ಆ್ಯಶಸ್‌ ಗೆಲ್ಲುವತ್ತ ಆಸೀಸ್‌


Team Udayavani, Dec 18, 2017, 9:50 AM IST

18-1.jpg

ಪರ್ತ್‌: ಮೂರೇ ಟೆಸ್ಟ್‌ ಪಂದ್ಯಗಳಲ್ಲಿ ಪ್ರತಿಷ್ಠಿತ ಆ್ಯಶಸ್‌ ಟ್ರೋಫಿ ಆಸ್ಟ್ರೇಲಿಯದ ವಶವಾಗುವ ಸೂಚನೆ ಲಭಿಸಿದೆ. ಪರ್ತ್‌ ಟೆಸ್ಟ್‌ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕುಸಿತ ಕಾಣುವ ಮೂಲಕ ಇಂಗ್ಲೆಂಡ್‌ ಸರಣಿ ಸೋಲುವುದು ಬಹುತೇಕ ಖಚಿತಗೊಂಡಿದೆ.

259 ರನ್ನುಗಳ ಹಿನ್ನಡೆಗೆ ಸಿಲುಕಿದ ರೂಟ್‌ ಪಡೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ ನಷ್ಟಕ್ಕೆ 132 ರನ್‌ ಗಳಿಸಿ ಸಂಕಟದಲ್ಲಿದೆ. ಇನ್ನೂ 127 ರನ್‌ ಹಿನ್ನಡೆಯಲ್ಲಿದೆ. ಸೋಮವಾರ ಪಂದ್ಯದ ಅಂತಿಮ ದಿನವಾಗಿದ್ದು, ಪಂದ್ಯ ಉಳಿಸಿಕೊಳ್ಳಬೇಕಾದರೆ ಇಂಗ್ಲೆಂಡ್‌ ಭಾರೀ ಹೋರಾಟವನ್ನೇ ಮಾಡಬೇಕಿದೆ. ರವಿವಾರ ಸಂಜೆ ಪರ್ತ್‌ನಲ್ಲಿ ಮಳೆಯಾಗಿದ್ದು, ಇದ ರಿಂದ ಆಟವನ್ನು ಬೇಗನೆ ಕೊನೆಗೊ ಳಿಸಲಾಯಿತು. ಈ ಮಳೆ ಕೊನೆಯ ದಿನ ಇಂಗ್ಲೆಂಡ್‌ ರಕ್ಷಣೆಗೆ ಬಂದೀತೇ ಎಂಬುದೊಂದು ನಿರೀಕ್ಷೆ!

5 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯ ಈಗಾಗಲೇ 2-0 ಮುಂದಿದೆ. ಪರ್ತ್‌ ಪಂದ್ಯವನ್ನೂ ಗೆದ್ದರೆ ಆಸ್ಟ್ರೇಲಿಯಕ್ಕೆ ಆ್ಯಶಸ್‌ ಬಹಳ ಬೇಗನೇ ಒಲಿಯಲಿದೆ. 2015ರ ಸರಣಿಯ ವೇಳೆ ಇದು ಇಂಗ್ಲೆಂಡ್‌ ಪಾಲಾಗಿತ್ತು. ಅಂದಿನ ತವರಿನ ಸರಣಿಯನ್ನು ಆಂಗ್ಲರ ಪಡೆ 3-2 ಅಂತರದಿಂದ ಗೆದ್ದಿತ್ತು.

ತವರಿನ ಅತ್ಯಧಿಕ ಸ್ಕೋರ್‌
4 ವಿಕೆಟಿಗೆ 549 ರನ್‌ ಮಾಡಿ 3ನೇ ದಿನದಾಟ ಮುಗಿಸಿದ್ದ ಆಸ್ಟ್ರೇಲಿಯ, ರವಿವಾರ ಬ್ಯಾಟಿಂಗ್‌ ಮುಂದುವರಿಸಿ 9ಕ್ಕೆ 662 ರನ್‌ ಪೇರಿಸಿ ಡಿಕ್ಲೇರ್‌ ಮಾಡಿತು. ಇದು ತವರಿನ ಆ್ಯಶಸ್‌ ಟೆಸ್ಟ್‌ ನಲ್ಲಿ ಆಸ್ಟ್ರೇಲಿಯ ಪೇರಿಸಿದ ಅತ್ಯಧಿಕ ಮೊತ್ತವಾಗಿದೆ. ಇದರೊಂದಿಗೆ 71 ವರ್ಷಗಳ ದಾಖಲೆ ಪತನಗೊಂಡಿತು. 1946ರ ಸಿಡ್ನಿ ಟೆಸ್ಟ್‌ನಲ್ಲಿ 8ಕ್ಕೆ 659 ರನ್‌ ಗಳಿಸಿದ್ದು ಆಸ್ಟ್ರೇಲಿಯದ ಅತ್ಯುತ್ತಮ ಸಾಧನೆಯಾಗಿತ್ತು.

