ರಣಜಿ ಅಂಕಣ ಹೇಗಿರಬೇಕೆಂದು ಇನ್ನೂ ತಿಳಿಸದ ಬಿಸಿಸಿಐ!

Team Udayavani, Dec 9, 2019, 6:23 AM IST

ಹೊಸದಿಲ್ಲಿ: ಸೋಮವಾರದಿಂದ ರಣಜಿ ಪಂದ್ಯಾವಳಿ ಆರಂಭವಾಗಲಿದೆ. ಆದರೆ ಬಿಸಿಸಿಐ ಇನ್ನೂ ಅಂಕಣ ಹೇಗಿರಬೇಕೆಂಬ ಮಾರ್ಗದರ್ಶಿ ಸೂತ್ರಗಳನ್ನು ತಿಳಿಸಿಲ್ಲ ಎಂದು ಕ್ಯುರೇಟರ್‌ಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಂಕಣವನ್ನು ಸಿದ್ಧಪಡಿಸುವ ಹೊಣೆ ಹೊತ್ತಿರುವ ಕ್ಯುರೇಟರ್‌ಗಳಿಗೆ ಬಿಸಿಸಿಐ ನಿರ್ದೇಶನ ನೀಡುತ್ತದೆ. ಹಾಗೆಯೇ ಒಂದು ಕಮ್ಮಟ ನಡೆಸಿ ತಿಳಿವಳಿಕೆ ನೀಡುತ್ತದೆ. ಈ ಬಾರಿ ಅದಾಗಿಲ್ಲ ಎನ್ನುವುದು ಕ್ಯುರೇಟರ್‌ಗಳ ಆಕ್ರೋಶಕ್ಕೆ ಕಾರಣ. ಬಿಸಿಸಿಐನ ಮುಖ್ಯ ಕ್ಯುರೇಟರ್‌ ಆಶಿಷ್‌ ಭೌಮಿಕ್‌ ಕೂಡ ತಮಗೆ ಬಿಸಿಸಿಐನಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಖಚಿತಪಡಿಸಿದ್ದಾರೆ.

ಇದರ ಪರಿಣಾಮ ಕ್ಯುರೇಟರ್‌ಗಳು ಒತ್ತಡಕ್ಕೆ ಸಿಲುಕಿದ್ದಾರೆ. ಪಂದ್ಯ ಶುರುವಾಗಿ ಮೊದಲನೇ ದಿನ ಕಳೆಯುವವರೆಗೆ ತಟಸ್ಥರಾಗಿದ್ದ ಕ್ಯುರೇಟರ್‌ಗಳಿಗೆ ಮೈದಾನದಲ್ಲೇ ಇರಲು ತಿಳಿಸಲಾಗಿದೆ. ಮುಂಚಿನಂತೆ ಪಂದ್ಯಾರಂಭಗೊಂಡ ಕೂಡಲೇ ಹೊರಡಲು ಬಿಡುತ್ತಿಲ್ಲ ಎಂದು ಕ್ಯುರೇಟರ್‌ಗಳು ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