ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ : ಸ್ಟಾರ್‌ ಆಟಗಾರರ ಗೆಲುವಿನ ಆರಂಭ

Team Udayavani, Jan 21, 2020, 6:08 AM IST

ಮೆಲ್ಬರ್ನ್: ಸೋಮವಾರ ಮೊದಲ್ಗೊಂಡ ವರ್ಷಾರಂಭದ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಪಂದ್ಯಾವಳಿಯಲ್ಲಿ ಸ್ಟಾರ್‌ ಆಟಗಾರರನೇಕರು ಮೊದಲ ಸುತ್ತನ್ನು ಯಶಸ್ವಿಯಾಗಿ ದಾಟಿದ್ದಾರೆ. ಹಾಲಿ ಚಾಂಪಿಯನ್ಸ್‌ ನೊವಾಕ್‌ ಜೊಕೋವಿಕ್‌, ನವೋಮಿ ಒಸಾಕಾ, ಟೆನಿಸ್‌ ದೈತ್ಯರಾದ ರೋಜರ್‌ ಫೆಡರರ್‌, ಸೆರೆನಾ ವಿಲಿಯಮ್ಸ್‌, ಆತಿಥೇಯ ನಾಡಿನ ನಂ.1 ಆಟಗಾರ್ತಿ ಆ್ಯಶ್ಲಿ ಬಾರ್ಟಿ ಅವರೆಲ್ಲ ದ್ವಿತೀಯ ಸುತ್ತು ಪ್ರವೇಶಿಸಿದ್ದಾರೆ.

ಆದರೆ ಮೊದಲ ದಿನವೇ ಪಂದ್ಯಾವಳಿಗೆ ಮಳೆಯಿಂದ ಅಡಚಣೆಯಾಗಿದ್ದು, ಕೆಲವು ಪಂದ್ಯಗಳನ್ನು ಮಂಗಳವಾರಕ್ಕೆ ಮುಂದೂಡಲಾಯಿತು. ಇದರಲ್ಲಿ ಭಾರತದ ಪ್ರಜ್ಞೆàಶ್‌ ಗುಣೇಶ್ವರನ್‌ ಅವರ ಪಂದ್ಯವೂ ಸೇರಿದೆ.

ಫೆಡರರ್‌ಗೆ ಸುಲಭ ಜಯ
21ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯ ಗುರಿಯೊಂದಿಗೆ ಕಣಕ್ಕಿಳಿದಿರುವ 3ನೇ ಶ್ರೇಯಾಂಕದ ರೋಜರ್‌ ಫೆಡರರ್‌ ಅಮೆರಿಕದ ಸ್ಟೀವ್‌ ಜಾನ್ಸನ್‌ ವಿರುದ್ಧ 6-3, 6-2, 6-2 ಅಂತರದ ನೇರ ಸೆಟ್‌ಗಳ ಜಯ ಸಾಧಿಸಿದರು. “ರಾಡ್‌ ಲೆವರ್‌ ಅರೆನಾ’ದಲ್ಲಿ ನಡೆದ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದರಿಂದ ಛಾವಣಿಯನ್ನು ಮುಚ್ಚಿ ಆಡಲಾಯಿತು. 38 ವರ್ಷದ ಫೆಡರರ್‌ ಈವರೆಗೆ ಮೆಲ್ಬರ್ನ್ ಪಾರ್ಕ್‌ನಲ್ಲಿ 6 ಸಲ ಕಿರೀಟ ಏರಿಸಿಕೊಂಡಿದ್ದಾರೆ.

ವಿಶ್ವದ 6ನೇ ರ್‍ಯಾಂಕಿಂಗ್‌ ಆಟಗಾರ, ಗ್ರೀಕ್‌ನ ಸ್ಟೆಫ‌ನಸ್‌ ಸಿಸಿಪಸ್‌ ಕೂಡ ಸುಲಭದಲ್ಲೇ ಮೊದಲ ಸುತ್ತು ಪಾಸ್‌ ಆದರು. ಅವರು ಇಟೆಲಿಯ ಸಾಲ್ವಟೋರ್‌ ಕರುಸೊ ವಿರುದ್ಧ 6-0, 6-2, 6-3 ಅಂತರದ ಗೆಲುವು ಕಂಡರು. ಕಳೆದ ವರ್ಷ ಇಲ್ಲಿ ರೋಜರ್‌ ಫೆಡರರ್‌ ಅವರನ್ನು ಕೆಡವಿ ಸೆಮಿಫೈನಲ್‌ಗೆ ಲಗ್ಗೆ ಇರಿಸಿದ ಹೆಗ್ಗಳಿಕೆ ಸಿಸಿಪಸ್‌ ಅವರದಾಗಿದೆ.

