ಅಡಿಲೇಡ್ ಇಂಟರ್‌ನ್ಯಾಶನಲ್ ಟೆನಿಸ್: ಬೋಪಣ್ಣ-ರಾಮ್‌ಕುಮಾರ್ ಚಾಂಪಿಯನ್
Team Udayavani, Jan 10, 2022, 6:45 AM IST
ಅಡಿಲೇಡ್: ಎಟಿಪಿ ಟೂರ್ ಟೆನಿಸ್‌ನಲ್ಲಿ ಇದೇ ಮೊದಲ ಸಲ ಜತೆಯಾಗಿ ಕಣಕ್ಕಿಳಿದ ರೋಹನ್ ಬೋಪಣ್ಣ ಮತ್ತು ರಾಮ್‌ಕುಮಾರ್ ರಾಮನಾಥನ್ ವರ್ಷಾರಂಭದಲ್ಲೇ ಹರ್ಷ ಉಕ್ಕಿಸಿದ್ದಾರೆ. ಅಡಿಲೇಡ್ ಇಂಟರ್ ನ್ಯಾಶನಲ್ ಟೆನಿಸ್ ಕೂಟದ ಡಬಲ್ಸ್ ಪ್ರಶಸ್ತಿಯನ್ನೆತ್ತಿ ಸಂಭ್ರಮಿಸಿದ್ದಾರೆ.
ರವಿವಾರದ ಫೈನಲ್ ಹಣಾ ಹಣಿಯಲ್ಲಿ ಭಾರತೀಯ ಜೋಡಿ ಅಗ್ರ ಶ್ರೇಯಾಂಕದ ಇವಾನ್ ಡೊಡಿಗ್ (ಕ್ರೊವೇಶಿಯಾ)- ಮಾರ್ಸೆಲೊ ಮೆಲೊ (ಬ್ರಝಿಲ್) ವಿರುದ್ಧ ದಿಟ್ಟ ಹೋರಾಟ ನಡೆಸಿ 7-6 (6), 6-1 ಅಂತರದ ಗೆಲುವು ಸಾಧಿಸಿತು.
ಅಮೋಘ ಕಾದಾಟ
ಒಂದು ಗಂಟೆ, 21 ನಿಮಿಷಗಳ ಕಾಲ ನಡೆದ ಈ ಕಾದಾಟದಲ್ಲಿ ಭಾರತದ ಆಟಗಾರರು ಎಲ್ಲ 4 ಬ್ರೇಕ್ ಪಾಯಿಂಟ್ ಗಳನ್ನು ಉಳಿಸಿಕೊಂಡರು. ಬೋಪಣ್ಣ ಅಮೋಘ ಸರ್ವೀಸ್ ಹಾಗೂ ರಿಟರ್ನ್ಸ್ ಮೂಲಕ ಗಮನ ಸೆಳೆದರೆ, ರಾಮನಾಥನ್ ಆಲ್‌ರೌಂಡ್ ಶೋ ಮೂಲಕ ಎದುರಾಳಿಗೆ ಕಂಟಕವಾಗಿ ಪರಿಣಮಿಸಿದರು. ಇದು ರೋಹನ್ ಬೋಪಣ್ಣ ಗೆದ್ದ 20ನೇ ಎಟಿಪಿ ಡಬಲ್ಸ್ ಪ್ರಶಸ್ತಿ ಯಾದರೆ, ರಾಮ್‌ಕುಮಾರ್ ಅವರಿಗೆ ಮೊದಲನೆಯದು. ರಾಮ್‌ಕುಮಾರ್ ಕಾಣುತ್ತಿರುವ ಕೇವಲ 2ನೇ ಫೈನಲ್ ಹಣಾಹಣಿ ಇದಾಗಿದೆ. ಇದಕ್ಕೂ ಮೊದಲು 2018ರ ಹಾಲ್ ಆಫ್ ಫೇಮ್ ಟೆನಿಸ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಪ್ರಶಸ್ತಿ ಕೈತಪ್ಪಿತ್ತು.
