ಕೊಕೇನ್ ಸೇವಿಸಿ ನಗ್ನವಾಗಿ ಕುಣಿದ ಕ್ರಿಕೆಟರ್: ಮತ್ತೆ ವಿವಾದದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ!
Team Udayavani, Dec 26, 2021, 11:49 AM IST
ಕ್ಯಾನ್ ಬೆರಾ: ಕಳೆದ ಹಲವು ವರ್ಷಗಳಿಂದ ಕೆಲವು ವಿವಾದಗಳನ್ನು ಕಂಡಿರುವ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಇದೀಗ ಮತ್ತೊಂದು ವಿವಾದವನ್ನು ಎದುರಿಸುತ್ತಿದೆ. ಕ್ರಿಕೆಟರ್ ಒಬ್ಬ ಕೊಕೇನ್ ಮಾದಕದ್ರವ್ಯ ಸೇವಿಸಿ ನಗ್ನವಾಗಿ ಕುಣಿದ ವಿಚಾರೊಂದು ಸುದ್ದಿಯಾಗಿದೆ.
ಮೆಲ್ಬೋರ್ನ್ನ ‘ದಿ ಏಜ್’ ಪತ್ರಿಕೆಯು ಈ ಬಗ್ಗೆ ವರದಿ ಮಾಡಿದ್ದು, ಮಹಿಳೆ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಇಂಟೆಗ್ರಿಟಿಯ ಮಾಜಿ ಮುಖ್ಯಸ್ಥ ಸೀನ್ ಕ್ಯಾರೊಲ್ ನಡುವಿನ ಫೋನ್ ಕರೆಯ ರೆಕಾರ್ಡಿಂಗ್ ಅನ್ನು ಸ್ವೀಕರಿಸಿದೆ ಎಂದು ಭಾನುವಾರ ವರದಿಯಲ್ಲಿ ತಿಳಿಸಿದೆ. ಈ ಸಂಭಾಷಣೆಯಲ್ಲಿ ಆಟಗಾರರೊಬ್ಬರು ಕೊಕೇನ್ ಬಳಸುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ತನ್ನನ್ನು ಉನ್ನತ ದರ್ಜೆಯ ಎಸ್ಕಾರ್ಟ್ ಎಂದು ಪರಿಚಯಿಸಿರುವ ಮಹಿಳೆ, ಅಪರಿಚಿತ ಆಟಗಾರನು ಕೊಕೇನ್ನ ಹೊಡೆಯುತ್ತಿದ್ದನು ಮತ್ತು ಪಾರ್ಟಿ ಮಾಡುವಾಗ ಬಾಲ್ಕನಿಯಲ್ಲಿ ಬೆತ್ತಲೆಯಾಗಿ ನೃತ್ಯ ಮಾಡುತ್ತಿದ್ದಾನೆ ಎಂದು ಹೇಳಿದ್ದಾರೆ.
ಫೋನ್ ಕರೆ ಯಾವಾಗ ನಡೆಯಿತು ಎಂಬುದು ಸ್ಪಷ್ಟವಾಗಿಲ್ಲ. ಸೀನ್ ಕ್ಯಾರೊಲ್ ಒಂದು ವರ್ಷದ ಹಿಂದೆ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ತೊರೆದಿದ್ದಾರೆ.
ಇದನ್ನೂ ಓದಿ:ಫ್ರಾನ್ಸ್ ನಲ್ಲಿ ಒಂದೇ ದಿನ ಲಕ್ಷಕ್ಕೂ ಹೆಚ್ಚು ಕೋವಿಡ್ 19 ಸೋಂಕು ಪ್ರಕರಣಗಳು ಪತ್ತೆ!
ಈ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಮುಖ್ಯಸ್ಥ ನಿಕ್ ಹಾಕ್ಲಿ ಪ್ರತಿಕ್ರಿಯೆ ನೀಡಿದ್ದು, ಮಹಿಳೆಯ ಆರೋಪವು “ಅಸಾಧಾರಣ” ಮತ್ತು “ಐತಿಹಾಸಿಕ”, ಗೌಪ್ಯ ಮಾಹಿತಿಯನ್ನು ಕದಿಯುವುದು ಅಪರಾಧ. ಸುದ್ದಿ ಸೋರಿಕೆಯ ಕುರಿತು ಮಂಡಳಿಯು ಪೊಲೀಸರನ್ನು ಸಂಪರ್ಕಿಸಿದೆ ಎಂದು ಹಾಕ್ಲಿ ಹೇಳಿದರು.
ಅನಾಮಧೇಯ ವಿಳಾಸದಿಂದ ಎನ್ಕ್ರಿಪ್ಟ್ ಮಾಡಿದ ಇಮೇಲ್ ಸೇವೆಯ ಮೂಲಕ ರೆಕಾರ್ಡಿಂಗ್ ಅನ್ನು ಪೇಪರ್ಗೆ ಕಳುಹಿಸಲಾಗಿದೆ ಎಂದು ‘ದಿ ಏಜ್’ ಹೇಳಿದೆ.
ಕೆಲ ದಿನಗಳ ಹಿಂದೆ ಮಾಜಿ ಟೆಸ್ಟ್ ನಾಯಕ ಟಿಮ್ ಪೇನ್ ಅವರ ಸೆಕ್ಸ್ಟಿಂಗ್ ವಿಚಾರ ಬಯಲಾಗಿತ್ತು. ಇದಾದ ಬಳಿಕ ಪೇನ್ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು.