ಆಸ್ಟ್ರೇಲಿಯಾ ಬ್ಯಾಡ್ಮಿಂಟನ್‌: ಭಾರತದ ನಾಲ್ವರು ಕ್ವಾ.ಫೈನಲ್‌ಗೆ

Team Udayavani, Jun 23, 2017, 10:43 AM IST

asd.jpg

ಸಿಡ್ನಿ: ಆಸ್ಟ್ರೇಲಿಯಾ ಬ್ಯಾಡ್ಮಿಂಟನ್‌ ಕೂಟ ದಲ್ಲಿ ಭಾರತ ಗೆಲುವಿನ ಅಭಿಯಾನ ಮುಂದುವರಿಸಿದೆ. ಸೈನಾ ನೆಹ್ವಾಲ್‌, ಪಿ.ವಿ.ಸಿಂಧು, ಕೆ.ಶ್ರೀಕಾಂತ್‌, ಸಾಯಿ ಪ್ರಣೀತ್‌ ಸಿಂಗಲ್ಸ್‌ ವಿಭಾಗದಲ್ಲಿ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಸೈನಾ ನೆಹ್ವಾಲ್‌ 21-15, 20-22, 21-14 ರಿಂದ ಮಲೇಷ್ಯಾದ ಸೋನಿಯ ಚೋಹ ವಿರುದ್ಧ ಹೋರಾಟದ ಜಯ ಸಾಧಿಸಿದರು. 1ನೇ ಗೇಮ್‌ ಅನ್ನು ಸುಲಭವಾಗಿ ಗೆದ್ದ ಭಾರತೀಯ ಆಟಗಾರ್ತಿಗೆ 2ನೇ ಗೇಮ್‌ನಲ್ಲಿ ಮಲೇಷ್ಯಾ ಆಟಗಾರ್ತಿ ತಿರುಗೇಟು ನೀಡಿದ್ದರು.

ಜಿದ್ದಾಜಿದ್ದಿನಿಂದ ಕೂಡಿದ 2ನೇ ಗೇಮ್‌ನಲ್ಲಿ ಸೈನಾ ಅಂತಿಮ ಕ್ಷಣದಲ್ಲಿ ಕಳೆದುಕೊಂಡರು. ಹೀಗಾಗಿ ಪಂದ್ಯ ಮೂರನೇ ಗೇಮ್‌ಗೆ ಹೋಯಿತು. ಈ ಹಂತದಲ್ಲಿ ಚುರುಕಿನ ಪ್ರದರ್ಶನ ನೀಡಿದ ಸೈನಾ 21-14 ರಿಂದ ಗೆದ್ದು ಕ್ವಾರ್ಟರ್‌ ಫೈನಲ್‌ಗೆ ಪ್ರವೇಶಿಸಿದರು.

ಮಹಿಳೆಯರ ಮತ್ತೂಂದು ಸಿಂಗಲ್ಸ್‌ ಪಂದ್ಯದಲ್ಲಿ ಸಿಂಧು 21-13, 21-18 ರಿಂದ ಚೀನಾದ ಚೆನ್‌ ಕ್ಸಿಯಾಕ್ಸಿನ್‌ ವಿರುದ್ಧ ಗೆದ್ದು ಕ್ವಾರ್ಟರ್‌ ಫೈನಲ್‌ಗೆ ಪ್ರವೇಶಿಸಿದ್ದಾರೆ. ವಿಶ್ವ ನಂ.5ನೇ ಶ್ರೇಯಾಂಕಿತ ಸಿಂಧು 46 ನಿಮಿಷ ನಡೆದ ಹೋರಾಟದಲ್ಲಿ ನೇರ ಸೆಟ್‌ನಲ್ಲಿಯೇ ಜಯ ಸಾಧಿಸಿದರು.

ಶ್ರೀಕಾಂತ್‌, ಪ್ರಣೀತ್‌ಗೆ ಜಯ: ಇಂಡೋ ನೇಷ್ಯಾ ಓಪನ್‌ ಪ್ರಶಸ್ತಿ ವಿಜೇತ ಶ್ರೀಕಾಂತ್‌ 15-21, 21-13, 21-13 ರಿಂದ ವಿಶ್ವ ನಂ.1 ಶ್ರೇಯಾಂಕಿತ ಕೊರಿಯಾದ ಸನ್‌ ವಾನ್‌ ಹೂಗೆ ಆಘಾತ ನೀಡಿದರು.