ಇದನ್ನೂ ಓದಿ:ಇಂಡಿಯಾ ಓಪನ್ ಬ್ಯಾಡ್ಮಿಂಟನ್: ಹಿಂದೆ ಸರಿದ ಇಂಗ್ಲೆಂಡ್
250 ರ್‍ಯಾಂಕಿಂಗ್ ಅಂಕ
ಈ ಗೆಲುವಿಗಾಗಿ ಬೋಪಣ್ಣ- ರಾಮ್‌ಕುಮಾರ್ 18,700 ಡಾಲರ್ ಬಹುಮಾನದ ಜತೆಗೆ ತಲಾ 250 ರ್‍ಯಾಂಕಿಂಗ್ ಅಂಕ ಪಡೆದರು.
ಮುಂಬರುವ ಆಸ್ಟ್ರೇಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ ರಾಮ್‌ಕುಮಾರ್‌ಅವ ರಿಗೆ ಈ ಗೆಲುವು ಹೊಸ ಸ್ಫೂರ್ತಿ ತುಂಬಿದೆ. ಅವರಿಲ್ಲಿ ಅರ್ಹತಾ ಸುತ್ತಿನಲ್ಲಿ ಆಡಲಿದ್ದು, ಸಿಂಗಲ್ಸ್ ಮುಖ್ಯ ಸುತ್ತಿಗೆ ಪ್ರವೇಶ ಪಡೆಯುವ ಯೋಜನೆಯಲ್ಲಿದ್ದಾರೆ.
ರಫೆಲ್ ನಡಾಲ್ ವಿನ್
ರಫೆಲ್ ನಡಾಲ್ “ಮೆಲ್ಬರ್ನ್ ಸಮ್ಮರ್ ಸೆಟ್ 250′ ಪ್ರಶಸ್ತಿ ಜಯಿಸಿದ್ದಾರೆ. ಫೈನಲ್‌ನಲ್ಲಿ ಅವರು ಅಮೆರಿಕದ ಮೆಕ್ಸಿಮ್ ಕ್ರೇಸಿ ವಿರುದ್ಧ 7-6 (6), 6-3 ಅಂತರದ ಜಯ ಸಾಧಿಸಿದರು.
ಅಮೆರಿಕದ ಅಮಂಡಾ ಅನಿಸಿಮೋವಾ ವನಿತಾ ವಿಭಾಗದ ಚಾಂಪಿಯನ್ ಎನಿಸಿದರು. ಫೈನಲ್ ಹಣಾಹಣಿಯಲ್ಲಿ ಅವರು ಬೆಲರೂಸ್‌ನ ಅಲೆಕ್ಸಾಂಡ್ರಾ ಸಾನ್ಸೋವಿಕ್ ಅವರನ್ನು 7-5, 1-6, 6-4 ಅಂತರದಿಂದ ಪರಾಭವಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏಷ್ಯಾ ಕಪ್ ಗೆ ಭಾರತ ತಂಡ ಪ್ರಕಟ; ಬುಮ್ರಾ, ಹರ್ಷಲ್ ಪಟೇಲ್ ಗಾಯಾಳಾಗಿ ಹೊರಗೆ
ಪುರುಷರ ಹಾಕಿಯಲ್ಲಿ ರಜತ; ಆಸ್ಟ್ರೇಲಿಯ ವಿರುದ್ಧ ಫೈನಲ್‌ನಲ್ಲಿ ಭಾರತಕ್ಕೆ 7-0 ಸೋಲು
40 ರ ಹರೆಯದಲ್ಲೂ ಕಮಾಲ್: 16 ವರ್ಷಗಳ ನಂತರ ಟಿಟಿ ಸಿಂಗಲ್ಸ್ ಚಿನ್ನ ಗೆದ್ದ ಶರತ್
ಬ್ಯಾಡ್ಮಿಂಟನ್ನಲ್ಲಿ ಭಾರತಕ್ಕೆ ಮೂರನೇ ಚಿನ್ನ; ಟಿಟಿಯಲ್ಲಿ ಅಚಂತಾ ಕಮಾಲ್
ಬೆಳ್ಳಿ ಗೆದ್ದ ಮಹಿಳಾ ಕ್ರಿಕೆಟ್ ತಂಡಕ್ಕೆ ಸಚಿವ ಡಾ.ನಾರಾಯಣಗೌಡ ಅಭಿನಂದನೆ