ಆದರೆ ದ್ವಿತೀಯ ಶ್ರೇಯಾಂಕದ ನೊವಾಕ್‌ ಜೊಕೋವಿಕ್‌ ಮೊದಲ ಸುತ್ತಿನಲ್ಲೇ ತುಸು ಪ್ರತಿರೋಧ ಎದುರಿಸಬೇಕಾಯಿತು. ಜರ್ಮನಿಯ ಜಾನ್‌ ಲೆನ್ನಾರ್ಡ್‌ ಸ್ಟ್ರಫ್ ವಿರುದ್ಧ ಅವರು 7-6 (7-5), 6-2, 2-6, 6-1 ಅಂತರದ ಕಠಿನ ಗೆಲುವು ಕಂಡರು.

ಸೆರೆನಾ, ಬಾರ್ಟಿ ವಿಜಯ
ವನಿತಾ ಸಿಂಗಲ್ಸ್‌ನಲ್ಲಿ ಸೆರೆನಾ ವಿಲಿಯಮ್ಸ್‌ ಉಸಿರಾಟದ ತೊಂದರೆ ನಡುವೆಯೂ ಸುಲಭ ಗೆಲುವು ಒಲಿಸಿಕೊಂಡರು. ರಶ್ಯದ ಅನಾಸ್ತಾಸಿಯ ಪೊಟಪೋವಾ ಅವರನ್ನು 6-0, 6-3 ಅಂತರದಿಂದ ಮಣಿಸಿದರು. ಇವರ ದ್ವಿತೀಯ ಸುತ್ತಿನ ಎದುರಾಳಿ ಸ್ಲೊವೇನಿಯಾದ ಟಮಾರಾ ಜಿದಾನ್ಸೆಕ್‌. ಇನ್ನೊಂದು ಪಂದ್ಯದಲ್ಲಿ ಜಿದಾನ್ಸೆಕ್‌ ದಕ್ಷಿಣ ಕೊರಿಯಾದ ಹಾ ನಾ ಲೀ ಅವರನ್ನು 6-3, 6-3ರಿಂದ ಹಿಮ್ಮೆಟ್ಟಿಸಿದರು.

ತವರಿನ ಭರವಸೆಯಾಗಿರುವ ಆ್ಯಶ್ಲಿ ಬಾರ್ಟಿ ಉಕ್ರೇನಿನ ಲೆಸಿಯಾ ಸುರೆಂಕೊ ವಿರುದ್ಧ ಮೊದಲ ಸೆಟ್‌ ಕಳೆದುಕೊಂಡರೂ ಬಳಿಕ ದಿಟ್ಟ ಪ್ರದರ್ಶನ ನೀಡಿ ಗೆದ್ದು ಬಂದರು. ಅಂತರ 7-5, 6-1, 6-1.

ಮಳೆ: ಪ್ರಜ್ಞೆಶ್‌ ಪಂದ್ಯ ಮುಂದೂಡಿಕೆ
ಭಾರತದ ಪ್ರಜ್ಞೆಶ್‌ ಗುಣೇಶ್ವರನ್‌ ಮತ್ತು ಜಪಾನಿನ ಟಟ್ಸುಮ ಇಟೊ ನಡುವಿನ ಮೊದಲ ಸುತ್ತಿನ ಪಂದ್ಯವನ್ನು ಮಳೆಯ ಕಾರಣ ಮಂಗಳವಾರಕ್ಕೆ ಮುಂದೂಡಲಾಗಿದೆ. ಒಮ್ಮೆ ಮುಖ್ಯ ಸುತ್ತಿನ ಅವಕಾಶವನ್ನು ಕಳೆದುಕೊಂಡ ಪ್ರಜ್ಞೆಶ್‌, ಬಳಿಕ ಗೈರು ಹಾಜರಾದ ಆಟಗಾರರ ಸ್ಥಾನ ತುಂಬುವ ಅದೃಷ್ಟ ಪಡೆದಿದ್ದರು. ಜಪಾನಿ ಟೆನಿಸಿಗನನ್ನು ಸೋಲಿಸಿದರೆ ಪ್ರಜ್ಞೆಶ್‌ ದ್ವಿತೀಯ ಸುತ್ತಿನಲ್ಲಿ ದೈತ್ಯ ಆಟಗಾರ ನೊವಾಕ್‌ ಜೊಕೋವಿಕ್‌ ಅವರನ್ನು ಎದುರಿಸಲಿದ್ದಾರೆ.

