ಬಾಕ್ಸಿಂಗ್‌: ನಿಖತ್‌ ಜರೀನ್‌ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ

Team Udayavani, Jan 23, 2020, 2:45 PM IST

ನವದೆಹಲಿ: ಹಾಲಿ ಚಾಂಪಿಯನ್‌ ನಿಖತ್‌ ಜರೀನ್‌ (51 ಕೆ.ಜಿ ವಿಭಾಗ ) ಸ್ಟ್ರಾಂಡ್ಜಾ ಮೆಮೊರಿಯಲ್‌ ಬಾಕ್ಸಿಂಗ್‌ ಕೂಟದಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶ ಪಡೆದುಕೊಂಡಿದ್ದಾರೆ.

ಬಲ್ಗೇರಿಯಾದ ಸೋಫಿಯಾದಲ್ಲಿ ನಡೆಯುತ್ತಿರುವ ಕೂಟದಲ್ಲಿ ಅವರ ಎದುರಾಳಿ ಸೆವ್ಡಾ ಅಸೆನೊವಾ ವಿರುದ್ಧದ ಪಂದ್ಯ ರದ್ದಾದುದರಿಂದ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವ ಅವಕಾಶ ಸಿಕ್ಕಿದೆ.

ಇತ್ತೀಚೆಗೆ ನಿಖತ್‌ ಜರೀನ್‌ ಒಲಿಂಪಿಕ್ಸ್‌ ಅರ್ಹತಾ ಕೂಟದ ಆಯ್ಕೆ ಸುತ್ತಿನ ಪಂದ್ಯದಲ್ಲಿ ಖ್ಯಾತ ಬಾಕ್ಸರ್‌ ಮೇರಿ ಕೋಮ್‌ ವಿರುದ್ಧ ಸೋಲುಂಡಿದ್ದನ್ನು ಸ್ಮರಿಸಬಹುದು.

ಇದೇ ಕೂಟದಲ್ಲಿ ಪುರುಷರ ವಿಭಾಗದ ಸೆಣಸಾಟದಲ್ಲಿ ಭಾರತದ ಸ್ಪರ್ಧಿಗಳಾದ ದುರ್ಯೋಧನ ಸಿಂಗ್‌ ನೆಗಿ (69 ಕೆ.ಜಿ), ಮೊಹಮ್ಮದ್‌ ಹುಸ್ಸಾಮುದ್ದಿನ್‌ (57 ಕೆ.ಜಿ) ವಿಭಾಗದ ಸೆಣಸಾಟದಲ್ಲಿ ಗೆದ್ದು ಕ್ರಮವಾಗಿ ಮೊದಲ ಸುತ್ತಿನ ಪಂದ್ಯದಲ್ಲಿ ಗೆದ್ದು ಎರಡನೇ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