ಆಸ್ಟ್ರೇಲಿಯದ ಹ್ಯಾಟ್ರಿಕ್‌ ಪರಿಪೂರ್ಣ

ಸತತ 3 ವಿಶ್ವಕಪ್‌ ಗೆದ್ದ ಮೊದಲ ತಂಡ

Team Udayavani, May 25, 2019, 6:00 AM IST

ಆಸ್ಟ್ರೇಲಿಯದ ಹ್ಯಾಟ್ರಿಕ್‌ ಸಾಧನೆ ಪುರ್ಣ ಗೊಂಡಿದ್ದಷ್ಟೇ ಈ ಪಂದ್ಯಾವಳಿಯ ಹೆಗ್ಗಳಿಕೆ. ಮಳೆ ಹಾಗೂ ಮಂದಬೆಳಕಿನಲ್ಲಿ ಸಾಗಿದ ಪ್ರಶಸ್ತಿ ಕಾದಾಟದಲ್ಲಿ ರಿಕಿ ಪಾಂಟಿಂಗ್‌ ಪಡೆ ಡಿ-ಎಲ್‌ ನಿಯಮದಂತೆ ಶ್ರೀಲಂಕಾ ವನ್ನು 53 ರನ್ನುಗಳಿಂದ ಮಣಿಸಿತು.

ವಿಶ್ವಕಪ್‌ ಫೈನಲ್‌ ಪಂದ್ಯದ ಫ‌ಲಿತಾಂಶ ಡಕ್‌ವರ್ತ್‌-ಲೂಯಿಸ್‌ ನಿಯಮದಂತೆ ನಿರ್ಧಾರವಾದದ್ದು ಇದೇ ಮೊದಲು. ಹೀಗಾಗಿ ಫೈನಲ್‌ ಪಂದ್ಯದ ಜೋಶ್‌ ಇಲ್ಲಿ ಕಂಡುಬರಲೇ ಇಲ್ಲ. ಚೇಸಿಂಗ್‌ ವೇಳೆ ಶ್ರೀಲಂಕಾ ಕತ್ತಲಿನಲ್ಲೇ ಬ್ಯಾಟಿಂಗ್‌ ನಡೆಸುವ ಸಂಕಟಕ್ಕೆ ಸಿಲುಕಿತು.

38 ಓವರ್‌ಗಳ ಫೈನಲ್‌!
ಬ್ರಿಜ್‌ಟೌನ್‌ನಲ್ಲಿ ನಡೆದ ಈ ಫೈನಲ್‌ ಆರಂಭದಲ್ಲೇ ಮಳೆಯ ಹೊಡೆತಕ್ಕೆ ಸಿಲುಕಿತು. ಹೀಗಾಗಿ ಓವರ್‌ಗಳ ಸಂಖ್ಯೆ ಯನ್ನು 38ಕ್ಕೆ ಇಳಿಸಲಾಯಿತು. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಆಸ್ಟ್ರೇಲಿಯ, 2003ರಂತೆ ಆಕ್ರಮಣಕಾರಿ ಆಟಕ್ಕೆ ಮುಂದಾಗಿ 4 ವಿಕೆಟಿಗೆ 281 ರನ್‌ ಪೇರಿಸಿತು. ಇದರಲ್ಲಿ ಆರಂಭಕಾರ ಗಿಲ್‌ಕ್ರಿಸ್ಟ್‌ ಒಬ್ಬರ ಪಾಲೇ 149 ರನ್‌!ಚೇಸಿಂಗ್‌ ವೇಳೆ ಸನತ್‌ ಜಯಸೂರ್ಯ-ಸಂಗಕ್ಕರ ಜೋಡಿ ಲಂಕಾ ನೆರವಿಗೆ ಬಂತು. ಆದರೆ ಇವರಿಬ್ಬರು ಪೆವಿಲಿಯನ್‌ ಸೇರಿ ಕೊಂಡ ಬಳಿಕ ಆಸೀಸ್‌ ಹಳಿ ಏರಿತು. 25ನೇ ಓವರ್‌ ವೇಳೆ ಮಳೆ ಸುರಿಯಿತು. ಆಗ ಲಂಕಾ 3 ವಿಕೆಟಿಗೆ 149 ರನ್‌ ಪೇರಿಸಿತ್ತು.

