ಬುಕಿ ಸಂಜೀವ್‌ ಚಾವ್ಲಾ ಶೀಘ್ರ ಭಾರತಕ್ಕೆ

Team Udayavani, Feb 13, 2020, 12:16 PM IST

ಲಂಡನ್‌,: ಭಾರತೀಯ ನ್ಯಾಯಾಲಯಗಳಲ್ಲಿ ಮ್ಯಾಚ್‌ ಫಿಕ್ಸಿಂಗ್‌ ಆರೋಪವನ್ನು ಎದುರಿಸುತ್ತಿರುವ ಬುಕಿ ಸಂಜೀವ್‌ ಚಾವ್ಲಾನನ್ನು ಸ್ಕಾಟ್‌ ಲ್ಯಾಂಡ್‌ ಯಾರ್ಡ್‌ ಅಧಿಕಾರಿಗಳು ದಿಲ್ಲಿ ಪೊಲೀಸರಿಗೆ ಹಸ್ತಾಂತರಿಸಲು ಸಿದ್ಧತೆ ನಡೆಸುತ್ತಿದ್ದಾರೆ.

50ರ ಹರೆಯದ ಸಂಜೀವ್‌ ಚಾವ್ಲಾ 2000ದಲ್ಲಿ ದಕ್ಷಿಣ ಆಫ್ರಿಕಾದ ಹ್ಯಾನ್ಸಿ ಕ್ರೋನಿಯೆ ಭಾಗಿಯಾಗಿದ್ದ ಮ್ಯಾಚ್‌ ಫಿಕ್ಸಿಂಗ್‌ ಹಗರಣದ ಪ್ರಮುಖ ಆರೋಪಿಯಾಗಿದ್ದ. ಹಸ್ತಾಂತರ ಪ್ರಕ್ರಿಯೆಯ ಅಂತಿಮ ಕಾನೂನು ಪತ್ರವ್ಯವಹಾರಗಳು ಅಂತ್ಯಗೊಂಡಿದ್ದು ಈ ವಾರ ಹೀಥ್ರೊ ವಿಮಾನ ನಿಲ್ದಾಣದಲ್ಲಿ ಹಸ್ತಾಂತರ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಸ್ತಾಂತರ ಪ್ರಕ್ರಿಯೆ ಸಾಗುತ್ತಿರುವ ವೇಳೆ ನಾವು ಹೇಳಿಕೆಗಳನ್ನು ಮಾತ್ರ ನೀಡುತ್ತೇವೆ ಎಂದು ಮೆಟ್ರೋಪಾಲಿಟನ್‌ ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ದಿಲ್ಲಿಗೆ ತೆರಳಿದ ಬಳಿಕ ತಿಹಾರ್‌ ಜೈಲಿಗೆ ಕರೆದುಕೊಂಡು ಹೋಗುವ ಮೊದಲು ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಬಗ್ಗೆ ಭಾರತ ಸರಕಾರವು ಬ್ರಿಟನ್‌ನ ನ್ಯಾಯಾಲಯಕ್ಕೆ ಭರವಸೆ ನೀಡಿತ್ತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