ಅ.23ರ ಚುನಾವಣೆ: ಅನುರಾಗ್‌ ಬೆಂಬಲಿಗರಿಗೆ ಬಿಸಿಸಿಐ ನಾಯಕತ್ವ?

Team Udayavani, Oct 9, 2019, 4:07 AM IST

ಮುಂಬಯಿ: ಸತತ 2 ವರ್ಷಗಳ ಕಾಲ ಆಡಳಿತಾಧಿಕಾರಿಗಳ ನಿಯಂತ್ರಣದಲ್ಲಿದ್ದ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಸ್ವತಂತ್ರ ಆಡಳಿತ ಸಿಗುವ ಕಾಲ ಸನ್ನಿಹಿತವಾಗಿದೆ.

ಅ. 23ಕ್ಕೆ ನಡೆಯುವ ಚುನಾವಣೆಯಲ್ಲಿ ಹೊಸ ನೇತಾರರು ಯಾರೆಂದು ಗೊತ್ತಾಗಲಿದೆ. ಆದರೆ ಇಲ್ಲಿ ಆಯೆ ಯಾಗುವ ನೇತಾರರು ಬಿಜೆಪಿ ನಾಯಕ, ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಬೆಂಬಲಿಗರಾಗಿರುತ್ತಾರೆಂದು ವರದಿಯೊಂದು ಹೇಳಿದೆ.

ಬಿಸಿಸಿಐ ಮಾಜಿ ಅಧ್ಯಕ್ಷರೂ ಆಗಿರುವ ಅನುರಾಗ್‌, ನ್ಯಾಯಾಲ ಯದ ತೀರ್ಪಿನಿಂದ ಅಧಿಕಾರ ಕಳೆದು ಕೊಂಡಿದ್ದರು. ಇದೀಗ ಚುನಾವಣೆ ಯಲ್ಲಿ ಅವರ ಬಣದ ನಾಯಕರೇ ಅಧಿಕಾರ ಹಿಡಿಯಲಿದ್ದಾರೆ, ಇದಕ್ಕೆ ಸ್ವತಃ ಅಮಿತ್‌ ಶಾ ಬೆಂಬಲವೂ ಇದೆ ಎನ್ನಲಾಗಿದೆ. ಬಿಜೆಪಿಯಲ್ಲಿ ಈ ಹಿಂದೆ ಕ್ರಿಕೆಟ್‌ ಆಡಳಿತದ ಮೇಲೆ ಜೇಟ್ಲಿ ಹಿಡಿತ ಹೊಂದಿದ್ದರು. ಅವರ ಮರಣದ ಅನಂತರ ಅನುರಾಗ್‌ ಆ ಸ್ಥಾನಕ್ಕೇರಿದ್ದಾರೆ. ಆದ್ದರಿಂದ ಅನುರಾಗ್‌ಗೆ ಈ ವಿಚಾ ರದಲ್ಲಿ ಮುಂದುವರಿಯಲು ಅಮಿತ್‌ ಶಾ ಸಹಕಾರವಿದೆ ಎಂದು ವಿಶ್ಲೇಷಿಸಲಾಗಿದೆ. ಅನುರಾಗ್‌ ಕೇಂದ್ರ ಸಚಿವರಾಗಿರುವುದರಿಂದ ಅವರಿಗೆ ನೂತನ ನಿಯಮಗಳ ಪ್ರಕಾರ ಬಿಸಿಸಿಐ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿಲ್ಲ. ಆದ್ದರಿಂದ ಎಲ್ಲ ರಾಜ್ಯಸಂಸ್ಥೆಗಳೊಂದಿಗೆ ಅನುರಾಗ್‌ ಸಂಪರ್ಕದಲ್ಲಿದ್ದಾರೆ. ಅವರು ಸೂಚಿಸಿದ ವ್ಯಕ್ತಿಯೇ ಗೆಲ್ಲುವುದು ಖಚಿತ ಎನ್ನಲಾಗಿದೆ.

ಸದ್ಯ ಅನುರಾಗ್‌ ಠಾಕೂರ್‌ಗಿರುವ ಪ್ರಬಲವಾದ ಸವಾಲು ಬಿಸಿಸಿಐ ಹಾಗೂ ತಮಿಳುನಾಡು ಕ್ರಿಕೆಟ್‌ ಸಂಸ್ಥೆಯ ಮಾಜಿ ಮುಖ್ಯಸ್ಥ ಎನ್‌.ಶ್ರೀನಿವಾಸನ್‌ ಅವರದ್ದು. ಉದ್ಯಮಿಯಾಗಿರುವ ಶ್ರೀನಿವಾಸನ್‌ಗೆ ಭಾರತೀಯ ಕ್ರಿಕೆಟ್‌ ವ್ಯವಸ್ಥೆಯ ಮೇಲೆ ಭಾರೀ ಹಿಡಿತವಿದೆ. ಶ್ರೀನಿವಾಸನ್‌ ಬಣ ತಿರುಗಿಬಿದ್ದರೆ, ಅನುರಾಗ್‌ಗೆ ಹಿಡಿತ ಸಾಧಿಸಲು ಕಷ್ಟವಾಗಬಹುದು.

ಗಮನಾರ್ಹ ಸಂಗತಿಯೆಂದರೆ ಕಳೆದ ಕೆಲವು ದಿನಗಳಿಂದ ಶ್ರೀನಿವಾಸನ್‌ ಮತ್ತು ಅನುರಾಗ್‌ ಸಂಪರ್ಕದಲ್ಲಿದ್ದಾರೆ. ಇಬ್ಬರೂ ಸೇರಿ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆಯೂ ಮಾತುಕತೆ ನಡೆದಿದೆ ಎಂದು ಮುಂಬಯಿ ಮಿರರ್‌ ಪತ್ರಿಕೆಯಲ್ಲಿ ವರದಿಯಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