ಆದರೆ ದೊಡ್ಡ ಮೊತ್ತ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ನಾಯಕ ಸ್ಟೀವ್‌ ಸ್ಮಿತ್‌ ಮತ್ತು ಮಿಚೆಲ್‌ ಮಾರ್ಷ್‌ ರವಿವಾರ ಬೇಗನೇ ನಿರ್ಗಮಿಸಿ ದರು. 181 ರನ್‌ ಮಾಡಿ ಆಡುತ್ತಿದ್ದ ಮಾರ್ಷ್‌, ಇದೇ ಮೊತ್ತಕ್ಕೆ ದಿನದ 2ನೇ ಎಸೆತದಲ್ಲೇ ಆ್ಯಂಡರ್ಸನ್‌ಗೆ ಲೆಗ್‌ ಬಿಫೋರ್‌ ಆದರು. 229 ರನ್‌ ಗಳಿಸಿದ್ದ ಸ್ಮಿತ್‌ ಈ ಮೊತ್ತಕ್ಕೆ ಸೇರಿಸಿದ್ದು 10 ರನ್‌ ಮಾತ್ರ. 239 ರನ್ನಿಗಾಗಿ ಅವರು 399 ಎಸೆತ ಎದುರಿಸಿದರು. 30 ಬೌಂಡರಿ ಹಾಗೂ ಒಂದು ಸಿಕ್ಸರ್‌ ಹೊಡೆದರು. ಇದು ಆ್ಯಶಸ್‌ನಲ್ಲಿ ಆಸೀಸ್‌ ನಾಯಕನೊಬ್ಬನ 3ನೇ ಸರ್ವಾಧಿಕ ಮೊತ್ತವಾಗಿದೆ. ಬಾಬ್‌ ಸಿಂಪ್ಸನ್‌ (311) ಮತ್ತು ಡಾನ್‌ ಬ್ರಾಡ್‌ಮನ್‌ (270) ಮೊದಲೆರಡು ಸ್ಥಾನ ಅಲಂಕರಿಸಿದ್ದಾರೆ.

5 ಬೌಲರ್‌ಗಳಿಂದ “ಶತಕ’!
ಇಂಗ್ಲೆಂಡ್‌ ಪರ ಜೇಮ್ಸ್‌ ಆ್ಯಂಡ ರ್ಸನ್‌ 116 ರನ್ನಿಗೆ 4 ವಿಕೆಟ್‌ ಕಿತ್ತು ಹೆಚ್ಚಿನ ಯಶಸ್ಸು ಸಾಧಿಸಿದರು. ಆದರೆ 5 ಬೌಲರ್‌ಗಳು 100 ಪ್ಲಸ್‌ ರನ್‌ ಬಿಟ್ಟುಕೊಟ್ಟದ್ದು ಆಂಗ್ಲರ ಬೌಲಿಂಗ್‌ ವೈಫ‌ಲ್ಯಕ್ಕೆ ಸಾಕ್ಷಿಯಾಯಿತು. ಟೆಸ್ಟ್‌ ಇತಿ ಹಾಸದ ಇನ್ನಿಂಗ್ಸ್‌ ಒಂದರಲ್ಲಿ ಐವರು ಬೌಲರ್‌ಗಳು ನೂರಕ್ಕೂ ಹೆಚ್ಚು ರನ್‌ ನೀಡಿದ ಕೇವಲ 8ನೇ ದೃಷ್ಟಾಂತ ಇದಾಗಿದೆ. ಇದರಲ್ಲಿ ಇಂಗ್ಲೆಂಡ್‌ ಅತಿ ಹೆಚ್ಚು 3 ಸಲ ಈ ಸಂಕಟಕ್ಕೆ ಸಿಲುಕಿದೆ.ಇಂಗ್ಲೆಂಡ್‌ ದ್ವಿತೀಯ ಸರದಿಯಲ್ಲಿ ಕುಕ್‌ (14), ಸ್ಟೋನ್‌ಮ್ಯಾನ್‌ (3), ವಿನ್ಸ್‌ (55) ಮತ್ತು ರೂಟ್‌ (14) ವಿಕೆಟ್‌ ಕಳೆದುಕೊಂಡಿದೆ. ಕ್ರೀಸಿನಲ್ಲಿ ರುವವರು ಮೊದಲ ಸರದಿಯ ಶತಕ ವೀರರಾದ ಮಾಲನ್‌ (28) ಮತ್ತು ಬೇರ್‌ಸ್ಟೊ (14). 

