ಬುಕ್ಕಿಗಳ ಫೇವರಿಟ್ ಬ್ರಝಿಲ್
Team Udayavani, Jun 15, 2018, 6:00 AM IST
ಮಾಸ್ಕೊ: ಫಿಫಾ ವಿಶ್ವಕಪ್ ಕಾವು ಜೋರಾಗುತ್ತಿದ್ದಂತೆಯೇ ಇತ್ತ ಬೆಟ್ಟಿಂಗ್ ಕೂಡ ಬಹಳ ಬಿರುಸಿನಲ್ಲೇ ಆರಂಭಗೊಂಡಿದೆ. ಬುಕ್ಕಿಗಳು ತಮ್ಮ ಎಲ್ಲ ಲೆಕ್ಕಾಚಾರಗಳನ್ನು ಬಳಸಿಕೊಂಡು ಗೆಲ್ಲುವ ತಂಡ ಯಾವುದು, ರನ್ನರ್ ಅಪ್ ಯಾರು, 3-4ನೇ ಸ್ಥಾನ ಪಡೆಯುವ ತಂಡಗಳು ಯಾವುವು ಎಂಬ ಬಗ್ಗೆ “ತಾಜಾ ಮಾಹಿತಿ’ಗಳನ್ನು ಒದಗಿಸಲಾರಂಭಿಸಿದ್ದಾರೆ.
ಬ್ರಿಟನ್ನಿನ ಪ್ರಮುಖ ಬುಕ್ವೆುಕರ್ ವಿಲಿಯಂ ಹಿಲ್ ಇದರಲ್ಲಿ ಮುಂಚೂಣಿಯಲ್ಲಿದ್ದಾನೆ. ಈತನ ಪ್ರಕಾರ ಬ್ರಝಿಲ್ ಈ ಕೂಟದ ಚಾಂಪಿಯನ್ ಆಗಲಿದೆ. ಬ್ರಝಿಲ್ಗೆ ನೀಡಿದ “ರೇಟಿಂಗ್’ 4/1. ಅನಂತರದ ಸ್ಥಾನ ಜರ್ಮನಿಗೆ ನೀಡಲಾಗಿದೆ (9/2). ಕೂಟದ 3ನೇ ಫೇವರಿಟ್ ತಂಡ 1998ರ ಚಾಂಪಿಯನ್ ಫ್ರಾನ್ಸ್ (11/2). 4ನೇ ಸ್ಥಾನ ಸ್ಪೇನ್ಗೆ ಲಭಿಸಿದೆ (6/1). ಉಳಿದಂತೆ ಆರ್ಜೆಂಟೀನಾ (9/1), ಬೆಲ್ಜಿಯಂ (11/1), ಇಂಗ್ಲೆಂಡ್ (16/1), ಪೋರ್ಚುಗಲ್ (25/1) 5ರಿಂದ 8ನೇ ಸ್ಥಾನ ಪಡೆದಿವೆ.
ಭಾರತೀಯರ ಲೆಕ್ಕಾಚಾರ
ಭಾರತದ ಬುಕ್ಕಿಗಳ ಲೆಕ್ಕಾಚಾರದಲ್ಲೂ ಬ್ರಝಿಲ್ ತಂಡಕ್ಕೆ ಅಗ್ರಸ್ಥಾನ (9/2). ಜರ್ಮನಿಗೆ 2ನೇ (5/1) ಮತ್ತು ಸ್ಪೇನ್ಗೆ 3ನೇ ಸ್ಥಾನ ನೀಡಿದ್ದಾರೆ (13/2). ಅನಂತರದ ಸ್ಥಾನದಲ್ಲಿ ಫ್ರಾನ್ಸ್ (7/1), ಆರ್ಜೆಂಟೀನಾ (10/1), ಬೆಲ್ಜಿಯಂ (11/1) ಮತ್ತು ಇಂಗ್ಲೆಂಡ್ (18/1) ತಂಡಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್
MUST WATCH
ಹೊಸ ಸೇರ್ಪಡೆ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!