ಬಿಸಿಸಿಐ ನೂತನ ಒಡಂಬಡಿಕೆ ವನಿತಾ ಕ್ರಿಕೆಟಿಗರಿಗೆ ಅನ್ಯಾಯ?


Team Udayavani, Mar 9, 2018, 7:00 AM IST

BCCI,-Indian-women–Cricket.jpg

ಹೊಸದಿಲ್ಲಿ: ಬಿಸಿಸಿಐ ಬುಧವಾರ ಪ್ರಕಟಿಸಿದ ಕ್ರಿಕೆಟಿಗರ ನೂತನ ಒಡಂಬಡಿಕೆಯಲ್ಲಿ ವನಿತಾ ಕ್ರಿಕೆಟಿಗರಿಗೆ ಅನ್ಯಾಯವಾಗಿದೆ ಎಂಬ ಕೂಗೆದ್ದಿದೆ.

ಪುರುಷರ ಕ್ರಿಕೆಟಿಗರಿಗೆ ಇದೇ ಮೊದಲ ಬಾರಿಗೆ ನೂತನ “ಎ ಪ್ಲಸ್‌’ ಶ್ರೇಣಿಯನ್ನು ರೂಪಿಸಲಾಗಿದ್ದು, ವನಿತೆಯರನ್ನು ಅದೇ ಹಳೆಯ ಎ, ಬಿ, ಸಿ ವಿಭಾಗಗಳಲ್ಲೇ ಮುಂದುವರಿಸಲಾಗಿದೆ. ಇದನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಅಗ್ರ ಶ್ರೇಣಿಯ ಪುರುಷರಿಗೆ ಲಭಿಸಿದ ಶೇ. 7ರಷ್ಟು ವೇತನವಷ್ಟೇ ವನಿತಾ ಅಗ್ರ ಶ್ರೇಣಿಯ ಆಟಗಾರ್ತಿಯರಿಗೆ ಲಭಿಸುತ್ತದೆ. 

ಆದರೆ 2017-18ರ ಕ್ರಿಕೆಟ್‌ ಸಾಧನೆಯನ್ನು ಅವಲೋಕಿಸುವಾಗ ವನಿತೆಯರ ಸಾಧನೆ ಪುರುಷರಿಗೆ ಕಡಿಮೆಯೇನೂ ಇಲ್ಲವೆಂಬುದು ಸಾಬೀತಾಗುತ್ತದೆ.

ಭಾರತದ ಪುರುಷರ ತಂಡ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಪಾಕಿಸ್ಥಾನಕ್ಕೆ ಹೀನಾಯವಾಗಿ ಸೋತರೆ, ವನಿತೆಯರು ಐಸಿಸಿ ವಿಶ್ವಕಪ್‌ ಟ್ರೋಫಿಯನ್ನು ಸ್ವಲ್ಪದರಲ್ಲೇ ಕಳೆದುಕೊಂಡಿದ್ದರು. ಮೊನ್ನೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಎರಡೂ ತಂಡಗಳ ಪ್ರದರ್ಶನ ಉನ್ನತ ಮಟ್ಟದಲ್ಲಿತ್ತು. ಎರಡೂ ತಂಡಗಳು ಏಕದಿನ ಹಾಗೂ ಟಿ20 ಸರಣಿಯನ್ನು ಜಯಿಸಿದ್ದವು. ಆದರೆ ನೂತನ ವರ್ಗೀಕೃತ ಶ್ರೇಣಿಯಲ್ಲಿ ವಿರಾಟ್‌ ಕೊಹ್ಲಿ ವಾರ್ಷಿಕ 7 ಕೋಟಿ ರೂ. ವೇತನ ಪಡೆದರೆ, ವನಿತಾ ತಂಡದ ನಾಯಕಿ ಮಿಥಾಲಿ ರಾಜ್‌ಗೆ ಲಭಿಸುವುದು 50 ಲಕ್ಷ ರೂ. ಮಾತ್ರ!

