ರನ್ನರ್‌ಅಪ್‌ ಭಾರತ ತಂಡಕ್ಕೆ  ಆಸೀಸ್‌ ಮೊದಲ ಎದುರಾಳಿ

Team Udayavani, Aug 18, 2017, 11:27 AM IST

18-SPORTS-2.jpg

ದುಬಾೖ: ಮುಂದಿನ ವರ್ಷಾರಂಭದಲ್ಲಿ ನ್ಯೂಜಿಲ್ಯಾಂಡ್‌ ಆತಿಥ್ಯದಲ್ಲಿ ನಡೆಯುವ 11ನೇ ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ವೇಳಾ ಪಟ್ಟಿಯನ್ನು ಐಸಿಸಿ ಗುರುವಾರ ಪ್ರಕಟಿಸಿದೆ. ಹಾಲಿ ಚಾಂಪಿಯನ್‌ ವೆಸ್ಟ್‌ ಇಂಡೀಸ್‌ ಹಾಗೂ ಆತಿಥೇಯ ನ್ಯೂಜಿಲ್ಯಾಂಡ್‌ ನಡುವೆ ಜ. 13ರಂದು ನಡೆಯುವ ಪಂದ್ಯದೊಂದಿಗೆ ಕಿರಿಯರ ವರ್ಲ್ಡ್ಕಪ್‌ ಕಾವೇರಿಸಿಕೊಳ್ಳಲಿದೆ.

3 ಬಾರಿಯ ಚಾಂಪಿಯನ್‌ ಹಾಗೂ 2016ರ ರನ್ನರ್ ಅಪ್‌ ತಂಡವಾಗಿರುವ ಭಾರತ ತನ್ನ ಮೊದಲ ಪಂದ್ಯ ವನ್ನು ಆಸ್ಟ್ರೇಲಿಯ ವಿರುದ್ಧ ಆಡಲಿದೆ. ಕಳೆದ ಸಲ ಭದ್ರತಾ ಭೀತಿಯಿಂದಾಗಿ ಬಾಂಗ್ಲಾದೇಶದಲ್ಲಿ ನಡೆದ ಪಂದ್ಯಾವಳಿ ಯಿಂದ ಆಸ್ಟ್ರೇಲಿಯ ಹಿಂದೆ ಸರಿದಿತ್ತು. ಈ ಪಂದ್ಯಾವಳಿಯಲ್ಲಿ ಒಟ್ಟು 16 ತಂಡಗಳು ಪಾಲ್ಗೊಳ್ಳ ಲಿದ್ದು, ಇವುಗಳನ್ನು 4 ಗುಂಪುಗಳಾಗಿ ವಿಭಜಿಸಲಾಗಿದೆ. ಭಾರತ “ಬಿ’ ವಿಭಾಗದಲ್ಲಿದೆ. ಆಸ್ಟ್ರೇಲಿಯ, ಜಿಂಬಾಬ್ವೆ ಮತ್ತು ಪಪುವಾ ನ್ಯೂ ಗಿನಿ ಈ ವಿಭಾಗದ ಉಳಿದ ಮೂರು ತಂಡಗಳು.

11 ತಂಡಗಳಿಗೆ ನೇರ ಪ್ರವೇಶ: ಟೆಸ್ಟ್‌ ಮಾನ್ಯತೆ ಹೊಂದಿ ರುವ ದೇಶಗಳ 10 ತಂಡಗಳು ಹಾಗೂ ಕಳೆದ ವಿಶ್ವಕಪ್‌ ಪಂದ್ಯಾವಳಿಯ ಅತ್ಯುತ್ತಮ ಸಾಧನೆಗೈದ ಅಸೋಸಿಯೇಟ್‌ ತಂಡವಾದ ನಮೀಬಿಯಾ ನೇರವಾಗಿ ಆಯ್ಕೆಯಾಗಿವೆ.ಉಳಿದ 5 ತಂಡಗಳು ಅರ್ಹತಾ ಪಂದ್ಯಾವಳಿಯಲ್ಲಿ ಆಡಿ ಅವಕಾಶ ಪಡೆದಿವೆ. ಇವುಗಳೆಂದರೆ ಕೀನ್ಯಾ, ಪಪುವಾ ನ್ಯೂ ಗಿನಿ, ಕೆನಡಾ, ಅಫ್ಘಾನಿಸ್ಥಾನ, ಅಯರ್‌ಲ್ಯಾಂಡ್‌. ಇವು ಗಳಲ್ಲಿ ಅಫ್ಘಾನಿಸ್ಥಾನ ಮತ್ತು ಅಯರ್‌ಲ್ಯಾಂಡ್‌ಗೆ ವಿಶ್ವಕಪ್‌ ಅರ್ಹತಾ ಪಂದ್ಯಾವಳಿಯ ವೇಳೆ ಟೆಸ್ಟ್‌ ಮಾನ್ಯತೆ ಲಭಿಸಿರಲಿಲ್ಲ. ಪ್ರತಿಯೊಂದು ವಿಭಾಗದ ಅಗ್ರ 2 ತಂಡಗಳು “ಸೂಪರ್‌ ಲೀಗ್‌’ನಲ್ಲಿ ಸೆಣಸಲಿವೆ. ಇವು ಕ್ವಾರ್ಟರ್‌ ಫೈನಲ್‌ ಮಾದರಿಯ ಪಂದ್ಯಗಳಾಗಿರುತ್ತವೆ. ಉಳಿದ 8 ತಂಡಗಳು “ಪ್ಲೇಟ್‌’ ವಿಭಾಗದಲ್ಲಿ ಆಡಲಿವೆ. ಸೂಪರ್‌ ಲೀಗ್‌ ಕ್ವಾರ್ಟರ್‌ ಫೈನಲ್ಸ್‌, ಸೆಮಿಫೈನಲ್ಸ್‌ ಹಾಗೂ ಫೈನಲ್‌ ಸಹಿತ 20 ಪಂದ್ಯಗಳು ನೇರ ಪ್ರಸಾರಗೊಳ್ಳಲಿವೆ. 

