ಸಚಿನ್‌ಗೆ ಮೊದಲ ಕಾರಿನ ಮೋಹ : ಮಾರುತಿ-800 ಹುಡುಕಿಕೊಡಬೇಕಂತೆ!

Team Udayavani, Aug 20, 2020, 6:23 AM IST

ಸಚಿನ್‌ಗೆ ಮೊದಲ ಕಾರಿನ ಮೋಹ : ಮಾರುತಿ-800 ಹುಡುಕಿಕೊಡಬೇಕಂತೆ!

ಸಚಿನ್‌ ತೆಂಡುಲ್ಕರ್‌ ಅವರ ಮೊದಲ ಕಾರು 'ಮಾರುತಿ-800'.

ಮುಂಬಯಿ: ಸಚಿನ್‌ ತೆಂಡುಲ್ಕರ್‌ ಅವರಿಗೆ ಕಾರುಗಳ ಕ್ರೇಜ್‌ ವಿಪರೀತ.

ಮಾರುತಿಯಿಂದ ಮೊದಲ್ಗೊಂಡು ಫೆರಾರಿ, ನಿಸ್ಸಾನ್‌ ಜಿಟಿ-ಆರ್‌ನಂತಹ ಬೃಹತ್‌ ಕಾರುಗಳ ಸಂಗ್ರಹವನ್ನೇ ಅವರು ಹೊಂದಿದ್ದಾರೆ.

ಕೆಲವು ಪ್ರಶಸ್ತಿ ರೂಪದಲ್ಲಿ ಬಂದರೆ, ಇನ್ನು ಕೆಲವನ್ನು ಪ್ರಾಯೋಜಕರು ನೀಡಿದ್ದಾರೆ. ಉಳಿದುದನ್ನು ಅವರೇ ಖರೀದಿಸಿದ್ದಾರೆ.

ಸಚಿನ್‌ ತೆಂಡುಲ್ಕರ್‌ ಅವರ ಮೊದಲ ಕಾರು ಎಂಬ ಹೆಗ್ಗಳಿಕೆ ‘ಮಾರುತಿ-800’ಗೆ ಸಲ್ಲುತ್ತದೆ. ಇದನ್ನು ಅವರು ತಮ್ಮದೇ ಸಂಪಾದನೆಯಿಂದ ಖರೀದಿಸಿದ್ದರು.

ಹೀಗಾಗಿ ಅವರು ಮಾರುತಿ-800 ಮೇಲೆ ವಿಪರೀತ ಮೋಹದ ಜತೆಗೆ ಭಾವನಾತ್ಮಕ ನಂಟನ್ನು ಹೊಂದಿದ್ದಾರೆ. ನೋವಿನ ಸಂಗತಿಯೆಂದರೆ, ಆ ಕಾರು ಈಗ ಅವರ ಬಳಿ ಇಲ್ಲದಿರುವುದು.

ದಯವಿಟ್ಟು ಇದನ್ನು ತನಗೆ ಮರಳಿಸಿ ಎಂದು ತೆಂಡುಲ್ಕರ್‌ ‘ಇನ್‌ ದ ನ್ಪೋರ್ಟ್‌ ಲೈಟ್‌’ ಕಾರ್ಯಕ್ರಮದಲ್ಲಿ ವಿನಂತಿಸಿಕೊಂಡಿದ್ದಾರೆ!

‘ಮಾರುತಿ-800 ನನ್ನ ಮೊದಲ ಕಾರು. ಆದರೆ ಅದೀಗ ನನ್ನ ಬಳಿ ಇಲ್ಲ. ಇದನ್ನು ಮರಳಿ ಪಡೆಯಬೇಕೆಂಬುದು ನನ್ನ ಬಯಕೆ.

ಈ ಕಾರಿನೊಂದಿಗೆ ನಾನು ಭಾವನಾತ್ಮಕ ನಂಟನ್ನು ಹೊಂದಿದ್ದೇನೆ. ಈ ಕಾರ್ಯಕ್ರಮ ನೋಡುತ್ತಿರುವವರು ದಯವಿಟ್ಟು ಈ ಕಾರಿನ ಬಗ್ಗೆ ಮಾಹಿತಿ ನೀಡಬಹುದೆಂದು ನಂಬಿದ್ದೇನೆ’ ಎಂದು ತೆಂಡುಲ್ಕರ್‌ ಹೇಳಿದ್ದಾರೆ.
ಆದರೆ ಆ ಮಾರುತಿ-800 ಕಾರು ಎಲ್ಲಿಗೆ ಹೋಯಿತು ಎಂಬ ಬಗ್ಗೆ ತೆಂಡುಲ್ಕರ್‌ ಯಾವುದೇ ಮಾಹಿತಿ ನೀಡಿಲ್ಲ.

ಕಾರುಗಳ ಹುಚ್ಚು
ಈ ಕಾರ್ಯಕ್ರಮದ ವೇಳೆ ಸಚಿನ್‌ ತೆಂಡುಲ್ಕರ್‌ ತಮ್ಮ ಕಾರುಗಳ ಕ್ರೇಜ್‌ ಕುರಿತೂ ಹೇಳಿಕೊಂಡರು. ‘ನಮ್ಮ ಮನೆಯ ಪಕ್ಕದಲ್ಲೇ ಓಪನ್‌ ಡ್ರೈವ್‌-ಇನ್‌ ಮೂವೀ ಹಾಲ್‌ ಒಂದಿತ್ತು. ಅಲ್ಲಿಗೆ ಜನರು ತರೇವಾರಿ ಕಾರುಗಳಲ್ಲಿ ಬಂದು ಸಿನೆಮಾ ನೋಡುತ್ತಿದ್ದರು. ಪಾರ್ಕ್‌ ಮಾಡಿದ ಈ ಕಾರುಗಳು ನನ್ನನ್ನು ವಿಪರೀತ ಸೆಳೆಯುತ್ತಿದ್ದವು. ಅಣ್ಣನೊಂದಿಗೆ ಬಾಲ್ಕನಿ ಮೇಲೆ ಗಂಟೆಗಟ್ಟಲೆ ನಿಂತು ಈ ಕಾರುಗಳನ್ನೇ ವೀಕ್ಷಿಸುತ್ತಿದ್ದೆ…’ ಎಂಬುದಾಗಿ ಸಚಿನ್‌ ತಮ್ಮ ಕಾರು ಪ್ರೀತಿಯನ್ನು ಬಣ್ಣಿಸಿದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.