ಇಂದು ಪ್ರಜ್ಞೇಶ್ ಆಟ
Team Udayavani, Jan 14, 2019, 12:30 AM IST
ಮೆಲ್ಬರ್ನ್: ಭಾರತದ ಟೆನಿಸ್ ಅಭಿಮಾನಿಗಳ ಪಾಲಿಗೆ ಈ ಸಲದ ಆಸ್ಟ್ರೇಲಿಯನ್ ಓಪನ್ ಹೆಚ್ಚು ಕುತೂಹಲಕಾರಿಯಾಗಿ ಪರಿಣಮಿಸಿದೆ. ಕಾರಣ, ದೇಶದ ಅಗ್ರಮಾನ್ಯ ಸಿಂಗಲ್ಸ್ ಆಟಗಾರ ಪ್ರಜ್ಞೇಶ್ ಗುಣೇಶ್ವರ್ ಇದೇ ಮೊದಲ ಸಲ ಗ್ರ್ಯಾನ್ಸ್ಲಾಮ್ ಮುಖ್ಯ ಸುತ್ತಿನಲ್ಲಿ ಆಡುವ ಅವಕಾಶ ಪಡೆದಿರುವುದು. ಸೋಮ್ದೇವ್ ದೇವವರ್ಮನ್, ಯೂಕಿ ಭಾಂಬ್ರಿ ಬಳಿಕ ಗ್ರ್ಯಾನ್ಸ್ಲಾಮ್ ಸಿಂಗಲ್ಸ್ ಆಡುತ್ತಿರುವ ಭಾರತದ 3ನೇ ಆಟಗಾರನಾಗಿದ್ದಾರೆ.
ಅರ್ಹತಾ ಸುತ್ತಿನ ಅದೃಷ್ಟಪರೀಕ್ಷೆಯಲ್ಲಿ ಗೆದ್ದು ಬಂದ ಪ್ರಜ್ಞೇಶ್ ಗುಣೇಶ್ವರನ್, ಸೋಮವಾರದ ಮೊದಲ ಸುತ್ತಿನ ಪಂದ್ಯದಲ್ಲಿ ಅಮೆರಿಕದ 39ನೇ ರ್ಯಾಂಕಿಂಗ್ನ ಫ್ರಾನ್ಸೆಸ್ ಟಿಯಾಫೊ ಸವಾಲನ್ನು ಎದುರಿಸಲಿದ್ದಾರೆ. ಈ ಪಂದ್ಯ ಬೆಳಗ್ಗೆ 6.45ರ ಹೊತ್ತಿಗೆ ಆರಂಭವಾಗಲಿದೆ.