ಬ್ಯಾಡ್ಮಿಂಟನ್‌: ಸಿಂಧು ಸೆಮಿಫೈನಲಿಗೆ ಸೈನಾಗೆ ಆಘಾತ; ಕಂಚಿಗೆ ತೃಪ್ತಿ


Team Udayavani, Aug 27, 2017, 8:40 AM IST

saina.jpg

ಗ್ಲಾಸ್ಕೊ: ಮೂರು ಗೇಮ್‌ಗಳ ಕಠಿನ ಹೋರಾಟದಲ್ಲಿ ಜಪಾನಿನ ಏಳನೇ ಶ್ರೇಯಾಂಕದ ನಜೋಮಿ ಒಕುಹಾರಾ ಅವರಿಗೆ ಶರಣಾದ ಭಾರತದ ಸೈನಾ ನೆಹ್ವಾಲ್‌ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. 

74 ನಿಮಿಷಗಳ ತೀವ್ರ ಪೈಪೋಟಿಯ ಹೋರಾಟದಲ್ಲಿ ಸೈನಾ 21-12, 17-21, 10-21 ಗೇಮ್‌ಗಳಿಂದ ಪಂದ್ಯ ಕಳೆದುಕೊಂಡರು. ಭರ್ಜರಿ ಆಟದ ಮೂಲಕ ಮೊದಲ ಗೇಮ್‌ ವಶಪಡಿಸಿಕೊಂಡ ಸೈನಾ ದ್ವಿತೀಯ ಗೇಮ್‌ನಲ್ಲಿ ಪ್ರಬಲ ಹೋರಾಟ ನಡೆಸಿದರು. ಇಬ್ಬರೂ ಸಮಬಲದ ಕಾದಾಟ ನಡೆಸಿದರೂ ಪಂದ್ಯ ಸಾಗುತ್ತಿದ್ದಂತೆ ಒಕುಹಾರಾ ಮೇಲುಗೈ ಸಾಧಿಸಿ 21-17ರಿಂದ ಗೇಮ್‌ ಗೆದ್ದರು. ನಿರ್ಣಾಯಕ ಗೇಮ್‌ನಲ್ಲಿ ಸೈನಾ ಮುನ್ನಡೆ ಸಾಧಿಸಿದ್ದರೂ ಆಬಳಿಕ ಸತತ 9 ಅಂಕ ಗೆಲ್ಲುವ ಮೂಲಕ ಒಕುಹಾರಾ ತಿರುಗೇಟು ನೀಡಿದರಲ್ಲದೇ 21-10ರಿಂದ ಗೇಮ್‌ ಗೆದ್ದು ಫೈನಲಿಗೇರಿದರು. ಒಕುಹಾರಾ ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಫೈನಲಿಗೇರಿದ ಜಪಾನಿನ ಮೊದಲ ಆಟಗಾರ್ತಿಯಾಗಿದ್ದಾರೆ.

ಜಕಾರ್ತಾದಲ್ಲಿ ನಡೆದ ಈ ಹಿಂದಿನ ವಿಶ್ವ ಬ್ಯಾಡ್ಮಿಂಟನ್‌ ಕೂಟದಲ್ಲಿ ಬೆಳ್ಳಿ ಜಯಿಸಿದ್ದ ಸೈನಾ ಅವರಿಗಿದು ಎರಡನೇ ಪದಕವಾಗಿದೆ. ಸೈನಾ ಸೆಮಿಫೈನಲ್‌ನಲ್ಲಿ ಸ್ಥಳೀಯ ಫೇವರಿಟ್‌ ಕ್ರಿಸ್ಟಿ ಗಿಲ್ಮೋರ್‌ ಅವರನ್ನು 21-19, 18-21, 21-15 ಗೇಮ್‌ಗಳಿಂದ ಸೋಲಿಸಿದ್ದರು.

7 ಬಾರಿ ಮುಖಾಮುಖೀ
ಸೈನಾ ಮತ್ತು ಒಕುಹಾರಾ ಈ ಹಿಂದೆ 7 ಬಾರಿ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮುಖಾ ಮುಖೀಯಾಗಿದ್ದು ಸೈನಾ ಆರರಲ್ಲಿ ಗೆದ್ದು ಪ್ರಾಬಲ್ಯ ಸ್ಥಾಪಿಸಿದ್ದರು. ಆದರೆ ಇಲ್ಲಿ ಸೈನಾ ತೀವ್ರ ಹೋರಾಡಿದರೂ ಗೆಲುವು ಒಲಿಸಿಕೊಳ್ಳಲು ವಿಫ‌ಲರಾಗಿ ನಿರಾಶೆ ಅನುಭವಿಸಿದರು. ಒಕುಹಾರಾ ಸತತ ಎರಡನೇ ಪಂದ್ಯದಲ್ಲಿ  ಮೂರು ಗೇಮ್‌ಗಳ ಕಠಿನ ಹೋರಾಟದಲ್ಲಿ ಎದುರಾಳಿಯನ್ನು ಸದೆಬಡಿದ್ದಾರೆ. ಈ ಮೊದಲು ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಅವರು ಎರಡು ಬಾರಿಯ ಹಾಲಿ ಚಾಂಪಿಯನ್‌ ಸ್ಪೇನ್‌ನ ಕ್ಯಾರೋಲಿನಾ ಮರಿನ್‌ ಅವರನ್ನು 21-18, 14-21, 21-15 ಗೇಮ್‌ಗಳಿಂದ ಉರುಳಿಸಿದ್ದರು. ಫೈನಲ್‌ ಹೋರಾಟದಲ್ಲಿ ಅವರು ಸಿಂಧು ಅಥವಾ ಚೀನದ ಚೆನ್‌ ಯುಫೆಯಿ ಅವರನ್ನು ಎದುರಿಸಲಿದ್ದಾರೆ.

