
ವನಿತಾ ಚತುಷ್ಕೋಣ ಕ್ರಿಕೆಟ್ : ಭಾರತಕ್ಕೆ 9 ವಿಕೆಟ್ ಭರ್ಜರಿ ಜಯ
Team Udayavani, May 12, 2017, 12:28 AM IST

ಪೊಚೆಫ್ಸೂಸ್ಟ್ರೋಮ್: ವನಿತೆಯರ ಚತುಷ್ಕೋಣ ಕ್ರಿಕೆಟ್ ಕೂಟದ ಪಂದ್ಯದಲ್ಲಿ ಭಾರತವು ಜಿಂಬಾಬ್ವೆ ತಂಡವನ್ನು 9 ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡವು ಭಾರತೀಯ ವನಿತೆಯರ ನಿಖರ ದಾಳಿಗೆ ಕುಸಿದು 38.4 ಓವರ್‌ಗಳಲ್ಲಿ 93 ರನ್ನಿಗೆ ಆಲೌಟಾಯಿತು. ಇದಕ್ಕುತ್ತರವಾಗಿ ಭಾರತ ವನಿತೆಯರು 18.3 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು 94 ರನ್ ಪೇರಿಸಿ ಜಯಭೇರಿ ಬಾರಿಸಿದರು. ವೇದಾ ಕೃಷ್ಣಮೂರ್ತಿ ಅವರನ್ನು ತಂಡ ಬೇಗನೇ ಕಳೆದುಕೊಂಡಿತ್ತಾದರೂ ಹರ್ಮನ್‌ಪ್ರೀತ್ ಕೌರ್ ಮತ್ತು ಮೋನಾ ಮೆಶ್ರಾಮ್ ಮುರಿಯದ ದ್ವಿತೀಯ ವಿಕೆಟಿಗೆ 93 ರನ್ ಪೇರಿಸಿ ತಂಡದ ಜಯ ಸಾರಿದರು. ಹರ್ಮನ್‌ಪ್ರೀತ್ (38) ಮತ್ತು ಮೆಶ್ರಾಮ್ 46 ರನ್ ಗಳಿಸಿ ಅಜೇಯರಾಗಿ ಉಳಿದರು.
ಇನ್ನೊಂದು ಪಂದ್ಯ ದಕ್ಷಿಣ ಆಫ್ರಿಕಾ ಮತ್ತು ಅಯರ್‌ಲ್ಯಾಂಡ್ ವಿರುದ್ಧ ನಡೆದಿದೆ. ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ 5 ವಿಕೆಟಿಗೆ 337 ರನ್ನುಗಳ ಬೃಹತ್ ಮೊತ್ತ ಪೇರಿಸಿದೆ. ಇದು ದಕ್ಷಿಣ ಆಫ್ರಿಕಾ ವನಿತೆಯರು ಏಕದಿನ ಪಂದ್ಯದಲ್ಲಿ ಪೇರಿಸಿದ ಗರಿಷ್ಠ ಮೊತ್ತವಾಗಿದೆ.
ಟಾಪ್ ನ್ಯೂಸ್
