ಬೌಲಿಂಗ್‌ ಕೋಚ್‌; ಪ್ರಸಾದ್‌ ಆಸಕ್ತಿ

Team Udayavani, Jun 30, 2017, 3:35 AM IST

SPORTS-12.jpg

ಬೆಂಗಳೂರು: ಮಾಜಿ ಬೌಲರ್‌ ವೆಂಕಟೇಶ ಪ್ರಸಾದ್‌ ಟೀಮ್‌ ಇಂಡಿಯಾದ ಬೌಲಿಂಗ್‌ ಕೋಚ್‌ ಆಗುವ ಬಯಕೆ ವ್ಯಕ್ತಪಡಿಸಿದ್ದಾರೆ. ಆದರೆ ತಂಡದ ಪ್ರಧಾನ ಕೋಚ್‌ ಬಗ್ಗೆ ತನಗೆ ಆಸಕ್ತಿ ಇಲ್ಲ, ಜು. 9ರ ಗಡುವು ವಿಧಿಸಲಾಗಿದ್ದರೂ ತಾನು ಅರ್ಜಿ ಸಲ್ಲಿಸುವುದಿಲ್ಲ ಎಂದಿದ್ದಾರೆ.

ತಂಡದ ಕೋಚ್‌ ಆಗಿ ಯಾರೇ ಆಯ್ಕೆಯಾದರೂ ಸಮಸ್ಯೆ ಇಲ್ಲ. ಅದು ಸೆಹವಾಗ್‌ ಆಗಿರಲಿ ಅಥವಾ ರವಿ ಶಾಸ್ತ್ರಿ ಆಗಿರಲಿ, ತನ್ನ ಅನುಭವ ಹಾಗೂ ತಿಳಿವಳಿಕೆಯೊಂದಿಗೆ ಇವರ ಜತೆ ಹೊಂದಿಕೊಂಡು ಹೋಗಬಲ್ಲೆ ಎಂದಿದ್ದಾರೆ 47ರ ಹರೆಯದ ವೆಂಕಟೇಶ ಪ್ರಸಾದ್‌.

“ನಾನು ತಂಡದ ಪ್ರಧಾನ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿಲ್ಲ. ಸಲ್ಲಿಸುವುದೂ ಇಲ್ಲ. ಆದರೆ ಭಾರತ ತಂಡದ ಸಹಾಯಕ ಕೋಚ್‌ ಅಥವಾ ಬೌಲಿಂಗ್‌ ಕೋಚ್‌ ಬಗ್ಗೆ ನನಗೆ ಆಸಕ್ತಿ ಇದೆ’ ಎಂದು ಪ್ರಸಾದ್‌ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಪ್ರಸಾದ್‌ 2007ರಲ್ಲಿ ಭಾರತ ತಂಡದ ಬೌಲಿಂಗ್‌ ಕೋಚ್‌ ಆಗಿ ಆಯ್ಕೆಯಾಗಿ, 2 ವರ್ಷಗಳ ಕಾಲ ಈ ಹುದ್ದೆಯಲ್ಲಿದ್ದರು. ಭಾರತ ಟಿ-20 ವಿಶ್ವಕಪ್‌ ಗೆದ್ದದ್ದು ಪ್ರಸಾದ್‌ ಕಾಲಾವಧಿಯಲ್ಲೇ ಎಂಬುದು ಉಲ್ಲೇಖನೀಯ.

ಮುಂದಿನ ಶ್ರೀಲಂಕಾ ಪ್ರವಾಸದೊಳಗಾಗಿ ಭಾರತ ತಂಡದ ಪ್ರಧಾನ ಕೋಚ್‌ ಆಯ್ಕೆ ಪ್ರಕ್ರಿಯೆಯನ್ನು “ಕ್ರಿಕೆಟ್‌ ಸಲಹಾ ಸಮಿತಿ’ (ಸಿಎಸಿ) ಪೂರ್ತಿಗೊಳಿಸಬೇಕಿದೆ. ಹೀಗೆ ಆಯ್ಕೆಗೊಂಡ ಕೋಚ್‌ಗೆ ತನ್ನ ಸಹಾಯಕ ಸಿಬಂದಿಗಳ ಆಯ್ಕೆ ಬಗ್ಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗುವುದು.