ಇಂಡೋನೇಷ್ಯಾ ಓಪನ್‌ ಸೆಮಿಫೈನಲ್‌ ಪಂದ್ಯದಲ್ಲಿ ಕೂಡ ಸನ್‌ ವಾನ್‌ ಹೂಗೆ ಶ್ರೀಕಾಂತ್‌ ಸೋಲುಣಿಸಿದ್ದರು.
ಹೀಗಾಗಿ ಶ್ರೀಕಾಂತ್‌ಗೆ ವಿಶ್ವ ನಂ.1 ಶ್ರೇಯಾಂಕಿತ ಆಟಗಾರನ ವಿರುದ್ಧ 2ನೇ ಜಯವಾಗಿದೆ. 57 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಮೊದಲ ಗೇಮ್‌ ಕಳೆದುಕೊಂಡ ಭಾರತೀಯ ಆಟಗಾರ 2 ಮತ್ತು 3ನೇ ಗೇಮ್‌ ಗೆದ್ದು ಕ್ವಾರ್ಟರ್‌ಗೆ ಪ್ರವೇಶಿಸಿದರು. ಜಿದ್ದಿಜಿದ್ದಿನಿಂದ ನಡೆದ ಹೋರಾಟದಲ್ಲಿ ಶ್ರೀಕಾಂತ್‌ ಅದ್ಭುತ ಹೋರಾಟ ಪ್ರದರ್ಶಿಸಿದರು.

ಪುರುಷ ಮತ್ತೂಂದು ಸಿಂಗಲ್ಸ್‌ ಪಂದ್ಯದಲ್ಲಿ ಭಾರತೀಯ ಆಟಗಾರ ಸಾಯಿ ಪ್ರಣೀತ್‌ 21-15, 18-21,21-13 ರಿಂದ ಚೀನಾದ ಹುವಾಂಗ್‌ ಯುಕ್ಸಿಯಾಂಗ್‌ ವಿರುದ್ಧ ಹೋರಾಟದ ಜಯ ದಾಖಲಿಸಿದರು. ಮೊದಲ ಗೇಮ್‌ ಗೆದ್ದ ಪ್ರಣೀತ್‌ಗೆ ಚೀನಿ ಆಟಗಾರ 2ನೇ ಗೇಮ್‌ನಲ್ಲಿ ತಿರುಗೇಟು ನೀಡಿದ್ದರು. ಆದರೆ ನಿರ್ಣಾಯಕವಾಗಿದ್ದ 3ನೇ ಗೇಮ್‌ ಅನ್ನು ಪ್ರಣೀತ್‌ ವಶಪಡಿಸಿಕೊಂಡು ಕ್ವಾರ್ಟರ್‌ಗೆ ಪ್ರವೇಶಿಸಿದರು.

ಕ್ವಾರ್ಟರ್‌ನಲ್ಲಿಶ್ರೀಕಾಂತ್‌,
ಪ್ರಣೀತ್‌ ಹಣಾಹಣಿ

ಆಸ್ಟ್ರೇಲಿಯಾ ಓಪನ್‌ನ 2ನೇ ಸುತ್ತಿನಲ್ಲಿ ಜಯ ಸಾಧಿಸಿದ ಭಾರತೀಯ ಆಟಗಾರರಾದ ಶ್ರೀಕಾಂತ್‌ ಮತ್ತು ಸಾಯಿ ಪ್ರಣೀತ್‌ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಮುಖಾಮುಖೀಯಾಗಲಿದ್ದಾರೆ. ಇಬ್ಬರು ಇತ್ತೀಚೆಗೆ ಭರ್ಜರಿ ಫಾಮ್‌ನಲ್ಲಿರುವುದರಿಂದ ತೀವ್ರ ಹೋರಾಟವನ್ನು ನಿರೀಕ್ಷಿಸಬಹುದು.

