಲ್ಲಿ ಬಲ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಈ ಕಾರಣದಿಂದಾಗಿ ಅವರು ಎಟಿಪಿ ಫೈನಲ್ಸ್ನಲ್ಲಿ ಆಡದಿರಲು ನಿರ್ಧರಿಸಿದ್ದಾರೆ.
“ಅತಿ ಕಷ್ಟದ ವರ್ಷವಿದು. ಆಟವಾಡುವ ಸಾಮರ್ಥ್ಯವಿದ್ದರೂ ಕೆಲವೊಂದು ಬಾರಿ ಗಾಯಗಳು ನಮ್ಮನ್ನು ಆಡದಂತೆ ತಡೆಯುತ್ತವೆ. ವರ್ಷಾಂತ್ಯದ ಈ ಕೂಟದಲ್ಲಿ ಆಡಲು ಫಿಟ್ನೆಸ್ನಿಂದ ಹಿಡಿದು ಎಲ್ಲ ಪ್ರಯತ್ನಗಳನ್ನು ಮಾಡಿದ್ದೇನೆ. ಪ್ಯಾರಿಸ್ ಹಾಗೂ ಲಂಡನ್ ಎರಡರಲ್ಲೂ ನಾನು ಆಡಬೇಕಿತ್ತು. ಆದರೆ ಕಳೆದ ವಾರ ಮುಕ್ತಾಯಗೊಂಡ ಪ್ಯಾರಿಸ್ ಮಾಸ್ಟರ್ನಲ್ಲಿ ಮೊಣಕಾಲಿನ ನೋವು ಕಾಣಿಸಿಕೊಂಡ ಕಾರಣ ಎಟಿಪಿ ಫೈನಲ್ಸ್ನಿಂದ ಹಿಂದೆ ಸರಿಯಬೇಕಾಗಿದೆ. ಮತ್ತು ತತ್ಕ್ಷಣವೇ ಮೊಣಕಾಲಿನ ಶಸ್ತ್ರಚಿಕಿತ್ಸೆಯ ಮೂಲಕ ನೋವಿಗೆ ಮುಕ್ತಿಕೊಡಲು ನಿರ್ಧರಿಸಿದ್ದೇನೆ’ ಎಂದು ನಡಾಲ್ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ವಿಚಾರ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್ ಮುಂದಿದೆ ಅಗ್ನಿ ಪರೀಕ್ಷೆ
ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