ಸಿಂಧು ಸೆಮಿಫೈನಲಿಗೆ
ನಾಲ್ಕನೇ ಶ್ರೇಯಾಂಕದ ಸಿಂಧು ಚೀನದ ಸನ್‌ ಯು ಅವರನ್ನು 21-14, 21-9 ಗೇಮ್‌ಗಳಿಂದ ಕೆಡಹಿ ಸೆಮಿಫೈನಲಿಗೇರಿದ್ದಾರೆ. 39 ನಿಮಿಷಗಳಲ್ಲಿ ಈ ಪಂದ್ಯ ಗೆದ್ದ ಸಿಂಧು ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಹ್ಯಾಟ್ರಿಕ್‌ ಪದಕ ಖಚಿತಪಡಿಸಿದರು. 22ರ ಹರೆಯದ ರಿಯೋ ಬೆಳ್ಳಿ ವಿಜೇತೆ ಸಿಂಧು 2013 ಮತ್ತು 2014ರಲ್ಲಿ ಕಂಚಿನ ಪದಕ ಪಡೆದಿದ್ದರು. ಒಂದು ವೇಳೆ ಸೆಮಿಫೈನಲ್‌ ಪಂದ್ಯ ಗೆದ್ದರೆ ಬೆಳ್ಳಿ ಅಥವಾ ಚಿನ್ನ ಗೆಲ್ಲುವ ಸಾಧ್ಯತೆಯಿದೆ. ಪುರುಷರ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್‌ ಚೀನದ ಚೆನ್‌ ಲಾಂಗ್‌ ಅವರನ್ನು 21-9, 21-10 ಗೇಮ್‌ಗಳಿಂದ ಕೆಡಹಿದ ವಿಕ್ಟರ್‌ ಆ್ಯಕ್ಸೆಲ್ಸೆನ್‌ ಪುರುಷರ ವಿಭಾಗದಲ್ಲಿ ಫೈನಲಿಗೇರಿದ್ದಾರೆ.

ಟಾಪ್ ನ್ಯೂಸ್

ಮಂಗಳೂರು: ಪಬ್‌ ಮೇಲೆ ಸಿಸಿಬಿ ಪೊಲೀಸ್‌ ದಾಳಿ

ಮಂಗಳೂರು: ಪಬ್‌ ಮೇಲೆ ಸಿಸಿಬಿ ಪೊಲೀಸ್‌ ದಾಳಿ

Untitled-1

ಭೀಮಾ ಕೋರೆಗಾಂವ್‌ ಪ್ರಕರಣ: ವಿಚಾರಣೆಗೆ ರಶ್ಮಿ ಶುಕ್ಲಾ, ಪರಂಬೀರ್‌ ಸಿಂಗ್‌ಗೆ ಸಮನ್ಸ್‌ ಜಾರಿ

ಟಿ20 ವಿಶ್ವಕಪ್​: ವಿಂಡೀಸ್ ವಿರುದ್ಧ ಇಂಗ್ಲೆಂಡ್​ಗೆ ಜಯ

ಟಿ20 ವಿಶ್ವಕಪ್​: ವಿಂಡೀಸ್ ವಿರುದ್ಧ ಇಂಗ್ಲೆಂಡ್​ಗೆ ಜಯ

ಧೋನಿ ಅಭಿಮಾನಿ ಬಶೀರ್‌ ಚಾಚಾ ಮತ್ತೆ ಹಾಜರ್‌!

ಧೋನಿ ಅಭಿಮಾನಿ ಬಶೀರ್‌ ಚಾಚಾ ಮತ್ತೆ ಹಾಜರ್‌!

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ: ಕಮಲ್‌ ಪಂತ್‌

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ: ಕಮಲ್‌ ಪಂತ್‌

ಡಿಡಿಎಲ್‌ಜೆ ರಂಗ ಪ್ರಯೋಗ!

ಡಿಡಿಎಲ್‌ಜೆ ರಂಗ ಪ್ರಯೋಗ!

