ಕನ್ನಡಿಗ ಸುನಿಲ್ ಜೋಶಿ ಬಾಂಗ್ಲಾಕ್ಕೆ ಸ್ಪಿನ್ ಕೋಚ್?
Team Udayavani, Feb 12, 2017, 3:45 AM IST
ಹೈದರಾಬಾದ್: ಮಾಜಿ ಕ್ರಿಕೆಟಿಗ ಕನ್ನಡಿಗ ಸುನಿಲ್ ಜೋಶಿ ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ ಸ್ಪಿನ್ ಕೋಚ್ ಆಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಹೀಗೊಂದು ಸುದ್ದಿ ಈಗ ಹರಿದಾಡುತ್ತಿದೆ. ಆದರೆ ಅದಿನ್ನೂ ಅಧಿಕೃತವಾಗಿಲ್ಲ.
ಬಾಂಗ್ಲಾದೇಶ ಸದ್ಯ ಭಾರತ ವಿರುದ್ಧ ಏಕೈಕ ಟೆಸ್ಟ್ ಪಂದ್ಯ ಆಡುತ್ತಿದೆ. ವೇಗದ ಬೌಲಿಂಗ್ ವಿಭಾಗ ಸದೃಢವಾಗಿದ್ದರೂ ಸ್ಪಿನ್ ಬೌಲಿಂಗ್ ದುರ್ಬಲವಾಗಿದೆ. ಸ್ಪಿನ್ನರ್ಗಳಾದ ಮೆಹೆದಿ ಹಸನ್, ತೈಜುಲ್ ಇಸ್ಲಾಂ ಅವರಿಂದ ನಿಗದಿತ ಪ್ರದರ್ಶನ ಹೊರಹೊಮ್ಮಿಲ್ಲ. ಹೀಗಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅನಿಲ್ ಕುಂಬ್ಳೆ ಅವರನ್ನು ಸಂಪರ್ಕಿಸಿ ಸಲಹೆ ಕೇಳಿದೆ. ಆಗ ಕುಂಬ್ಳೆ, ಸ್ಪಿನ್ ಕೋಚಿಂಗ್ಗೆ ಜೋಶಿ ಹೆಸರನ್ನು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜೋಶಿ ಭಾರತದ ಪರ 15 ಟೆಸ್ಟ್ ಪಂದ್ಯ ಆಡಿದ್ದಾರೆ. ಒಟ್ಟು 41 ವಿಕೆಟ್ ಪಡೆದಿದ್ದಾರೆ. ಬ್ಯಾಟಿಂಗ್ನಲ್ಲೂ ಗುಣಮಟ್ಟದ ಆಟ ಪ್ರದರ್ಶಿಸಿರುವ ಅವರು 1 ಅರ್ಧಶತಕ ಒಳಗೊಂಡಂತೆ 352 ರನ್ಗಳಿಸಿದ್ದಾರೆ.