ಟಾಪ್ ನ್ಯೂಸ್

ಪಂಚಾಯತ್‌ರಾಜ್‌ ಸಂಸ್ಥೆಗಳಲ್ಲಿ ಚುನಾಯಿತ ಆಡಳಿತ ಅಸ್ತಿತ್ವಕ್ಕೆ ಬರಲಿ

ಪಂಚಾಯತ್‌ರಾಜ್‌ ಸಂಸ್ಥೆಗಳಲ್ಲಿ ಚುನಾಯಿತ ಆಡಳಿತ ಅಸ್ತಿತ್ವಕ್ಕೆ ಬರಲಿ

ವಿಧಾನ ಕದನ : ಕಲ್ಪತರು ನಾಡಲ್ಲಿ ಪಕ್ಷಾಂತರಕ್ಕೆ ಸಜ್ಜಾದ ನಾಯಕರು

ವಿಧಾನ ಕದನ : ಕಲ್ಪತರು ನಾಡಲ್ಲಿ ಪಕ್ಷಾಂತರಕ್ಕೆ ಸಜ್ಜಾದ ನಾಯಕರು

ಎಫ್ ಡಿಐ : ಕೇವಲ ಒಪ್ಪಂದಕ್ಕೆ ಸೀಮಿತವಾಗದೆ ಕಾರ್ಯಗತಗೊಳ್ಳಲಿ

ಎಫ್ ಡಿಐ : ಕೇವಲ ಒಪ್ಪಂದಕ್ಕೆ ಸೀಮಿತವಾಗದೆ ಕಾರ್ಯಗತಗೊಳ್ಳಲಿ

ಕುಂದಾಪುರದ ಅನಿಲ್‌ ಹೆಗ್ಡೆ ಬಿಹಾರದಿಂದ ರಾಜ್ಯಸಭೆಗೆ ಆಯ್ಕೆ

ಕುಂದಾಪುರದ ಅನಿಲ್‌ ಹೆಗ್ಡೆ ಬಿಹಾರದಿಂದ ರಾಜ್ಯಸಭೆಗೆ ಆಯ್ಕೆ

ಇತಿಹಾಸ ತಿರುಚಿಲ್ಲ ; ತಪ್ಪು ತಿದ್ದಿದ್ದೇವೆ; ರಾವಣ ಸಂಸ್ಕೃತಿ ಬಿಂಬಿಸುವ ಪಠ್ಯಕ್ಕೆ ತಿಲಾಂಜಲಿ

ಇತಿಹಾಸ ತಿರುಚಿಲ್ಲ ; ತಪ್ಪು ತಿದ್ದಿದ್ದೇವೆ; ರಾವಣ ಸಂಸ್ಕೃತಿ ಬಿಂಬಿಸುವ ಪಠ್ಯಕ್ಕೆ ತಿಲಾಂಜಲಿ

ಶಕ್ತಿ ಸೌಧದ ಆವರಣದಲ್ಲಿ ಅಂಬೇಡ್ಕರ್‌ ಸ್ಫೂರ್ತಿ ಭವನ

ಶಕ್ತಿ ಸೌಧದ ಆವರಣದಲ್ಲಿ ಅಂಬೇಡ್ಕರ್‌ ಸ್ಫೂರ್ತಿ ಭವನ

ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಗಡಿ ನಿಗದಿಗೆ ಮಾರ್ಗಸೂಚಿ

ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಗಡಿ ನಿಗದಿಗೆ ಮಾರ್ಗಸೂಚಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವನಿತಾ ಟಿ20 ಚಾಲೆಂಜರ್‌ ಸರಣಿ: ಸೂಪರ್‌ ನೋವಾ ಸೂಪರ್‌ ಬ್ಯಾಟಿಂಗ್‌

