ರಾತ್ರೋ ರಾತ್ರಿ ಜೀವನವೇ ಬದಲಾಯ್ತು: ಸ್ಟೋಕ್ಸ್, ಮಿಲ್ಸ್ ಉದ್ಘಾರ
Team Udayavani, Feb 22, 2017, 1:02 PM IST
ಲಂಡನ್: ಇಂಗ್ಲೆಂಡ್ನ ಇಬ್ಬರು ಕ್ರಿಕೆಟಿಗರಾದ ಬೆನ್ ಸ್ಟೋಕ್ಸ್ ಮತ್ತು ಟೈಮಲ್ ಮಿಲ್ಸ್ ಸೋಮ ವಾರ ನಡೆದ ಐಪಿಎಲ್ ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ ಮಾರಾಟವಾಗಿ ದಾಖಲೆ ಸೃಷ್ಟಿಸಿದರು.
ಸ್ಟೋಕ್ಸ್ 14.50 ಕೋಟಿ ರೂ.ಗೆ ಮಾರಾಟವಾಗಿ ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಮೊತ್ತ ಪಡೆದ ವಿದೇಶಿ ಕ್ರಿಕೆಟಿಗ ಎನಿಸಿಕೊಂಡರೆ, ಟೈಮಲ್ ಮಿಲ್ಸ್ 12 ಕೋಟಿ ರೂ.ಗೆ ಮಾರಾಟವಾಗಿ ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಮೊತ್ತ ಪಡೆದ ಬೌಲರ್ ಎನಿಸಿಕೊಂಡರು. ಸ್ವಾರಸ್ಯವೆಂದರೆ ಈ ಇಬ್ಬರೂ ಈ ಪ್ರಮಾಣದ ಮೊತ್ತ ಕಂಡು ದಂಗಾಗಿ ಹೋಗಿದ್ದಾರೆ. ರಾತ್ರೋ ರಾತ್ರಿ ತಮ್ಮ ಜೀವನವೇ ಬದಲಾಯಿತು ಎಂದು ಹೇಳಿಕೊಂಡಿದ್ದಾರೆ.
ಅದರಲ್ಲೂ ಸ್ಟೋಕ್ಸ್ ಅಂತೂ ಬೆಳಗ್ಗೆ 3.30ಕ್ಕೆ ಎದ್ದು ಕೂತು ಹರಾಜು ವೀಕ್ಷಿಸುತ್ತಾ ಉದ್ವೇಗಕ್ಕೊಳ ಗಾಗಿದ್ದರಂತೆ. ತಾವು 14.5 ಕೋಟಿ ರೂ.ಗೆ ಮಾರಾಟವಾದೆ ಎಂದು ಗೆಳೆಯರ ಮೂಲಕ ಗೊತ್ತಾದಾಗ ಖುಷಿಯಲ್ಲಿ ತೇಲಿ ಹೋದರಂತೆ. “ಇದನ್ನು ಹೇಗೆಂದು ಹೇಳುವುದು ಗೊತ್ತಾಗುತ್ತಿಲ್ಲ. ನನ್ನಲ್ಲಿ ಪದಗಳಿಲ್ಲ. ರಾತ್ರೋರಾತ್ರಿ ಜೀವನವೇ ಬದಲಾಗಿದೆ. ಇದಕ್ಕಿಂತ ಹೆಚ್ಚು ಹೇಳಲು ಸಾಧ್ಯವಿಲ್ಲ. ಈ ಹಣಕ್ಕೆ ನಾನು ಋಣಿಯಾಗಿದ್ದೇನೆ’ ಎಂದು ಸ್ಟೋಕ್ಸ್ ಹೇಳಿಕೊಂಡಿದ್ದಾರೆ. 14 ಕೋಟಿಗೆ ಮಾರಾಟವಾದಾಗ ತಲೆಕೆಟ್ಟು ಹೋಯಿತು. ಆಗ ನನಗೆ 1 ಕೋಟಿ ರೂ. ಎಂದರೆ ಎಷ್ಟಾಗುತ್ತೆ ಎಂದೇ ಗೊತ್ತಿರಲಿಲ್ಲ ಸ್ಟೋಕ್ಸ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