ಆನಿಲ್‌ ಕುಂಬ್ಳೆ ಭಾರತ ತಂಡದ ಕೋಚ್‌ ಆಗಿದ್ದಾಗ ಕೇವಲ ಬ್ಯಾಟಿಂಗ್‌ ಕೋಚ್‌ (ಸಂಜಯ್‌ ಬಂಗಾರ್‌) ಮತ್ತು ಫೀಲ್ಡಿಂಗ್‌ ಕೋಚ್‌ (ಆರ್‌. ಶ್ರೀಧರ್‌) ಮಾತ್ರ ಇದ್ದರು. ಸ್ವತಃ ಬೌಲರ್‌ ಆಗಿದ್ದ ಕುಂಬ್ಳೆ ಈ ವಿಭಾಗದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಮಾರ್ಚ್‌ 2017ಕ್ಕೆ ಬಂಗಾರ್‌ ಮತ್ತು ಶ್ರೀಧರ್‌ ಒಡಂಬಡಿಕೆಯ ಅವಧಿ ಮುಗಿದರೂ ಬಿಸಿಸಿಐ ಸಲಹೆ ಮೇರೆಗೆ ವೆಸ್ಟ್‌ ಇಂಡೀಸ್‌ ಪ್ರವಾಸದ ತನಕ ಮುಂದುವರಿಯುವಂತೆ ಇವರಿಗೆ ಸೂಚಿಸಲಾಗಿತ್ತು.

ವೆಂಕಟೇಶ ಪ್ರಸಾದ್‌ 2016ರ ಕೋಚ್‌ ಆಯ್ಕೆ ವೇಳೆ ಅರ್ಜಿ ಸಲ್ಲಿಸಿದ್ದರು. ಆದರೆ ಅವರು ಅಂತಿಮ ಸುತ್ತನ್ನೂ ತಲುಪಿರಲಿಲ್ಲ. ಬಳಿಕ ಅನಿಲ್‌ ಕುಂಬ್ಳೆ ಆಯ್ಕೆಯಾದದ್ದು ಈಗ ಇತಿಹಾಸ.