ಬಿ ಮತ್ತು ಸಿ ದರ್ಜೆಯ ವನಿತಾ ಆಟಗಾರ್ತಿಯರಿಗೆ ಕ್ರಮವಾಗಿ 30 ಲಕ್ಷ ರೂ. ಹಾಗೂ 10 ಲಕ್ಷ ರೂ. ವೇತನವಷ್ಟೇ ನೀಡಲಾಗುತ್ತಿದೆ. ಆದರೆ ಯಾವುದೇ ಶ್ರೇಣಿಯಲ್ಲಿ ಪುರುಷ ಕ್ರಿಕೆಟಿಗರ ವೇತನ ಒಂದು ಕೋ.ರೂ.ಗಿಂತ ಕಡಿಮೆ ಇಲ್ಲವೇ ಇಲ್ಲ! ಎರಡೂ ತಂಡಗಳ ಆಟಗಾರರು ಗೆಲುವಿಗಾಗಿ ಏಕರೀತಿಯ ಶ್ರಮ ಹಾಕಿದರೂ ಲಭಿಸುವ ವೇತನದಲ್ಲಿ ಮಾತ್ರ ಭಾರೀ ತಾರತಮ್ಯ ಎಸಗಲಾಗಿದೆ ಎಂದು ದೂರಲಾಗಿದೆ. ವನಿತಾ ಕ್ರಿಕೆಟಿಗರಿಗೆ ಎಸಗಲಾಗುತ್ತಿರುವ ಈ ವೇತನ ತಾರತಮ್ಯಕ್ಕೆ ದೇಶದ ಅನೇಕ ಮಹಿಳಾ ಕ್ರಿಕೆಟ್‌ ಸಂಸ್ಥೆಗಳು ಅಸಮಾಧಾನ ವ್ಯಕ್ತಪಡಿಸಿವೆ.

ಟಾಪ್ ನ್ಯೂಸ್

ಭಿಕ್ಷೆ ಬೇಡುವ ಕೈಗಳಿಗೆ ಕೃಷಿ ಕಾರ್ಯ

ಭಿಕ್ಷೆ ಬೇಡುವ ಕೈಗಳಿಗೆ ಕೃಷಿ ಕಾರ್ಯ

rwytju11111111111

ಭಾನುವಾರದ ರಾಶಿ ಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಅಮೇಠಿಯಲ್ಲಿ ಎಕೆ-203 ರೈಫ‌ಲ್‌ ಉತ್ಪಾದನೆ

ಅಮೇಠಿಯಲ್ಲಿ ಎಕೆ-203 ರೈಫ‌ಲ್‌ ಉತ್ಪಾದನೆ

ಒಮಿಕ್ರಾನ್‌ ಸೋಂಕು 4ಕ್ಕೆ

ಒಮಿಕ್ರಾನ್‌ ಸೋಂಕು 4ಕ್ಕೆ

ಕೃತಿಗಳ ರೂಪದಲ್ಲಿ ಅನಾವರಣಗೊಳ್ಳಲಿವೆ ನೌಕಾಪಡೆಯ ಸಮರಗಳ ಇತಿಹಾಸ 

ಕೃತಿಗಳ ರೂಪದಲ್ಲಿ ಅನಾವರಣಗೊಳ್ಳಲಿವೆ ನೌಕಾಪಡೆಯ ಸಮರಗಳ ಇತಿಹಾಸ 

ಬೋನಸ್‌ಗಾಗಿ 600 ಕೋಟಿ!

ಬೋನಸ್‌ಗಾಗಿ 600 ಕೋಟಿ!

ವಾಷಿಂಗ್ಟನ್‌ ದೂತಾವಾಸದಲ್ಲೂ ದಿವಾಳಿ ಬಿಸಿ!

ವಾಷಿಂಗ್ಟನ್‌ ದೂತಾವಾಸದಲ್ಲೂ ದಿವಾಳಿ ಬಿಸಿ!



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಕ್ಷ್ಮಣ್‌ ಎನ್‌ಸಿಎ ಮುಖ್ಯಸ್ಥ: ಡಿ. 13ಕ್ಕೆ ಅಧಿಕಾರ ಸ್ವೀಕಾರ