ವನಿತಾ ಟಿ20 ಚಾಲೆಂಜರ್‌ ಸರಣಿ: ಸೂಪರ್‌ ನೋವಾಗೆ ಸೂಪರ್‌ ಗೆಲುವು

ವನಿತೆಯರ 100 ಮೀ. ಹರ್ಡಲ್‌: ಜ್ಯೋತಿ ರಾಷ್ಟ್ರೀಯ ದಾಖಲೆ

ವನಿತೆಯರ 100 ಮೀ. ಹರ್ಡಲ್‌: ಜ್ಯೋತಿ ರಾಷ್ಟ್ರೀಯ ದಾಖಲೆ

ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಮ್‌: ನವೋಮಿ ಒಸಾಕಾ ಪತನ

ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಮ್‌: ನವೋಮಿ ಒಸಾಕಾ ಪತನ

1-asdsad

ಏಷ್ಯಾಕಪ್ ಹಾಕಿ : ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಡ್ರಾ

1-ffff

ಫ್ರಾನ್ಸ್ ನಲ್ಲಿ ಚಿನ್ನ ಗೆದ್ದ ಪ್ರೇರಣಾಗೆ ಶಿರಸಿಯಲ್ಲಿ ನಾಗರಿಕ ಸಮ್ಮಾನ

MUST WATCH

udayavani youtube

ಎಸೆಸೆಲ್ಸಿ, ಪಿಯುಸಿ ನಂತರ ಅಗಾಧ ಅವಕಾಶ : “ಉದಯವಾಣಿ’ ವಿಶೇಷ ಕಾರ್ಯಕ್ರಮ

udayavani youtube

ದಾವೋಸ್ ನಲ್ಲಿ ಸಿಎಂ : ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಭಾಗಿ

udayavani youtube

ನಾಳೆಯ ಕನಸು ಹೊತ್ತ ಬಾಲಕನಿಗೆ ಬೇಕಿದೆ ಆರ್ಥಿಕ ನೆರವಿನ ಹಸ್ತ

udayavani youtube

ಶಿರೂರು ಆಳ ಸಮುದ್ರದಲ್ಲಿ‌ ಮುಳುಗಿದ ಮೀನುಗಾರಿಕಾ ದೋಣಿ

udayavani youtube

ಉಡುಪಿಯಲ್ಲಿ ‘ ಮಾವಿನ ಮೇಳ ‘ | ನಾಳೆ ( may 23) ಕೊನೇ ದಿನ

ಹೊಸ ಸೇರ್ಪಡೆ

ತುಳುನಾಡಿನ ವಿಶಿಷ್ಟ ಪರ್ವದಿನ ಪತ್ತನಾಜೆ

ತುಳುನಾಡಿನ ವಿಶಿಷ್ಟ ಪರ್ವದಿನ ಪತ್ತನಾಜೆ

ಪಂಚಾಯತ್‌ರಾಜ್‌ ಸಂಸ್ಥೆಗಳಲ್ಲಿ ಚುನಾಯಿತ ಆಡಳಿತ ಅಸ್ತಿತ್ವಕ್ಕೆ ಬರಲಿ

ಪಂಚಾಯತ್‌ರಾಜ್‌ ಸಂಸ್ಥೆಗಳಲ್ಲಿ ಚುನಾಯಿತ ಆಡಳಿತ ಅಸ್ತಿತ್ವಕ್ಕೆ ಬರಲಿ

ವಿಧಾನ ಕದನ : ಕಲ್ಪತರು ನಾಡಲ್ಲಿ ಪಕ್ಷಾಂತರಕ್ಕೆ ಸಜ್ಜಾದ ನಾಯಕರು

ವಿಧಾನ ಕದನ : ಕಲ್ಪತರು ನಾಡಲ್ಲಿ ಪಕ್ಷಾಂತರಕ್ಕೆ ಸಜ್ಜಾದ ನಾಯಕರು

ಎಫ್ ಡಿಐ : ಕೇವಲ ಒಪ್ಪಂದಕ್ಕೆ ಸೀಮಿತವಾಗದೆ ಕಾರ್ಯಗತಗೊಳ್ಳಲಿ

ಎಫ್ ಡಿಐ : ಕೇವಲ ಒಪ್ಪಂದಕ್ಕೆ ಸೀಮಿತವಾಗದೆ ಕಾರ್ಯಗತಗೊಳ್ಳಲಿ

ಕುಂದಾಪುರದ ಅನಿಲ್‌ ಹೆಗ್ಡೆ ಬಿಹಾರದಿಂದ ರಾಜ್ಯಸಭೆಗೆ ಆಯ್ಕೆ

ಕುಂದಾಪುರದ ಅನಿಲ್‌ ಹೆಗ್ಡೆ ಬಿಹಾರದಿಂದ ರಾಜ್ಯಸಭೆಗೆ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.