“ನಿಮ್ಮ ತಂದೆಗೆ ಕೃತಜ್ಞರಾಗಿರಿ’
Team Udayavani, Jun 22, 2020, 11:25 AM IST
ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ತಂದೆಯೆ ಬಗೆಗಿನ ಪ್ರೀತಿ, ಗೌರವ, ಅಭಿಮಾನವನ್ನು ಸಾಮಾಜಿಕ ಜಾಲತಾಣದಲ್ಲಿ ಭಾನುವಾರ ಹಂಚಿಕೊಂಡಿದ್ದಾರೆ. ತಂದೆಯ ದಿನಾಚರಣೆ ಪ್ರಯುಕ್ತ ಮಾತನಾಡಿರುವ ಕೊಹ್ಲಿ ತಮ್ಮ ತಂದೆಯೊಂದಿಗೆ ಬಾಲ್ಯದಲ್ಲಿ ಕಳೆದ ಕ್ಷಣಗಳ ಫೋಟೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಈ ವೇಳೆ ಮಾತನಾಡಿರುವ ಕೊಹ್ಲಿ, “ನಿಮ್ಮ ತಂದೆಯ ಪ್ರೀತಿಗಾಗಿ ನೀವು ಎಂದಿಗೂ ಕೃತಜ್ಞರಾಗಿರಿ, ಆದರೆ ನಿಮ್ಮ ಆಯ್ಕೆಯ ಬದುಕಿನ ದಾರಿಯಲ್ಲಿ ನೀವು ಅಂದುಕೊಂಡಂತೆ ಮುನ್ನಡೆಯಿರಿ’ ಎಂದು ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ.
“ನೀವು ಎಂದಿಗೂ ಹಿಂದೆ ತಿರುಗಿ ನೋಡ ಬೇಕಾಗಿಲ್ಲ, ತಂದೆ ನಿಮ್ಮ ಜತೆ ಇರಲಿ ಅಥವಾ ಇಲ್ಲದಿರಲಿ, ನಿಮ್ಮನ್ನು ಯಾವಾಗಲೂ ಅವರು ಗಮನಿಸುತ್ತಿರುತ್ತಾರೆ,
ಎಲ್ಲರಿಗೂ ತಂದೆಯ ದಿನಾಚರಣೆಯ ಶುಭಾಶಯಗಳು’ ಎಂದು ಇನ್ಸಾ$rಗ್ರಾಮ್‌ನಲ್ಲಿ ತಿಳಿಸಿದ್ದಾರೆ. ವಿರಾಟ್ ಕೊಹ್ಲಿ 18 ವರ್ಷದ ಹುಡುಗನಾಗಿದ್ದಾಗ, ದೆಹಲಿ ತಂಡದ ಪರ ದೇಶಿ ಕ್ರಿಕೆಟ್ ಕೂಟ ದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಅವರ ತಂದೆ ಪ್ರೇಮ್ ಕೊಹ್ಲಿ ಪಾರ್ಶ್ವವಾಯು ವಿನಿಂದಾಗಿ ಮೃತಪಟ್ಟಿದ್ದರು. ತಂದೆಯನ್ನು ಕಳೆದುಕೊಂಡ ಸಂದರ್ಭದಲ್ಲಿ ಕೊಹ್ಲಿ ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ದೆಹಲಿ ತಂಡವನ್ನು ಪ್ರತಿನಿಧಿಸಿ ಭರ್ಜರಿ ಬ್ಯಾಟಿಂಗ್ ಮಾಡಿ ಗಮನ ಸೆಳೆದಿದ್ದನ್ನು
ಇಲ್ಲಿ ಸ್ಮರಿಸಬಹುದು.