ಒಸಾಕಾ ಮುನ್ನಡೆ
ಕಳೆದ ವರ್ಷದ ಚಾಂಪಿಯನ್‌ ನವೋಮಿ ಒಸಾಕಾ 6-2, 6-4 ಅಂತರದಿಂದ ಜೆಕ್‌ ಆಟಗಾರ್ತಿ ಮಾರಿ ಬೌಜ್ಕೋವಾಗೆ ಸೋಲುಣಿಸಿ ಮುನ್ನಡೆದರು. ಚೀನದ ಜೆಂಗ್‌ ಸೈಸೈ ಇವರ ಮುಂದಿನ ಎದುರಾಳಿ. ಅವರು ರಶ್ಯದ ಅನ್ನಾ ಕಲಿನ್ಸ್‌
ಕಾಯಾ ವಿರುದ್ಧ 6-3, 6-2ರಿಂದ ಗೆದ್ದು ಬಂದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಸಹಾಯಾನುದಾನ ಮತ್ತು ವಂತಿಗೆ ಹಾಗೂ ತೆರಿಗೆ ಪಾಲಿನ ಕಡಿತದ ಪರಿಣಾಮ 2020-21 ನೇ ಸಾಲಿನ ಬಜೆಟ್‌ ಮೇಲೆ ಪರಿಣಾಮ ಬೀರಲಿದ್ದು...

  • ಹುಬ್ಬಳ್ಳಿ: ಮಹದಾಯಿ ಕುರಿತು ಕೇಂದ್ರದಿಂದ ಅಧಿಸೂಚನೆ ಹೊರಡಿಸುವುದು ವಿಶೇಷವಾಗಿ ಇಬ್ಬರು ಸಚಿವರಿಗೆ ಪ್ರತಿಷ್ಠೆಯಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ,...

  • ಕಾರವಾರ: ಕೊರೊನಾ ವೈರಸ್‌ ಕಾರಣಕ್ಕೆ ಜಪಾನ್‌ನ ಯೊಕೊಹಾಮಾದಲ್ಲಿ ಡೈಮಂಡ್‌ ಪ್ರಿನ್ಸಸ್‌ ಎಂಬ ಕ್ರೂಸ್‌ ಹಡಗಿನಲ್ಲಿ ಬಂಧಿಯಾಗಿದ್ದ ಕಾರವಾರ ಮೂಲದ ಅಭಿಷೇಕ್‌...

  • ಮುದಗಲ್ಲ (ರಾಯಚೂರು): ಚೀನಾದಲ್ಲಿ ಮಾರಣಹೋಮ ನಡೆಸಿರುವ ಕೊರೊನಾ ವೈರಸ್‌ ಪರಿಣಾಮ ಇಲ್ಲಿನ ಕಲ್ಲು ಗಣಿಗಾರಿಕೆ ಮೇಲೂ ಆಗಿದೆ. ಕೊರೊನಾ ವೈರಸ್‌ ಪರಿಣಾಮ ಚೀನಾ ಸೇರಿ...

  • ಬೆಂಗಳೂರು: ಸಿದ್ದರಾಮಯ್ಯ ಹೇಳಿದ ಕೂಡಲೇ ಕಾಂಗ್ರೆಸ್‌ ಬಿಟ್ಟು ಹೋಗಿರುವವರು ವಾಪಸ್‌ ಬರ್ತಾರೆ ಎಂದು ಕಾಂಗ್ರೆಸ್‌ ಹಿರಿಯ ನಾಯಕಿ ಮಾರ್ಗರೇಟ್‌ ಆಳ್ವಾ ಹೇಳಿಕೆಯನ್ನು...