ಅಲಿ ಅಲಿಯೆವ್ ಕುಸ್ತಿ: ಚಿನ್ನ ಗೆದ್ದ ಭಜರಂಗ್
Team Udayavani, May 4, 2019, 6:00 AM IST
ಕಾಸ್ಪಿಕ್ಸ್ (ರಶ್ಯ): ವಿಶ್ವದ ನಂ. ವನ್ ಕುಸ್ತಿಪಟು, ಭಾರತದ ಭಜರಂಗ್ ಪೂನಿಯಾ ಎರಡು ವಾರಗಳಲ್ಲಿ 2ನೇ ಪ್ರಶಸ್ತಿ ಜಯಿಸಿ ಸಂಭ್ರಮಿಸಿದ್ದಾರೆ
ಶುಕ್ರವಾರ ರಶ್ಯದಲ್ಲಿ ನಡೆದ ಅಲಿ ಅಲಿಯೆವ್ ಕುಸ್ತಿ ಕೂಟದ 65 ಕೆಜಿ ವಿಭಾಗದ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಭಜರಂಗ್ ಆತಿಥೇಯ ನಾಡಿನ ಕುಸ್ತಿಪಟು ವಿಕ್ಟರ್ ರಸದಿನ್ ಅವರನ್ನು ಸೋಲಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಪಂದ್ಯದ ಒಂದು ಹಂತದಲ್ಲಿ 0-5 ಹಿನ್ನಡೆಯಲ್ಲಿದ್ದ ಭಜರಂಗ್ ಅನಂತರ ಅತ್ಯುತ್ತಮ ಆಟವಾಡಿ 13-8 ಅಂಕಗಳ ಅಂತರದಿಂದ ಗೆದ್ದರು. ಈ ಹಿಂದೆ 2017ರಲ್ಲಿ ನಡೆದ ‘ಡಾನ್ ಕೊಲೊವ್’ ಕೂಟ ದಲ್ಲಿ ಇವರಿಬ್ಬರ ನಡುವೆ ಕಾದಾಟ ನಡೆದಿತ್ತು. ಅಲ್ಲಿ ಭಜರಂಗ್ ಮೇಲುಗೈ ಸಾಧಿಸಿದ್ದರು.
25 ವರ್ಷದ ಭಜರಂಗ್ ಕಳೆದ ವಾರ ಚೀನದಲ್ಲಿ ನಡೆದ ‘ಏಶ್ಯನ್ ಚಾಂಪಿಯನ್ಶಿಪ್’ ನಲ್ಲಿ ಚಿನ್ನದ ಪದಕ ಗೆದ್ದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?