ಮಿಥಾಲಿ ಹೆಸರು ಹೇಳಲು ತಡಬಡಾಯಿಸಿದ ಅಮೀರ್ ಖಾನ್
Team Udayavani, Oct 15, 2017, 7:00 AM IST
ಹೈದರಾಬಾದ್: ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಹೆಸರು ಹೇಳಲು ಬಾಲಿವುಡ್ ತಾರೆ ಅಮೀರ್ ಖಾನ್ ತಡಬಡಾಯಿಸಿದ ಘಟನೆ ನಡೆದಿದೆ.
ಹೈದರಾಬಾದ್ನಲ್ಲಿ ಅ.13ರಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 3ನೇ ಟಿ20 ಪಂದ್ಯ ನಿಗದಿಯಾಗಿತ್ತು. ಈ ಸಂದರ್ಭದಲ್ಲಿ “ಸೀಕ್ರೆಟ್ ಸೂಪರ್ಸ್ಟಾರ್’ ಚಿತ್ರದ ಪ್ರಚಾರಕ್ಕಾಗಿ ನಟ ಅಮೀರ್ ಖಾನ್ ಮತ್ತು ನಟಿ ಜೈರಾ ವಾಸಿಂ ಟೀವಿ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಭಾರತ ತಂಡದ ನಾಯಕಿ ಹೆಸರನ್ನು ಜೈರಾಗೆ ಕೇಳಲಾಗಿತ್ತು. ಆಕೆ ಉತ್ತರಿಸಲಿಲ್ಲ. ನಂತರ ಅಮೀರ್ ಖಾನ್ಗೆ ಕೇಳಲಾಗಿತ್ತು. “ನನಗೆ ಗೊತ್ತಿದೆ ಆದರೆ ಈಗ ಹೊಳೆಯುತ್ತಿಲ್ಲ’ ಎಂದು ಅಮೀರ್ ಹೇಳಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಭಾರೀ ಮಳೆಯಿಂದಾಗಿ ಪಂದ್ಯ ರದ್ದಾಗಿದೆ. ಇದರಿಂದಾಗಿ 3 ಪಂದ್ಯಗಳ ಟಿ20 ಸರಣಿ 1-1ರಿಂದ ಸಮಬಲದಲ್ಲಿ ಅಂತ್ಯವಾಗಿದೆ.