ಮಳೆ ನಿಂತೊಡನೆ ಓವರ್‌ ಸಂಖ್ಯೆ 36ಕ್ಕೆ ಇಳಿಯಿತು. 269 ರನ್ನುಗಳ ಹೊಸ ಗುರಿ ನಿಗದಿಗೊಂಡಿತು. 33ನೇ ಓವರ್‌ ವೇಳೆ ಬೆಳಕಿನ ಕೊರತೆ ತೀವ್ರಗೊಂಡಿತು. ಇದಕ್ಕೆ ಲಂಕಾ ಆಟಗಾರರು ಆಕ್ಷೇಪ ವ್ಯಕ್ತಪಡಿಸಿದರೂ ಆಗಲೇ ಪಂದ್ಯ ಅವರ ಕೈಯಿಂದ ಜಾರಿತ್ತು. ಅಂತಿಮವಾಗಿ 8 ವಿಕೆಟಿಗೆ 215 ರನ್‌ ಗಳಿಸಿತು.

ಸೂಪರ… 8
ಗ್ರೂಪ್‌ “ಎ’
ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ
ಗ್ರೂಪ್‌ “ಬಿ’
ಶ್ರೀಲಂಕಾ, ಬಾಂಗ್ಲಾದೇಶ
ಗ್ರೂಪ್‌ “ಸಿ’
ನ್ಯೂಜಿಲ್ಯಾಂಡ್‌, ಇಂಗ್ಲೆಂಡ್‌
ಗ್ರೂಪ್‌ “ಡಿ’
ವೆಸ್ಟ್‌ ಇಂಡೀಸ್‌, ಐರ್ಲೆಂಡ್‌
ಸೆಮಿಫೈನಲ್‌-1:
ಶ್ರೀಲಂಕಾ-ನ್ಯೂಜಿಲ್ಯಾಂಡ್‌ ಶ್ರೀಲಂಕಾಕ್ಕೆ 81 ರನ್‌ ಜಯ
ಸೆಮಿಫೈನಲ್‌-2:
ಆಸ್ಟ್ರೇಲಿಯ-ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಕ್ಕೆ 7 ವಿಕೆಟ್‌ ಜಯ

2007
ವಿಶ್ವಕಪ್‌ ಫೈನಲ್‌
ಎ. 28, 2007 ಬ್ರಿಜ್‌ಟೌನ್‌

ಆಸ್ಟ್ರೇಲಿಯ
ಆ್ಯಡಂ ಗಿಲ್‌ಕ್ರಿಸ್ಟ್‌ ಸಿ ಸಿಲ್ವ ಬಿ ಫೆರ್ನಾಂಡೊ 149
ಮ್ಯಾಥ್ಯೂ ಹೇಡನ್‌ ಸಿ ಜಯವರ್ಧನೆ ಬಿ ಮಾಲಿಂಗ 38
ರಿಕಿ ಪಾಂಟಿಂಗ್‌ ರನೌಟ್‌ 37
ಆ್ಯಂಡ್ರೂé ಸೈಮಂಡ್ಸ್‌ ಔಟಾಗದೆ 23
ಶೇನ್‌ ವಾಟ್ಸನ್‌ ಬಿ ಮಾಲಿಂಗ 3
ಮೈಕಲ್‌ ಕ್ಲಾರ್ಕ್‌ ಔಟಾಗದೆ 8

ಇತರ 23
ಒಟ್ಟು (38 ಓವರ್‌ಗಳಲ್ಲಿ 4 ವಿಕೆಟಿಗೆ) 281
ವಿಕೆಟ್‌ ಪತನ: 1-172, 2-224, 3-261, 4-266.

