ಏಶ್ಯಾಡ್ನಿಂದ ಹೊರಗುಳಿಯಲು ಬಾಕ್ಸರ್ ಮೇರಿ ಕೋಮ್ ನಿರ್ಧಾರ
Team Udayavani, Apr 12, 2018, 7:00 AM IST
ಹೊಸದಿಲ್ಲಿ: ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪದಕವೊಂದನ್ನು ಖಚಿತಪಡಿಸಿರುವ ಭಾರತದ ತಾರಾ ಬಾಕ್ಸರ್ ಎಂ.ಸಿ. ಮೇರಿ ಕೋಮ್ ಮುಂಬರುವ ಇಂಡೋನೇಶ್ಯ ಏಶ್ಯಾಡ್ ಕೂಟದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ವರ್ಷಾಂತ್ಯದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ಶಿಪ್ಗಾಗಿ ಹೆಚ್ಚಿ ದೈಹಿಕ ಕ್ಷಮತೆ ಹೊಂದಬೇಕೆಂಬ ಕಾರಣದಿಂದ ಮೇರಿ ಈ ನಿರ್ಣಯ ತೆಗೆದುಕೊಂಡಿದ್ದಾರೆ.
“ಹೌದು, ಏಶ್ಯನ್ ಗೇಮ್ಸ್ನಲ್ಲಿ ಪಾಲ್ಗೊಳ್ಳದಿರುವುದು ನನ್ನ ಸದ್ಯದ ನಿರ್ಧಾರ. ಆದರೆ ಇದಕ್ಕಿನ್ನೂ ಕಾಲಾವಕಾಶವಿದೆ. ಮುಂದೆ ಈ ಬಗ್ಗೆ ಸ್ಪಷ್ಟ ನಿರ್ಧಾರವನ್ನು ಪ್ರಕಟಿಸಲಿದ್ದೇನೆ. ವಿಶ್ವಕಪ್ ಚಾಂಪಿಯನ್ಶಿಪ್ಗಾಗಿ ಪರಿಪೂರ್ಣ ಫಿಟ್ನೆಸ್ ಹೊಂದಬೇಕೆಂಬುದು ನನ್ನ ಗುರಿ. ಹೀಗಾಗಿ ಏಶ್ಯನ್ ಗೇಮ್ಸ್ನಿಂದ ದೂರ ಉಳಿದು ಸಣ್ಣದೊಂದು ಬ್ರೇಕ್ ಪಡೆಯುವ ಯೋಜನೆಯಲ್ಲಿದ್ದೇನೆ’ ಎಂದು ಮೇರಿ ಕೋಮ್ ಹೇಳಿದ್ದಾರೆ. ಇಂಡೋನೇಶ್ಯ ಆತಿಥ್ಯದಲ್ಲಿ ಆಗಸ್ಟ್-ಸೆಪ್ಟಂಬರ್ನಲ್ಲಿ ಏಶ್ಯಾಡ್ ಪಂದ್ಯಾವಳಿ ಹಾಗೂ ನವೆಂಬರ್ನಲ್ಲಿ ಹೊಸದಿಲ್ಲಿಯಲ್ಲಿ ಪ್ರತಿಷ್ಠಿತ ವರ್ಲ್ಡ್ ಚಾಂಪಿಯನ್ಶಿಪ್ ನಡೆಯಲಿದೆ.
ಕಳೆದ 5 ತಿಂಗಳಿಂದ ಸತತವಾಗಿ ಸ್ಪರ್ಧಾತ್ಮಕ ಕೂಟಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುವ ಮೇರಿ ಕೋಮ್ ಇದೇ ಮೊದಲ ಬಾರಿ ಕಾಮೆನ್ವೆಲ್ತ್ ಗೇಮ್ಸ್ನಲ್ಲಿ ಪ್ರತಿನಿಧಿಸಿದ್ದಾರೆ. 2006ರಲ್ಲಿ ಭಾರತದ ಆತಿಥ್ಯದಲ್ಲೇ ನಡೆದ ಮೊದಲ ವನಿತಾ ವರ್ಲ್ಡ್ ಚಾಂಪಿಯನ್ಶಿಪ್ನಲ್ಲಿ ಮೇರಿ ಕಾಮ್ ಚಿನ್ನದ ಪದಕ ಜಯಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್