ನಡಾಲ್ ಕ್ವಾರ್ಟರ್ಗೆ ನಾಗಾಲೋಟ
Team Udayavani, Jan 22, 2018, 1:09 PM IST
ಮರಿನ್: ಸ್ಪೇನ್ನ ರಫೆಲ್ ನಡಾಲ್ ಅವರು ನಾಲ್ಕು ಸೆಟ್ಗಳ ಕಠಿನ ಹೋರಾಟದಲ್ಲಿ ಆರ್ಜೆಂಟೀನಾದ ಡೀಗೊ ಸ್ವಾರ್ಶ್ಮನ್ ಅವರನ್ನು ಕೆಡಹಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಕೂಟದ ಕ್ವಾರ್ಟರ್ಫೈನಲಿಗೇರಿದ್ದಾರೆ. ಈ ಮೂಲಕ ಕೂಟ ಮುಗಿದ ಬಳಿಕ ವಿಶ್ವದ ನಂಬರ್ ವನ್ ಸ್ಥಾನದಲ್ಲಿ ಉಳಿಯುವುದನ್ನು ಖಚಿತಪಡಿಸಿದ್ದಾರೆ.
ನಾಲ್ಕು ಸೆಟ್ಗಳ ಕಠಿನ ಹೋರಾಟದಲ್ಲಿ ಭಾಗಿಯಾದ ನಡಾಲ್ 6-3, 6-7 (4-7), 6-3, 6-3 ಅಂತರದಿಂದ ಸ್ವಾರ್ಶ್ಮನ್ ಅವರನ್ನು ಕೆಡಸಿ ಮುನ್ನಡೆದರು. ನಡಾಲ್ ಇಲ್ಲಿ ಕ್ವಾರ್ಟರ್ಫೈನಲಿಗೇರಿರುವುದು ಇದು 10ನೇ ಸಲ ವಾಗಿದೆ. ಫೆಡರರ್ ಬಳಿಕ ಈ ಸಾಧನೆಗೈದ ಮೊದಲ ಆಟಗಾರರಾಗಿದ್ದಾರೆ. ನಡಾಲ್ ಕ್ವಾರ್ಟರ್ಫೈನಲ್ನಲ್ಲಿ ಕ್ರೊವೇಶಿಯದ ಆರನೇ ಶ್ರೇಯಾಂಕದ ಮರಿನ್ ಸಿಲಿಕ್ ಅವರನ್ನು ಎದುರಿಸಲಿದ್ದಾರೆ. ಸಿಲಿಕ್ ವಿರುದ್ಧ ನಡಾಲ್ ಈ ಹಿಂದೆ ಆರು ಬಾರಿ ಪರಸ್ಪರ ಮುಖಾಮುಖೀಯಾಗಿದ್ದು 5 ಬಾರಿ ಗೆಲುವಿನ ದಾಖಲೆ ಹೊಂದಿದ್ದಾರೆ.
ಸಿಲಿಕ್ 100ನೇ ಗೆಲುವು
ನಡಾಲ್ ಅವರ ಕ್ವಾರ್ಟರ್ಫೈನಲ್ ಎದುರಾಳಿ ಮರಿನ್ ಸಿಲಿಕ್ ಇನ್ನೊಂದು ಪ್ರಿ-ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಸ್ಪೇನ್ನ ಪಾಬ್ಲೊ ಕ್ಯಾರೆನೊ ಬುಸ್ಟ ಅವರನ್ನು ಉರುಳಿಸಲು ನಾಲ್ಕು ಸೆಟ್ಗಳ ಹೋರಾಟ ನಡೆಸಿದ್ದರು. 3 ತಾಸು 27 ನಿಮಿಷಗಳವರೆಗೆ ಸಾಗಿದ ಈ ಪಂದ್ಯದಲ್ಲಿ ಸಿಲಿಕ್ 5-7 (2-7), 6-3, 7-6 (7-0), 7-6 (7-3) ಸೆಟ್ಗಳಿಂದ ಜಯಭೇರಿ ಬಾರಿಸಿದರು. ಇದು ಗ್ರ್ಯಾನ್ಸ್ಲಾಮ್ನಲ್ಲಿ ಸಿಲಿಕ್ ಅವರ 100ನೇ ಗೆಲುವು ಆಗಿದೆ. ಅವರು ಮೆಲ್ಬರ್ನ್ನಲ್ಲಿ ಎರಡನೇ ಬಾರಿ ಕ್ವಾರ್ಟರ್ಫೈನಲಿಗೇರಿದ್ದಾರೆ.
ಎಡ್ಮಂಡ್ ಮುನ್ನಡೆ
ಬ್ರಿಟನ್ನ ಕೈಲ್ ಎಡ್ಮಂಡ್ ನಾಲ್ಕು ಸೆಟ್ಗಳ ಪಂದ್ಯದಲ್ಲಿ ಇಟಲಿಯ ಆಂದ್ರೇ ಸೆಪ್ಪಿ ಅವರನ್ನು ಕೆಡಹಿ ಗ್ರ್ಯಾನ್ಸ್ಲಾಮ್ ಕೂಟದಲ್ಲಿ ಮೊದಲ ಬಾರಿ ಕ್ವಾರ್ಟರ್ಫೈನಲಿಗೇರಿದ್ದಾರೆ. ಗಾಯಗೊಂಡ ಆ್ಯಂಡಿ ಮರ್ರೆ ಅವರ ಅನುಪಸ್ಥಿತಿಯಲ್ಲಿ ಮುಖ್ಯ ಡ್ರಾದಲ್ಲಿ ಆಡುತ್ತಿರುವ ಬ್ರಿಟನ್ನ ಏಕೈಕ ಆಟಗಾರರಾಗಿರುವ 23ರ ಹರೆಯದ ಎಡ್ಮಂಡು 25 ಏಸ್ ಸಿಡಿಸಿ ಸೆಪ್ಪಿ ಅವರನ್ನು 6-7 (4), 7-5, 6-2, 6-3 ಸೆಟ್ಗಳಿಂದ ಹೊರದಬ್ಬಿದರು.
ದಿಮಿತ್ರೋವ್ ಗೆಲುವು
ಬಲ್ಗೇರಿಯದ ಗ್ರಿಗರ್ ದಿಮಿತ್ರೋವ್ ನಾಲ್ಕು ಸೆಟ್ಗಳ ಮ್ಯಾರಥಾನ್ ಹೋರಾಟದಲ್ಲಿ ಆಸ್ಟ್ರೇಲಿಯದ ನಿಕ್ ಕಿರ್ಗಿಯೋಸ್ ಅವರನ್ನು ಉರುಳಿಸಿ ಕ್ವಾರ್ಟರ್ಫೈನಲಿಗೇರಿದ್ದಾರೆ. 3 ತಾಸು 26 ನಿಮಿಷಗಳ ಸಂಘರ್ಷಪೂರ್ಣ ಸಮರದಲ್ಲಿ ದಿಮಿತ್ರೋವ್ 7-6 (7-3), 7-6 (7-4), 4-6, 7-3 (7-4) ಸೆಟ್ಗಳಿಂದ ಜಯ ಸಾಧಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