ಕಿವೀಸ್‌ಗೆ 3ನೇ ಆತಿಥ್ಯ: ಇದು ನ್ಯೂಜಿಲ್ಯಾಂಡಿಗೆ ಲಭಿಸುತ್ತಿರುವ 3ನೇ ಅಂಡರ್‌-19 ವಿಶ್ವಕಪ್‌ ಆತಿಥ್ಯ. ಇದಕ್ಕೂ ಮುನ್ನ 2002, 2010ರಲ್ಲಿ ನ್ಯೂಜಿಲ್ಯಾಂಡ್‌ ಯಶಸ್ವಿಯಾಗಿ ಪಂದ್ಯಾವಳಿಯನ್ನು ನಡೆಸಿತ್ತು.

ಟಾಪ್ ನ್ಯೂಸ್

ಏರ್‌ಇಂಡಿಯಾ ಮಾರಾಟ ಒಪ್ಪಂದ ಪತ್ರಕ್ಕೆ ಸಹಿ

ಏರ್‌ಇಂಡಿಯಾ ಮಾರಾಟ ಒಪ್ಪಂದ ಪತ್ರಕ್ಕೆ ಸಹಿ

ಆನ್‌ಲೈನ್‌ ದಾಳಿ: ಶಮಿ ಬೆಂಬಲಕ್ಕೆ ಸಹಸ್ರ ಮಂದಿ

ಆನ್‌ಲೈನ್‌ ದಾಳಿ: ಶಮಿ ಬೆಂಬಲಕ್ಕೆ ಸಹಸ್ರ ಮಂದಿ

ನವೆಂಬರ್‌ ಅಂತ್ಯಕ್ಕೆ ಮತ್ತೊಂದು ಲಸಿಕೆ?

ನವೆಂಬರ್‌ ಅಂತ್ಯಕ್ಕೆ ಮತ್ತೊಂದು ಲಸಿಕೆ?

ರಾಜಧಾನಿಯಲ್ಲಿ ಎವೈ 4.2 ರೂಪಾಂತರಿ ಪ್ರಕರಣ ವರದಿ

ರಾಜಧಾನಿಯಲ್ಲಿ ಎವೈ 4.2 ರೂಪಾಂತರಿ ಪ್ರಕರಣ ವರದಿ

ಟಿ20 ವಿಶ್ವಕಪ್‌: ಅಫ್ಘಾನ್‌ಗೆ ಭರ್ಜರಿ ಗೆಲುವು

ಟಿ20 ವಿಶ್ವಕಪ್‌: ಅಫ್ಘಾನ್‌ಗೆ ಭರ್ಜರಿ ಗೆಲುವು

ಉಪ ಚುನಾವಣೆ ಬಿಜೆಪಿ ಹಣ ಹಂಚುವ ಮೂಲಕ ಗೆಲ್ಲಲು ಯತ್ನ: ಸುರ್ಜೆವಾಲ ಆರೋಪ

ಉಪ ಚುನಾವಣೆ ಬಿಜೆಪಿ ಹಣ ಹಂಚುವ ಮೂಲಕ ಗೆಲ್ಲಲು ಯತ್ನ: ಸುರ್ಜೆವಾಲ ಆರೋಪ

ಉ.ಪ್ರ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ 10 ಲಕ್ಷ ರೂ.ವರೆಗಿನ ಚಿಕಿತ್ಸೆ ಉಚಿತ!