ಲಕ್ಷ್ಮಣ್‌ ಎನ್‌ಸಿಎ ಮುಖ್ಯಸ್ಥ: ಡಿ. 13ಕ್ಕೆ ಅಧಿಕಾರ ಸ್ವೀಕಾರ

ವರ್ಲ್ಡ್ ಟೂರ್‌ ಫೈನಲ್ಸ್‌ಪ್ರಶಸ್ತಿ ಸುತ್ತಿಗೆ ಪಿ.ವಿ. ಸಿಂಧು

ವರ್ಲ್ಡ್ ಟೂರ್‌ ಫೈನಲ್ಸ್‌ಪ್ರಶಸ್ತಿ ಸುತ್ತಿಗೆ ಪಿ.ವಿ. ಸಿಂಧು

ಭಾರತದ ಬೌಲಿಂಗ್ ದಾಳಿಗೆ ಬೆದರಿದ ಕಿವೀಸ್: ಕೇವಲ 62 ರನ್ ಗೆ ಆಲೌಟ್

ಭಾರತದ ಬೌಲಿಂಗ್ ದಾಳಿಗೆ ಬೆದರಿದ ಕಿವೀಸ್: ಕೇವಲ 62 ರನ್ ಗೆ ಆಲೌಟ್

ಜಿಮ್ ಲೇಕರ್, ಕುಂಬ್ಳೆ ದಾಖಲೆ ಸರಿಗಟ್ಟಿದ ಮುಂಬೈ ಮೂಲದ ಅಜಾಜ್ ಪಟೇಲ್: ಕುಂಬ್ಳೆ ಪ್ರಶಂಸೆ

ಜಿಮ್ ಲೇಕರ್, ಕುಂಬ್ಳೆ ದಾಖಲೆ ಸರಿಗಟ್ಟಿದ ಮುಂಬೈ ಮೂಲದ ಅಜಾಜ್ ಪಟೇಲ್: ಕುಂಬ್ಳೆ ಪ್ರಶಂಸೆ

ಮುಂಬೈ ಟೆಸ್ಟ್: ಹತ್ತಕ್ಕೆ ಹತ್ತೂ ವಿಕೆಟ್ ಕಿತ್ತ ಅಜಾಜ್ ಪಟೇಲ್ ಹೊಸ ದಾಖಲೆ

ಮುಂಬೈ ಟೆಸ್ಟ್: ಹತ್ತಕ್ಕೆ ಹತ್ತೂ ವಿಕೆಟ್ ಕಿತ್ತ ಅಜಾಜ್ ಪಟೇಲ್ ದಾಖಲೆ

MUST WATCH

udayavani youtube

ಹೊಸಮಠ ಕಂಬಳದಲ್ಲಿ ಹಲಗೆ ಸಹಿತ ಕೆರೆಗೆ ಜಿಗಿದ ಕೋಣಗಳು ; ತಪ್ಪಿದ ಅನಾಹುತ

udayavani youtube

ನಮ್ಮ ನೌಕಾಪಡೆ ಎಲ್ಲದಕ್ಕೂ ಸನ್ನದ್ಧ !

udayavani youtube

ಸರ್ಕಾರ ಹೇಗೆಲ್ಲಾ ರೈತರ ಬೆಂಬಲಕ್ಕೆ ನಿಂತಿದೆ ?

udayavani youtube

ಬಂಟ್ವಾಳ : ಬೇಟೆಗಾಗಿ ಬಂದು ಹೆದರಿ ಓಡಿದ ಚಿರತೆ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

udayavani youtube

ಚಿಕ್ಕಮಗಳೂರು : ಕಾಫಿ ತೋಟದೊಳಗೆ ನುಗ್ಗಿದ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಾವಲು ವಾಹನ

ಹೊಸ ಸೇರ್ಪಡೆ

ಭಿಕ್ಷೆ ಬೇಡುವ ಕೈಗಳಿಗೆ ಕೃಷಿ ಕಾರ್ಯ

ಭಿಕ್ಷೆ ಬೇಡುವ ಕೈಗಳಿಗೆ ಕೃಷಿ ಕಾರ್ಯ

rwytju11111111111

ಭಾನುವಾರದ ರಾಶಿ ಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಅಮೇಠಿಯಲ್ಲಿ ಎಕೆ-203 ರೈಫ‌ಲ್‌ ಉತ್ಪಾದನೆ

ಅಮೇಠಿಯಲ್ಲಿ ಎಕೆ-203 ರೈಫ‌ಲ್‌ ಉತ್ಪಾದನೆ

ಒಮಿಕ್ರಾನ್‌ ಸೋಂಕು 4ಕ್ಕೆ

ಒಮಿಕ್ರಾನ್‌ ಸೋಂಕು 4ಕ್ಕೆ

ಕೃತಿಗಳ ರೂಪದಲ್ಲಿ ಅನಾವರಣಗೊಳ್ಳಲಿವೆ ನೌಕಾಪಡೆಯ ಸಮರಗಳ ಇತಿಹಾಸ 

ಕೃತಿಗಳ ರೂಪದಲ್ಲಿ ಅನಾವರಣಗೊಳ್ಳಲಿವೆ ನೌಕಾಪಡೆಯ ಸಮರಗಳ ಇತಿಹಾಸ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.