ವಿಜೇಂದರ್‌ ಒಲಿಂಪಿಕ್ಸ್‌ ಸ್ಪರ್ಧೆಗೆ ಬಾಕ್ಸಿಂಗ್‌ ಇಂಡಿಯಾ ನಿಯಮ ಅಡ್ಡಿ?

Team Udayavani, Dec 11, 2019, 11:59 PM IST

ನವದೆಹಲಿ: ಭಾರತ ಕಂಡ ಖ್ಯಾತ ಬಾಕ್ಸರ್‌ ವಿಜೇಂದರ್‌ ಸಿಂಗ್‌ ಮತ್ತೆ ಭಾರತವನ್ನು ಪ್ರತಿನಿಧಿಸುವ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಸದ್ಯ ವೃತ್ತಿಪರ ಬಾಕ್ಸರ್‌ ಆಗಿರುವ ಅವರು ಮುಂದಿನ ವರ್ಷ ನಡೆಯುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆಡುವ ಸಿದ್ಧತೆಯಲ್ಲಿದ್ದಾರೆ. ಆದರೆ ಇದಕ್ಕೆ ಭಾರತ ಬಾಕ್ಸಿಂಗ್‌ (ಬಿಎಫ್ಐ) ನಿಯಮಗಳು ಅನುವು ಮಾಡಿಕೊಡುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದಾರೆ. ಈ ಹಿಂದೆ ಭಾರತದ ಪರ ಬಾಕ್ಸಿಂಗ್‌ನಲ್ಲಿ ಅವರು ಪಾಲ್ಗೊಂಡಿದ್ದರು. ವೃತ್ತಿಪರ ಬಾಕ್ಸಿಂಗ್‌ ಪ್ರವೇಶಿಸಿದ ನಂತರ ದೇಶವನ್ನು ಪ್ರತಿನಿಧಿಸುವ ಅವಕಾಶ ಕಳೆದುಕೊಂಡಿದ್ದರು. ಇದೀಗ ಅಂತಾರಾಷ್ಟ್ರೀಯ ಬಾಕ್ಸಿಂಗ್‌ ಸಂಸ್ಥೆ ತನ್ನ ನಿಯಮ ಬದಲಾವಣೆ ಮಾಡಿದೆ. ಆದ್ದರಿಂದ ವಿಜೇಂದರ್‌ ಸಿಂಗ್‌ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ತೆರೆದುಕೊಂಡಿದೆ.

ಭಾರತವನ್ನು ಪ್ರತಿನಿಧಿಸುವ ಬಾಕ್ಸರ್‌ಗಳು ಎರಡೂವರೆ ತಿಂಗಳು ರಾಷ್ಟ್ರೀಯ ತಂಡದ ಶಿಬಿರದಲ್ಲಿರಬೇಕು ಎನ್ನುವುದು ಸೇರಿದಂತೆ, ಇನ್ನೂ ಹಲವು ನಿಬಂಧನೆಗಳಿವೆ. ಇದನ್ನೆಲ್ಲ ಪೂರೈಸುವುದು ಕಷ್ಟ ಎಂದು ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ವಿಜೇಂದರ್‌ ಹೇಳಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