ಕಿವೀಸ್ ಬ್ಯಾಡ್ಮಿಂಟನ್: ಪ್ರಣಯ್, ಪಿ.ಕಶ್ಯಪ್, ಅಜಯ್ ಭಾಗಿ
Team Udayavani, Aug 1, 2017, 8:00 AM IST
ಆಕ್ಲೆಂಡ್(ನ್ಯೂಜಿಲೆಂಡ್): ಇಂದಿನಿಂದ ನ್ಯೂಜಿಲೆಂಡ್ ಓಪನ್ ಗ್ರ್ಯಾನ್ ಪ್ರೀ ಗೋಲ್ಡ್ ಬ್ಯಾಡ್ಮಿಂಟನ್ ಕೂಟ ಆರಂಭವಾಗಲಿದೆ. ಭಾರತದ ಭರವಸೆಯ ಆಟಗಾರರಾದ ಎಚ್.ಎಸ್.ಪ್ರಣಯ್, ಪಿ.ಕಶ್ಯಪ್ ಮತ್ತು ಅಜಯ್ ಜಯರಾಮ್ ಪಾಲ್ಗೊಳ್ಳುತ್ತಿದ್ದಾರೆ. ಪ್ರಣಯ್ ಇತ್ತೀಚೆಗೆ ನಡೆದ ಯು.ಎಸ್.ಓಪನ್ನಲ್ಲಿ ಪ್ರಶಸ್ತಿ ಪಡೆದಿದ್ದಾರೆ.
ಭಾರತ ಮತ್ತೂಬ್ಬ ಆಟಗಾರ ಕಶ್ಯಪ್ ಯುಎಸ್ ಓಪನ್ನಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ. ಭುಜದ ಶಸOಉ ಚಿಕಿತ್ಸೆಯ ನಂತರ ಕಶ್ಯಪ್ ಫೈನಲ್ ತಲುಪಿದ ಮೊದಲ ಪಂದ್ಯವಾಗಿತ್ತು. ಉಳಿದಂತೆ ಭಾರತ ತಂಡದಲ್ಲಿ ಮಾಜಿ ರಾಷ್ಟ್ರೀಯ ಚಾಂಪಿಯನ್ ಸೌರಭ್ ವರ್ಮ, ಅರುಣ್ ಕುಮಾರ್, ಅಶೋಕ್ ಕುಮಾರ್ ಪುರುಷರ ಸಿಂಗಲ್ಸ್ನಲ್ಲಿ ಪಾಲ್ಗೊಳ್ಳಲಿದ್ದಾರೆ. ಮಹಿಳೆಯರ ಸಿಂಗಲ್ಸ್ನಲ್ಲಿ ತನ್ವಿ ಲಾಡ್, ಪುರುಷ ಡಬಲ್ಸ್ನಲ್ಲಿ ಮನು ಅತ್ರಿ-ಬಿ.ಸುಮೀತ್ ರೆಡ್ಡಿ ಜೋಡಿ, ಮಿಶ್ರ ಡಬಲ್ಸ್ನಲ್ಲಿ ಪ್ರಣವ್ ಜೆರ್ರಿ ಚೋಪ್ರಾ-ಎನ್. ಸಿಕ್ಕಿ ರೆಡ್ಡಿ ಜೋಡಿ ಪಾಲ್ಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