ಬೌಲಿಂಗ್‌
ಚಮಿಂಡ ವಾಸ್‌ 8-0-54-0
ಲಸಿತ ಮಾಲಿಂಗ 8-1-49-2
ದಿಲ್ಹಾರ ಫೆರ್ನಾಂಡೊ 8-0-74-1
ಮುತ್ತಯ್ಯ ಮುರಳೀಧರನ್‌ 7-0-44-0
ತಿಲಕರತ್ನೆ ದಿಲ್ಶನ್‌ 2-0-23-0
ಸನತ್‌ ಜಯಸೂರ್ಯ 5-0-33-0

ಶ್ರೀಲಂಕಾ
(ಗೆಲುವಿನ ಗುರಿ: 36 ಓವರ್‌ಗಳಲ್ಲಿ 269 ರನ್‌)
ಉಪುಲ್‌ ತರಂಗ ಸಿ ಗಿಲ್‌ಕ್ರಿಸ್ಟ್‌ ಬಿ ಬ್ರಾಕೆನ್‌ 6
ಸನತ್‌ ಜಯಸೂರ್ಯ ಬಿ ಕ್ಲಾರ್ಕ್‌ 63
ಕುಮಾರ ಸಂಗಕ್ಕರ ಸಿ ಪಾಂಟಿಂಗ್‌ ಬಿ ಹಾಗ್‌ 54
ಮಾಹೇಲ ಜಯವರ್ಧನೆ ಎಲ್‌ಬಿಡಬ್ಲ್ಯು ವಾಟ್ಸನ್‌ 19
ಚಾಮರ ಸಿಲ್ವ ಬಿ ಕ್ಲಾರ್ಕ್‌ 21
ತಿಲಕರತ್ನೆ ದಿಲ್ಶನ್‌ ರನೌಟ್‌ 14
ರಸೆಲ್‌ ಅರ್ನಾಲ್ಡ್‌ ಸಿ ಗಿಲ್‌ಕ್ರಿಸ್ಟ್‌ ಬಿ ಮೆಕ್‌ಗ್ರಾತ್‌ 1
ಚಮಿಂಡ ವಾಸ್‌ ಔಟಾಗದೆ 11
ಲಸಿತ ಮಾಲಿಂಗ ಸ್ಟಂಪ್ಡ್ ಗಿಲ್‌ಕ್ರಿಸ್ಟ್‌ ಬಿ ಸೈಮಂಡ್ಸ್‌ 10
ದಿಲ್ಹಾರ ಫೆರ್ನಾಂಡೊ ಔಟಾಗದೆ 1

ಇತರ 15
ಒಟ್ಟು (36 ಓವರ್‌ಗಳಲ್ಲಿ 8 ವಿಕೆಟಿಗೆ) 215
ವಿಕೆಟ್‌ ಪತನ: 1-7, 2-123, 3-145, 4-156, 5-188, 6-190, 7-194, 8-211.

ಬೌಲಿಂಗ್‌
ನಥನ್‌ ಬ್ರಾಕೆನ್‌ 6-1-34-1
ಶಾನ್‌ ಟೇಟ್‌ 6-0-42-0
ಗ್ಲೆನ್‌ ಮೆಕ್‌ಗ್ರಾತ್‌ 7-0-31-1
ಶೇನ್‌ ವಾಟ್ಸನ್‌ 7-0-49-1
ಬ್ರಾಡ್‌ ಹಾಗ್‌ 3-0-19-1
ಮೈಕಲ್‌ ಕ್ಲಾರ್ಕ್‌ 5-0-33-2
ಆ್ಯಂಡ್ರೂ ಸೈಮಂಡ್ಸ್‌ 2-0-6-1
ಪಂದ್ಯಶ್ರೇಷ್ಠ: ಆ್ಯಡಂ ಗಿಲ್‌ಕ್ರಿಸ್ಟ್‌
ಸರಣಿಶ್ರೇಷ್ಠ: ಗ್ಲೆನ್‌ ಮೆಕ್‌ಗ್ರಾತ್‌

ಕೆರಿಬಿಯನ್‌ ನಾಡಿನ ದುರಂತಮಯ ವಿಶ್ವಕಪ್‌
ಐಸಿಸಿ ತನ್ನ ಆವರ್ತನ ಪದ್ಧತಿಯಂತೆ ಈ ಪಂದ್ಯಾವಳಿಯ ಆತಿಥ್ಯವನ್ನು ವಿಂಡೀ ಸಿಗೆ ನೀಡಿತು. ಆದರೆ ಇದು ಸಾಧಿಸಿ ದ್ದೇನೂ ಇಲ್ಲ. ಕ್ರಿಕೆಟ್‌ ಇತಿಹಾಸದ ಅತ್ಯಂತ ದುರಂತಮಯ ವಿಶ್ವಕಪ್‌ ಆಗಿ ದಾಖಲಾದದ್ದು ಈ ಕೂಟದ ವಿಪರ್ಯಾಸ.