ಸಂಕ್ಷಿಪ್ತ ಸ್ಕೋರ್‌ 
ಇಂಗ್ಲೆಂಡ್‌-403 ಮತ್ತು 4 ವಿಕೆಟಿಗೆ 132 (ವಿನ್ಸ್‌ 55, ಮಾಲನ್‌ ಬ್ಯಾಟಿಂಗ್‌ 25, ಹ್ಯಾಝಲ್‌ವುಡ್‌ 23ಕ್ಕೆ 2). ಆಸ್ಟ್ರೇಲಿಯ-9ಕ್ಕೆ 662 ಡಿಕ್ಲೇರ್‌ (ಸ್ಮಿತ್‌ 239, ಎಂ. ಮಾರ್ಷ್‌ 181, ಪೇನ್‌ 49, ಕಮಿನ್ಸ್‌ 41, ಆ್ಯಂಡರ್ಸನ್‌ 116ಕ್ಕೆ 4, ಓವರ್ಟನ್‌ 110ಕ್ಕೆ 2).

ಟಾಪ್ ನ್ಯೂಸ್

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Virat Kohli Fan: ಕೊಹ್ಲಿ ಕಾಲಿಗೆರಗಿದ ಅಭಿಮಾನಿಗೆ ಭದ್ರತಾ ಸಿಬಂದಿಯಿಂದ ಹಲ್ಲೆ?

Virat Kohli Fan: ಕೊಹ್ಲಿ ಕಾಲಿಗೆರಗಿದ ಅಭಿಮಾನಿಗೆ ಭದ್ರತಾ ಸಿಬಂದಿಯಿಂದ ಹಲ್ಲೆ?

MS Dhoni Catch: 42ರ ಧೋನಿಯ ಡೈವಿಂಗ್‌ ಕ್ಯಾಚ್‌!

MS Dhoni Catch: 42ರ ಧೋನಿಯ ಡೈವಿಂಗ್‌ ಕ್ಯಾಚ್‌!

Ipl: ಪಂತ್‌ ಪಡೆಗೆ ರಾಜಸ್ಥಾನ್‌ ರಾಯಲ್ಸ್‌ ಚಾಲೆಂಜ್‌

Ipl: ಪಂತ್‌ ಪಡೆಗೆ ರಾಜಸ್ಥಾನ್‌ ರಾಯಲ್ಸ್‌ ಚಾಲೆಂಜ್‌

IPL 2024: ಧೋನಿ ಸೂಚನೆಯಂತೆ ಆಡಿದೆ: ರಿಝ್ವಿ

IPL 2024: ಧೋನಿ ಸೂಚನೆಯಂತೆ ಆಡಿದೆ: ರಿಝ್ವಿ

ipl: ರನ್‌ ಪರ್ವತ ಏರಿದ ಹೈದರಾಬಾದ್‌, ಆರ್‌ಸಿಬಿ ದಾಖಲೆ ಪತನ

Ipl: ರನ್‌ ಪರ್ವತ ಏರಿದ ಹೈದರಾಬಾದ್‌, ಆರ್‌ಸಿಬಿ ದಾಖಲೆ ಪತನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.