ಎಂಸಿಜಿ ಪಿಚ್‌ ಅಪಾಯಕಾರಿ ಪಂದ್ಯ ನಿಲ್ಲಿಸಿದ ಅಂಪಾಯರ್‌

Team Udayavani, Dec 8, 2019, 12:20 AM IST

ಮೆಲ್ಬರ್ನ್: ಸದ್ಯ ಸಾಗುತ್ತಿರುವ ಮಾರ್ಷ್‌ ಶೆಫೀಲ್ಡ್‌ ಶೀಲ್ಡ್‌ ಕ್ರಿಕೆಟ್‌ ಕೂಟದ ವಿಕ್ಟೋರಿಯ ಮತ್ತು ವೆಸ್ಟ್‌ ಆಸ್ಟ್ರೇಲಿಯ ನಡುವಣ ಪಂದ್ಯದಲ್ಲಿ ಬೌಲಿಂಗ್‌ ಮಾಡುವ ವೇಳೆ ಚೆಂಡು ನೆಲದಿಂದ ಮೇಲಕ್ಕೆ ಹಾರಿ ಹಲವು ಆಟಗಾರರು ಗಾಯಗೊಂಡ ಹಿನ್ನೆಲೆಯಲ್ಲಿ ಅಂಪಾಯರ್‌ ದಿನದಾಟವನ್ನು ರದ್ದುಗೊಳಿಸಲು ನಿರ್ಧರಿಸಿದರು.

ಇಬ್ಬರು ಆಟಗಾರರ ತಲೆಗೆ ಗಾಯವಾಗಿತ್ತು. ಹೀಗಾಗಿ ಅಂಪಾಯರ್‌ ಎಂಸಿಜಿ ಪಿಚ್‌ ಅಪಾಯಕಾರಿಯೆಂದು ತೀರ್ಮಾನಿಸಿ ದಿನದಾಟವನ್ನು ರದ್ದು ಮಾಡಿದರು. ಈ ಸಂದರ್ಭ ದ್ವಿತೀಯ ಅವಧಿಯಲ್ಲಿ ಒಂದು ತಾಸಿನ ಆಟ ಮುಗಿದಿದ್ದು ವೆಸ್ಟರ್ನ್ ಆಸ್ಟ್ರೇಲಿಯ ತಂಡವು 40 ಓವರ್‌ಗಳಲ್ಲಿ ಮೂರು ವಿಕೆಟಿಗೆ 89 ರನ್‌ ಗಳಿಸಿತ್ತು.
ಟೆಸ್ಟ್‌ ಕ್ರಿಕೆಟಿಗೆ ಸಿದ್ಧ ಮಾಡಲಾದ ಪಿಚ್‌ನ ಬದಲಾಗಿ ಬೇರೆ ಪಿಚ್‌ನಲ್ಲಿ ಶೆಫೀಲ್ಡ್‌ ಶೀಲ್ಡ್‌ ಕೂಟದ ಪಂದ್ಯವನ್ನು ನಡೆಸಲಾಗಿತ್ತು. ದಿನದಾಟ ರದ್ದುಗೊಂಡಿರುವುದು ನಿರಾಸೆಯನ್ನುಂಟುಮಾಡಿದೆ. ಆದರೆ ಇದೇ ಪಿಚ್‌ನಲ್ಲಿ ಈ ಋತುವಿನಲ್ಲಿ ಎರಡು ಪಂದ್ಯಗಳು ಯಾವುದೇ ತೊಂದರೆಯಿಲ್ಲದೇ ನಡೆದಿದ್ದವು ಎಂದು ಕ್ರಿಕೆಟ್‌ ಆಸ್ಟ್ರೇಲಿಯದ ಕ್ರಿಕೆಟ್‌ ವ್ಯವಹಾರಗಳ ಮುಖ್ಯಸ್ಥ ಪೀಟರ್‌ ರೋಶ್‌ ಹೇಳಿದ್ದಾರೆ.
ಡಿ. 26ರಿಂದ ಟೆಸ್ಟ್‌
ಇದೇ ಎಂಸಿಜಿ ಮೈದಾನದಲ್ಲಿ ಡಿ. 26ರಿಂದ ಆಸ್ಟ್ರೇಲಿಯ ಮತ್ತು ನ್ಯೂಜಿಲ್ಯಾಂಡ್‌ ®ಡುವೆ ದ್ವಿತೀಯ ಟೆಸ್ಟ್‌ ಆರಂಭವಾಗಲಿದೆ. ಈ ಕಾರಣಕ್ಕಾಗಿ ಮೈದಾನ ಸಿಬಂದಿ ಪಿಚ್‌ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ ಎಂದು ರೋಶ್‌ ತಿಳಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ದೇಶ-ಭಾಷೆಯ ಪ್ರೇಮವನ್ನು ಸಾರುವ, ವ್ಯಕ್ತಿತ್ವ-ಅಭಿಪ್ರಾಯವನ್ನು ಬಿಂಬಿಸುವ, ಓದಿದ ಕೂಡಲೇ ವಾವ್‌ ಅನ್ನಿಸುವ ಚಂದದ ಸಾಲುಗಳನ್ನು ವಸ್ತ್ರದ ಮೇಲೆ ಮೂಡಿಸಿಕೊಳ್ಳಬಹುದು....

  • ಶಿಕ್ಷಣದಲ್ಲಿ ಇಂದು ಹಲವಾರು ಹೊಸತನಗಳು ಬಂದಿವೆ. ಕಲಿಯುವ, ಕಲಿಸುವ ಜವಾಬ್ದಾರಿಗಳು ಹೆಚ್ಚುತ್ತಾ ಹೋಗುತ್ತವೆ. ಕೆಲವೊಂದು ಕಡೆ ಶಿಕ್ಷಣ ಪದ್ಧತಿಗಳು ವಿದ್ಯಾರ್ಥಿಗಳಿಗೆ...

  • ಮಾನಸಿಕವಾಗಿ ಕುಗ್ಗಿರುವ ಹೆಣ್ಣುಮಕ್ಕಳನ್ನು ಖೆಡ್ಡಾಗೆ ಬೀಳಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊಂಚು ಹಾಕುತ್ತಿರುವ ತೋಳಗಳೇನೂ ಕಡಿಮೆ ಇಲ್ಲ. ತಾನೊಬ್ಬ...

  • ಸಿಟಿಗಳಲ್ಲಿರುವ ಹುಡುಗೀರು, ಈಗಷ್ಟೇ ಮೂವತ್ತಾಯ್ತು. ಎರಡು ವರ್ಷ ಬಿಟ್ಟು ಮದುವೆ ಆದರಾಯ್ತು. ಈಗ್ಲೆ ಏನವಸರ ಅನ್ನುತ್ತಾರೆ. ಆದರೆ, ಹಳ್ಳಿಯಲ್ಲಿರುವ ಹೆಣ್ಣುಮಕ್ಕಳಿಗೆ,...

  • ತೂಕ ಇಳಿಸಲೇಬೇಕು ಅಂತಾದಾಗ, ಅವರಿವರು ಮಾತನಾಡುವ "ಸ್ಲಿಮ್‌ ಸೂತ್ರ'ಗಳನ್ನು ಕಿವಿಗೊಟ್ಟು ಕೇಳ್ಳೋಕೆ ಆರಂಭಿಸಿದೆ. ಒಬ್ಬಳು ಜಿಮ್‌ಗೆ ಹೋಗು ಅಂದ್ರೆ, ಇನ್ನೊಬ್ಬಳು...