ಕ್ಲೀನರ್ ಮೇಲೆ ಬಾಂಗ್ಲಾ ಕ್ರಿಕೆಟಿಗ ಶಬ್ಬೀರ್ ಹಲ್ಲೆ?
Team Udayavani, Jun 2, 2020, 5:40 AM IST
ಢಾಕಾ: ಬಾಂಗ್ಲಾ ಬ್ಯಾಟ್ಸ್ಮನ್ ಶಬ್ಬೀರ್ ರೆಹಮಾನ್ ಕಸ ಸಾಗಿಸುತ್ತಿದ್ದ ವಾಹನ ವೊಂದರ ಕ್ಲೀನರ್ ಮೇಲೆ ಹಲ್ಲೆ ಮಾಡಿದ್ದಾಗಿ ವರದಿಯಾಗಿದೆ.
ತಮ್ಮ ಮನೆಯ ಎದುರು ನಿಂತಿದ್ದ ಕಸದ ವಾಹನ ವೊಂದರ ಕ್ಲೀನರ್ ಮೇಲೆ ಶಬ್ಬೀರ್ ಹಲ್ಲೆ ನಡೆಸಿದರೆಂದೂ, ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು ಎಂಬುದಾಗಿ ವರದಿಯಾಗಿದೆ. ಆದರೆ ತಾನು ಯಾರ ಮೇಲೂ ಹಲ್ಲೆ ನಡೆಸಿಲ್ಲ ಎಂಬುದಾಗಿ ಶಬ್ಬೀರ್ ಸ್ಪಷ್ಟಪಡಿಸಿದ್ದಾರೆ.
ಪತ್ನಿಯೊಂದಿಗೆ ಬರುವಾಗ ನಡು ರಸ್ತೆಯಲ್ಲಿ ಕಸದ ವಾಹನವನ್ನು ನಿಲ್ಲಿಸಿದ್ದರು. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ, ಸ್ವಲ್ಪ ಬದಿಗೆ ನಿಲ್ಲಿಸಿ ಎಂದು ವಿನಂತಿಸಿಕೊಂಡೆ. ಒಮ್ಮೆ ಆ ವಾಹನದ ಹಾರ್ನ್ ಮಾಡಿದೆ. ಒಬ್ಬ ಗುರಾಯಿಸುತ್ತ ಬಂದ. ನಡೆದದ್ದು ಇಷ್ಟೇ… ಎಂಬುದಾಗಿ ಶಬ್ಬೀರ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್