ಬ್ಯಾಡ್ಮಿಂಟನ್‌:ಶ್ರೀಕಾಂತ್‌, ಸಮೀರ್‌ಗೆ ಸೋಲು

Team Udayavani, Nov 22, 2019, 12:21 AM IST

ಗ್ವಾಂಗ್‌ಝು (ಕೊರಿಯ): “ಕೊರಿಯ ಮಾಸ್ಟರ್’ ಬ್ಯಾಡ್ಮಿಂಟನ್‌ ಕೂಟದ ಪುರುಷ ಸಿಂಗಲ್ಸ… ವಿಭಾಗದಲ್ಲಿ ಭಾರತದ ಕೆ. ಶ್ರೀಕಾಂತ್‌ ಮತ್ತು ಸಮೀರ್‌ ವರ್ಮ ಪರಾಭವಗೊಂಡಿದ್ದಾರೆ. ಇಬ್ಬರೂ ದ್ವಿತೀಯ ಸುತ್ತಿನಲ್ಲಿ ನೀರಸ ಆಟವಾಡಿದರು.

6ನೇ ಶ್ರೇಯಾಂಕದ ಶ್ರಿಕಾಂತ್‌ ಜಪಾನಿನ ಕಂಟ ತ್ಸುನೆಯಾಮ ವಿರುದ್ಧ 14-21, 19-21 ಅಂತರದಿಂದ ಸೋಲೊಪ್ಪಿಕೊಂಡರೆ, ಸಮೀರ್‌ ವರ್ಮ ಸ್ಥಳಿಯ ಫೆವರಿಟ್‌ ಶಟ್ಲರ್‌ ಕಿಮ್‌ ಡಾಂಘನ್‌ ವಿರುದ್ಧ 19-21, 12-21 ನೇರ ಗೇಮ್‌ಗಳಿಂದ ಎಡವಿದರು. ಈ ಅವಳಿ ಸೋಲಿನೊಂದಿಗೆ ಭಾರತದ ಪುರುಷರ ಸಿಂಗಲ್ಸ್‌ ಹೋರಾಟ ಕೊನೆಗೊಂಡಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