ಈ ಪಂದ್ಯಾವಳಿಯ ಮಾದರಿಯೇ ವಿಭಿನ್ನವಾಗಿತ್ತು. ಬರ್ಮುಡ, ಕೀನ್ಯಾ, ನೆದರ್ಲೆಂಡ್‌, ಕೆನಡಾ, ಐರ್ಲೆಂಡ್‌, ಸ್ಕಾಟ್ಲೆಂಡ್‌ ಸಹಿತ 16 ತಂಡಗಳು ಸ್ಪರ್ಧೆಯಲ್ಲಿದ್ದವು. ಇವನ್ನು 4 ಗುಂಪುಗಳಾಗಿ ವಿಭಜಿಸಲಾಗಿತ್ತು. ತಲಾ 2 ತಂಡಗಳಿಗೆ ಮುನ್ನಡೆಯ ಅವಕಾಶ. ಅಲ್ಲಿ “ಸೂಪರ್‌-8′ ಮುಖಾಮುಖೀ. ಗ್ರೂಪ್‌ ಹಂತದ ಮೊದಲ ಪಂದ್ಯವನ್ನು ಸೋತ ತಂಡಕ್ಕೆ ಮತ್ತೆ ಉಳಿಗಾಲ ಕಷ್ಟವಿತ್ತು. ಭಾರತ, ಪಾಕಿಸ್ಥಾನ ತಂಡಗಳು ಇದೇ ಸಂಕಟಕ್ಕೆ ಸಿಲುಕಿ ಲೀಗ್‌ ಹಂತದಲ್ಲೇ ಹೊರಬಿದ್ದವು. ಕೂಟದ ಆಕರ್ಷಣೆ ಅಷ್ಟರ ಮಟ್ಟಿಗೆ ಕಳೆಗುಂದಿತು.

ದ್ರಾವಿಡ್‌ ನೇತೃತ್ವದಲ್ಲಿ ಭಾರತ 5 ವಿಕೆಟ್‌ ಗಳಿಂದ ಬಾಂಗ್ಲಾದೇಶಕ್ಕೆ ಶರಣಾದರೆ, ಪಾಕಿಸ್ಥಾನ ವನ್ನು ಐರ್ಲೆಂಡ್‌ 3 ವಿಕೆಟ್‌ಗಳಿಂದ ಮಣಿಸಿತು. ಈ ಫ‌ಲಿತಾಂಶದ ಬೆನ್ನಲ್ಲೇ ಪಾಕಿಸ್ಥಾನದ ಕೋಚ್‌ ಬಾಬ್‌ ವೂಲ್ಮರ್‌ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದರು! ಆಸ್ಟ್ರೇಲಿಯ-ಶ್ರೀಲಂಕಾ ನಡುವಿನ ಫೈನಲ್‌ ಪಂದ್ಯವಂತೂ ಅತ್ಯಂತ ಕೆಟ್ಟದಾಗಿತ್ತು. ಕಾರಣ, ಆಸ್ಟ್ರೇಲಿಯ-ಶ್ರೀಲಂಕಾ ನಡುವಿನ ಫೈನಲ್‌ ಪಂದ್ಯ ವಂತೂ ಅತ್ಯಂತ ಕೆಟ್ಟದಾಗಿತ್ತು. ಕಾರಣ, ಮಳೆ ಹಾಗೂ ಮಂದಬೆಳಕು. ಹೀಗಾಗಿ ಓವರ್‌ಗಳ ಸಂಖ್ಯೆಯನ್ನು ಕಡಿತಗೊಳಿಸುವುದು ಅನಿವಾರ್ಯ ವಾಯಿತು. ಲಂಕಾ ಕತ್ತಲಲ್ಲೇ ಚೇಸಿಂ ಗ್‌ ನಡೆಸಿ ಪಾಂಟಿಂಗ್‌ ಪಡೆಗೆ ಶರಣಾಯಿತು. ಆಸ್ಟ್ರೇಲಿಯ ಹ್ಯಾಟ್ರಿಕ್‌ ಸಾಧಿಸಿತು!

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