ಟಾಪ್ ನ್ಯೂಸ್

ishwarappa-15

ಕಾಂಗ್ರೆಸ್‍ಗೆ ನಾಯಕತ್ವ, ಸಂಘಟನೆ, ಸಾಧನೆ ಇಲ್ಲ: ಈಶ್ವರಪ್ಪ

ಟ್ರೇಲರ್‌, ಟೀಸರ್‌, ಸಾಂಗ್ಸ್‌ ಧಮಾಕ: ರಿಲೀಸ್ ಗೆ ತಯಾರಾದ ಚಿತ್ರಗಳ ಶರವೇಗದ ಪ್ರಮೋಷನ್

ಟ್ರೇಲರ್‌, ಟೀಸರ್‌, ಸಾಂಗ್ಸ್‌ ಧಮಾಕ: ರಿಲೀಸ್ ಗೆ ತಯಾರಾದ ಚಿತ್ರಗಳ ಶರವೇಗದ ಪ್ರಮೋಷನ್

ಸರಕಾರದ ನಿರ್ಲಕ್ಷದಿಂದಾಗಿ 50 ಲಕ್ಷ ಜನರು ಕೋವಿಡ್ ದಿಂದಾಗಿ ಮೃತಪಟ್ಟಿದ್ದಾರೆ: ಸಿದ್ದರಾಮಯ್ಯ

ಸರಕಾರದ ನಿರ್ಲಕ್ಷದಿಂದಾಗಿ 50 ಲಕ್ಷ ಜನರು ಕೋವಿಡ್ ದಿಂದಾಗಿ ಮೃತಪಟ್ಟಿದ್ದಾರೆ: ಸಿದ್ದರಾಮಯ್ಯ

ಸಿಎಎ ವಿರೋಧಿಸಿ ಮಂಗಳೂರು ಗಲಭೆ ಪ್ರಕರಣ: ಪೊಲೀಸರು ತಪ್ಪಿತಸ್ಥರಲ್ಲ ಎಂದ ಸರ್ಕಾರ

ಸಿಎಎ ವಿರೋಧಿಸಿ ಮಂಗಳೂರು ಗಲಭೆ ಪ್ರಕರಣ: ‘ಪೊಲೀಸರು ತಪ್ಪಿತಸ್ಥರಲ್ಲ’ ಎಂದ ಸರ್ಕಾರ

ಪಲ್ಟಿಯಾಗಿ ಕಾಲುವೆಗೆ ಬಿದ್ದ ಕಾರು: ಸ್ಥಳದಲ್ಲೇ ನಾಲ್ವರ ಸಾವು

ಪಲ್ಟಿಯಾಗಿ ಕಾಲುವೆಗೆ ಬಿದ್ದ ಕಾರು: ಸ್ಥಳದಲ್ಲೇ ನಾಲ್ವರ ಸಾವು

100 ಕೋಟಿ ಡೋಸ್‌: ಪಾರಂಪರಿಕ ತಾಣಗಳಲ್ಲಿ ತ್ರಿವರ್ಣ ಬೆಳಕಿನ ಚಿತ್ತಾರ

100 ಕೋಟಿ ಡೋಸ್‌: ಪಾರಂಪರಿಕ ತಾಣಗಳಲ್ಲಿ ತ್ರಿವರ್ಣ ಬೆಳಕಿನ ಚಿತ್ತಾರ

1

ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಹೊಡೆದ ಭಟ್ರು ಟೀಮ್ : ಶೀಘ್ರದಲ್ಲೇ ಬಾಕಿ ಸುದ್ದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಐಪಿಎಲ್‌ ಪ್ರಸಾರಕ್ಕೆ 36,000 ಕೋಟಿ ಮೌಲ್ಯ! ಇತಿಹಾಸದಲ್ಲೇ ಗರಿಷ್ಠ ಮೊತ್ತ ಸಿಗುವ ನಿರೀಕ್ಷೆ

ಐಪಿಎಲ್‌ ಪ್ರಸಾರಕ್ಕೆ 36,000 ಕೋಟಿ ಮೌಲ್ಯ! ಇತಿಹಾಸದಲ್ಲೇ ಗರಿಷ್ಠ ಮೊತ್ತ ಸಿಗುವ ನಿರೀಕ್ಷೆ

ಟಿ20 ವಿಶ್ವಕಪ್‌ ಕ್ರಿಕೆಟ್‌: ಸೂಪರ್‌-12 ಹಂತಕ್ಕೆ ನೆಗೆದ ಲಂಕಾ, ಬಾಂಗ್ಲಾ

ಟಿ20 ವಿಶ್ವಕಪ್‌ ಕ್ರಿಕೆಟ್‌: ಸೂಪರ್‌-12 ಹಂತಕ್ಕೆ ನೆಗೆದ ಲಂಕಾ, ಬಾಂಗ್ಲಾ

12 ವರ್ಷದ ಬಾಲಕಿಯಿಂದ ಸ್ಕಾಟ್ಲೆಂಡ್‌ ಜೆರ್ಸಿ ವಿನ್ಯಾಸ!

12 ವರ್ಷದ ಬಾಲಕಿಯಿಂದ ಸ್ಕಾಟ್ಲೆಂಡ್‌ ಜೆರ್ಸಿ ವಿನ್ಯಾಸ!

ರಾಹುಲ್‌ ಟೀಮ್‌ ಇಂಡಿಯಾದ ದೊಡ್ಡ ಆಸ್ತಿ: ಕಪಿಲ್‌

ರಾಹುಲ್‌ ಟೀಮ್‌ ಇಂಡಿಯಾದ ದೊಡ್ಡ ಆಸ್ತಿ: ಕಪಿಲ್‌

ಆರಂಭಿಕ ಪಂದ್ಯಗಳಿಗೆ ಕೇನ್‌ ವಿಲಿಯಮ್ಸನ್‌ ಗೈರು?

ಆರಂಭಿಕ ಪಂದ್ಯಗಳಿಗೆ ಕೇನ್‌ ವಿಲಿಯಮ್ಸನ್‌ ಗೈರು?

MUST WATCH

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

ಹೊಸ ಸೇರ್ಪಡೆ

ಅರವಳಿಕೆ ಚುಚ್ಚುಮದ್ದು ನೀಡಿ ಹುಲಿ ಸೆರೆ

ಅರವಳಿಕೆ ಚುಚ್ಚುಮದ್ದು ನೀಡಿ ಹುಲಿ ಸೆರೆ

ishwarappa-15

ಕಾಂಗ್ರೆಸ್‍ಗೆ ನಾಯಕತ್ವ, ಸಂಘಟನೆ, ಸಾಧನೆ ಇಲ್ಲ: ಈಶ್ವರಪ್ಪ

ಟ್ರೇಲರ್‌, ಟೀಸರ್‌, ಸಾಂಗ್ಸ್‌ ಧಮಾಕ: ರಿಲೀಸ್ ಗೆ ತಯಾರಾದ ಚಿತ್ರಗಳ ಶರವೇಗದ ಪ್ರಮೋಷನ್

ಟ್ರೇಲರ್‌, ಟೀಸರ್‌, ಸಾಂಗ್ಸ್‌ ಧಮಾಕ: ರಿಲೀಸ್ ಗೆ ತಯಾರಾದ ಚಿತ್ರಗಳ ಶರವೇಗದ ಪ್ರಮೋಷನ್

ಸಾರ್ವಜನಿಕರೇ, ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡಿ

ಸಾರ್ವಜನಿಕರೇ, ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡಿ

Anarchy if the police stop duty

ಪೊಲೀಸರು ಕರ್ತವ್ಯ ನಿಲ್ಲಿಸಿದರೆ ಅರಾಜಕತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.