ಹೆಣ್ಣು ಮಗುವಿಗೆ ತಂದೆಯಾದ ಕೇನ್ ವಿಲಿಯಮ್ಸನ್
Team Udayavani, Dec 16, 2020, 4:36 PM IST
ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಈ ಸಂತೋಷದ ವಿಚಾರವನ್ನು ಅವರು ಇನ್ಸ್ಟಾ ಗ್ರಾಮ್ ಮೂಲಕ ಹಂಚಿಕೊಂಡಿದ್ದಾರೆ.
ಕೇನ್ ವಿಲಿಯಮ್ಸನ್ ಮತ್ತು ಪತ್ನಿ ಸಾರಾ ರಹೀಮ್ ದಂಪತಿ ಮಗುವನ್ನು ಅಪ್ಪಿ ಹಿಡಿದಿರುವ ಫೋಟೋವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು ಸುಂದರವಾರ ಹೆಣ್ಣು ಮಗುವನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸಲು ಅತ್ಯಂತ ಸಂಭ್ರಮವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಅಡಿಲೇಡ್ ಟೆಸ್ಟ್ ಗೆ ತಂಡ ಪ್ರಕಟ: ಗಿಲ್ ಗೆ ಸಿಗದ ಚಾನ್ಸ್, ತಂಡದಲ್ಲಿ ಮೂವರು ಪೇಸರ್ಸ್
ಮೊದಲ ಮಗುವಿನ ನಿರೀಕ್ಷೆಯಲ್ಲಿ ಕೇನ್ ವಿಲಿಯಮ್ಸನ್ ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯವನ್ನು ತಪ್ಪಿಸಿಕೊಂಡಿದ್ದರು. ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಟಾಮ್ ಲ್ಯಾಂಥಮ್ ಮುನ್ನಡೆಸಿದ್ದರು.