ಉ.ಪ್ರ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ 10 ಲಕ್ಷ ರೂ.ವರೆಗಿನ ಚಿಕಿತ್ಸೆ ಉಚಿತ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆನ್‌ಲೈನ್‌ ದಾಳಿ: ಶಮಿ ಬೆಂಬಲಕ್ಕೆ ಸಹಸ್ರ ಮಂದಿ

ಆನ್‌ಲೈನ್‌ ದಾಳಿ: ಶಮಿ ಬೆಂಬಲಕ್ಕೆ ಸಹಸ್ರ ಮಂದಿ

ಟಿ20 ವಿಶ್ವಕಪ್‌: ಅಫ್ಘಾನ್‌ಗೆ ಭರ್ಜರಿ ಗೆಲುವು

ಟಿ20 ವಿಶ್ವಕಪ್‌: ಅಫ್ಘಾನ್‌ಗೆ ಭರ್ಜರಿ ಗೆಲುವು

200

ಮುಂದಿನ ಐಪಿಎಲ್ ಗೆ ಇನ್ನೆರಡು ತಂಡಗಳ ಸೇರ್ಪಡೆ

ಹೊಸ ಐಪಿಎಲ್ ತಂಡಕ್ಕಾಗಿ ಪೈಪೋಟಿ: ಅಂತಿಮ ಬಿಡ್ ನಲ್ಲಿ 10 ಕಂಪನಿಗಳು

ಹೊಸ ಐಪಿಎಲ್ ತಂಡಕ್ಕಾಗಿ ಪೈಪೋಟಿ: ಅಂತಿಮ ಬಿಡ್ ನಲ್ಲಿ 10 ಕಂಪನಿಗಳು

51

ಪಾಕ್ ವಿರುದ್ಧ ಸೋಲಿನ ನಡುವೆಯೂ ಕ್ರೀಡಾ ಸ್ಫೂರ್ತಿ ಮೆರೆದ ಕೊಹ್ಲಿ, ಧೋನಿ

MUST WATCH

udayavani youtube

ಪತ್ತೆಯಾಗದ ಬಾಲಕನ ದೇಹ : ಕಾಳಿ ನದಿಯಲ್ಲಿ ಮುಂದುವರಿದ ಶೋಧ ಕಾರ್ಯಾಚರಣೆ

udayavani youtube

ಬಾಲಕನನ್ನು ಮೊಸಳೆ ಎಳೆದೊಯ್ದ ಪ್ರಕರಣ : ಬಾಲಕನ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

udayavani youtube

ಸೋತವನ ವಿರುದ್ದವೇ ಶರಣಾಗಿದ್ದೀಯ‌: ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಟಾಂಗ್

udayavani youtube

ಚಿಕ್ಕಮಗಳೂರು : ಕೆರೆಯಲ್ಲಿ ಈಜಲು ಹೋದ ಬಾಲಕ ನೀರಲ್ಲಿ ಮುಳುಗಿ ಸಾವು

udayavani youtube

ಶ್ರೀರಂಗಪಟ್ಟಣ ತಾಲೂಕಿನಾದ್ಯಂತ ಭಾರೀ ಮಳೆಗೆ ಸೇತುವೆ ಮುಳುಗಡೆ ರೈತರ ಬೆಳೆ ನಾಶ

ಹೊಸ ಸೇರ್ಪಡೆ

ಏರ್‌ಇಂಡಿಯಾ ಮಾರಾಟ ಒಪ್ಪಂದ ಪತ್ರಕ್ಕೆ ಸಹಿ

ಏರ್‌ಇಂಡಿಯಾ ಮಾರಾಟ ಒಪ್ಪಂದ ಪತ್ರಕ್ಕೆ ಸಹಿ

ಆನ್‌ಲೈನ್‌ ದಾಳಿ: ಶಮಿ ಬೆಂಬಲಕ್ಕೆ ಸಹಸ್ರ ಮಂದಿ

ಆನ್‌ಲೈನ್‌ ದಾಳಿ: ಶಮಿ ಬೆಂಬಲಕ್ಕೆ ಸಹಸ್ರ ಮಂದಿ

ನವೆಂಬರ್‌ ಅಂತ್ಯಕ್ಕೆ ಮತ್ತೊಂದು ಲಸಿಕೆ?

ನವೆಂಬರ್‌ ಅಂತ್ಯಕ್ಕೆ ಮತ್ತೊಂದು ಲಸಿಕೆ?

ರಾಜಧಾನಿಯಲ್ಲಿ ಎವೈ 4.2 ರೂಪಾಂತರಿ ಪ್ರಕರಣ ವರದಿ

ರಾಜಧಾನಿಯಲ್ಲಿ ಎವೈ 4.2 ರೂಪಾಂತರಿ ಪ್ರಕರಣ ವರದಿ

ಟಿ20 ವಿಶ್ವಕಪ್‌: ಅಫ್ಘಾನ್‌ಗೆ ಭರ್ಜರಿ ಗೆಲುವು

ಟಿ20 ವಿಶ್ವಕಪ್‌: ಅಫ್ಘಾನ್‌ಗೆ ಭರ್ಜರಿ ಗೆಲುವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.