ಕಿತ್ತೂರು ಕರ್ನಾಟಕ ನಾಮಕರಣಕ್ಕೆ ನಿರ್ಧಾರ: ಸಿಎಂ ಬೊಮ್ಮಾಯಿ‌ ಘೋಷಣೆ

ಕಿತ್ತೂರು ಕರ್ನಾಟಕ ನಾಮಕರಣಕ್ಕೆ ನಿರ್ಧಾರ: ಸಿಎಂ ಬೊಮ್ಮಾಯಿ‌ ಘೋಷಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಟಿ20 ವಿಶ್ವಕಪ್​: ವಿಂಡೀಸ್ ವಿರುದ್ಧ ಇಂಗ್ಲೆಂಡ್​ಗೆ ಜಯ

ಟಿ20 ವಿಶ್ವಕಪ್​: ವಿಂಡೀಸ್ ವಿರುದ್ಧ ಇಂಗ್ಲೆಂಡ್​ಗೆ ಜಯ

ಧೋನಿ ಅಭಿಮಾನಿ ಬಶೀರ್‌ ಚಾಚಾ ಮತ್ತೆ ಹಾಜರ್‌!

ಧೋನಿ ಅಭಿಮಾನಿ ಬಶೀರ್‌ ಚಾಚಾ ಮತ್ತೆ ಹಾಜರ್‌!

1-qq

ಟಿ20 ವಿಶ್ವಕಪ್‌ : ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಕ್ಕೆ ರೋಚಕ ಜಯ

ಭಾರತದ ವಿರುದ್ಧದ ಪಂದ್ಯಕ್ಕಾಗಿ ಒಂದು ದಿನ ಮೊದಲೇ ತಂಡ ಪ್ರಕಟಿಸಿದ ಪಾಕಿಸ್ಥಾನ

ಭಾರತದ ವಿರುದ್ಧದ ಪಂದ್ಯಕ್ಕಾಗಿ ಒಂದು ದಿನ ಮೊದಲೇ ತಂಡ ಪ್ರಕಟಿಸಿದ ಪಾಕಿಸ್ಥಾನ

ಟಿ20 ವಿಶ್ವಕಪ್: ಭಾರತೀಯ ನಾಯಕನಿಗೆ ಎಚ್ಚರಿಕೆ ನೀಡಿದ ಸ್ಕಾಟ್ಲೆಂಡ್ ಬೌಲರ್!

ಟಿ20 ವಿಶ್ವಕಪ್: ಭಾರತೀಯ ನಾಯಕನಿಗೆ ಎಚ್ಚರಿಕೆ ನೀಡಿದ ಸ್ಕಾಟ್ಲೆಂಡ್ ಬೌಲರ್!

MUST WATCH

udayavani youtube

ರಾಜ್ಯದ ಪಾಲಿಟೆಕ್ನಿಕ್‌ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ : ಸಚಿವ ಡಾ. ಅಶ್ವತ್ಥನಾರಾಯಣ

udayavani youtube

11 ಮಂದಿ ಚಾರಣಿಗರು ಸಾವು, 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

udayavani youtube

ಮುಂದುವರೆದ ಒಂಟಿ ಸಲಗದ ದಾಂಧಲೆ ಕಾಂಪೌಂಡ್, ಮನೆಯ ಮೇಲ್ಚಾವಣಿ ಪುಡಿಪುಡಿ

udayavani youtube

ಕೃಷಿಕರ ಬದುಕಿಗೆ ಆಶಾಕಿರಣವಾಗಿರುವ MO4 ಭತ್ತದ ತಳಿಯನ್ನು ಯಾಕೆ ಬೆಳೆಯಬೇಕು?

udayavani youtube

ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಕಾರು, ಮಹಿಳೆ ಸಾವು

ಹೊಸ ಸೇರ್ಪಡೆ

ಮಂಗಳೂರು: ಪಬ್‌ ಮೇಲೆ ಸಿಸಿಬಿ ಪೊಲೀಸ್‌ ದಾಳಿ

ಮಂಗಳೂರು: ಪಬ್‌ ಮೇಲೆ ಸಿಸಿಬಿ ಪೊಲೀಸ್‌ ದಾಳಿ

Untitled-1

ಭೀಮಾ ಕೋರೆಗಾಂವ್‌ ಪ್ರಕರಣ: ವಿಚಾರಣೆಗೆ ರಶ್ಮಿ ಶುಕ್ಲಾ, ಪರಂಬೀರ್‌ ಸಿಂಗ್‌ಗೆ ಸಮನ್ಸ್‌ ಜಾರಿ

ಟಿ20 ವಿಶ್ವಕಪ್​: ವಿಂಡೀಸ್ ವಿರುದ್ಧ ಇಂಗ್ಲೆಂಡ್​ಗೆ ಜಯ

ಟಿ20 ವಿಶ್ವಕಪ್​: ವಿಂಡೀಸ್ ವಿರುದ್ಧ ಇಂಗ್ಲೆಂಡ್​ಗೆ ಜಯ

ಧೋನಿ ಅಭಿಮಾನಿ ಬಶೀರ್‌ ಚಾಚಾ ಮತ್ತೆ ಹಾಜರ್‌!

ಧೋನಿ ಅಭಿಮಾನಿ ಬಶೀರ್‌ ಚಾಚಾ ಮತ್ತೆ ಹಾಜರ್‌!

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ: ಕಮಲ್‌ ಪಂತ್‌

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ: ಕಮಲ್‌ ಪಂತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.