ಬ್ರಿಸ್ಬೇನ್‌ ಇಂಟರ್‌ ನ್ಯಾಶನಲ್‌: ಮರ್ರೆಗೆ ಅಘಾತ, ನಡಾಲ್‌ ಗಾಯಾಳು

Team Udayavani, Jan 3, 2019, 12:30 AM IST

ಬ್ರಿಸ್ಬೇನ್‌: ರಶ್ಯದ ಟೆನಿಸಿಗ ಡ್ಯಾನಿಲ್‌ ಮೆಡ್ವೆಡೇವ್‌ “ಬ್ರಿಸ್ಬೇನ್‌ ಇಂಟರ್‌ನ್ಯಾಶನಲ್‌’ ಕೂಟದಲ್ಲಿ ಮಾಜಿ ವಿಶ್ವದ ನಂಬರ್‌ ವನ್‌ ಆಟಗಾರ ಆ್ಯಂಡಿ ಮರ್ರೆ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿದ್ದಾರೆ.

ಬುಧವಾರ ನಡೆದ ಪಂದ್ಯದಲ್ಲಿ ಮೆಡ್ವೆಡೇವ್‌ 7-5, 6-2 ಸೆಟ್‌ಗಳಿಂದ ಮರ್ರೆ ವಿರುದ್ಧ ಜಯಿಸಿದ್ದಾರೆ. ಕಳೆದ ವರ್ಷ ಸೊಂಟನೋವಿನಿಂದಾಗಿ ಟೆನಿಸ್‌ನಿಂದ ಬಹಳಷ್ಟು ಸಮಯ ದೂರ ಉಳಿದಿದ್ಧ ಮರ್ರೆ ಈ ಕೂಟದ ಮೂಲಕ ಟೆನಿಸಿಗೆ ಮರಳಿದ್ದರು. ಮೆಡ್ವೆಡೇವ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಕೆನಡಾದ ಮಿಲೋಸ್‌ ರಾನಿಕ್‌ ಅವರನ್ನು ಎದುರಿಸಲಿದ್ದಾರೆ.

ಜಪಾನಿನ ಕೀ ನಿಶಿಕೋರಿ ಅಮೆರಿಕದ ಡೆನ್ನಿಸ್‌ ಕುಡ್ಲ ವಿರುದ್ದ 7-5, 6-2 ಸೆಟ್‌ಗಳಿಂದ ಗೆದ್ದರು. ನಿಶಿಕೋರಿ ಮುಂದಿನ ಪಂದ್ಯದಲ್ಲಿ 6ನೇ ಶ್ರೇಯಾಂಕಿತ ಗ್ರಿಗರ್‌ ಡಿಮಿಟ್ರೋವ್‌ ಅವರ ವಿರುದ್ಧ ಆಡಲಿದ್ದಾರೆ.

ನಡಾಲ್‌ ಹೊರಕ್ಕೆ
ಅಗ್ರ ಶ್ರೇಯಾಂಕಿತ ಸ್ಪೇನ್‌ನ ರಫೆಲ್‌ ನಡಾಲ್‌ ತೊಡೆಯ ನೋವಿನಿಂದಾಗಿ ಬ್ರಿಸ್ಬೇನ್‌ ಕೂಟದಿಂದ ಹಿಂದೆ ಸರಿದಿದ್ದಾರೆ. ಇವರ ಸ್ಥಾನಕ್ಕೆ ಜಪಾನ್‌ನ ಟಾರೊ ಡೇನಿಯಲ್‌ ಅವರನ್ನು ಸೇರಿಸಿಕೊಳ್ಳಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ರಾಯಚೂರು: ನಗರದ ಜಿಪಂ ಕಚೇರಿ ಆವರಣದಲ್ಲಿ ಮಹಾತ್ಮ ಗಾಂಧಿ  ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕುರಿತು ಕೂಲಿಕಾರರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಆರಂಭಿಸಿದ...

  • ಬಾಗಲಕೋಟೆ: ಮಹಾ ಶಿವರಾತ್ರಿಯಂದು ದೇಶದೆಲ್ಲೆಡೆ ಶಿವ, ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲುತ್ತದೆ. ಆದರೆ, ಇಲ್ಲೊಂದು ಸಾವಿರ ತೂಕದ ಬೃಹತ್‌ ಶಿವಲಿಂಗ ಹಲವುವರ್ಷಗಳಿಂದ...

  • ವಿಜಯಪುರ: ಮಾ.4ರಿಂದ 23ರ ವರೆಗೆ ನಡೆಯಲಿರುವ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗಳನ್ನು ಯಾವುದೇ ಅಕ್ರಮಕ್ಕೆ ಅವಕಾಶವಿಲ್ಲದಂತೆ ನಡೆಸಬೇಕು. ಇಲಾಖೆಯ ನಿಯಮಾನುಸಾರ...

  • ಶಿರಾ: ಆಸ್ಟ್ರೇಲಿಯಾದಲ್ಲಿ ಎಂಬಿಎ, ಎಂಐಟಿ ವ್ಯಾಸಂಗ ಮಾಡಿ ಕೈ ತುಂಬಾ ಸಂಪಾದಿಸುವ ಕೆಲಸ ತೊರೆದು ಹೈನುಗಾರಿಕೆಯಲ್ಲಿ ಯಶಸ್ಸು ಕಂಡಿದ್ದಾರೆ ಯುವ ರೈತ ಆಶೀಶ್‌...

  • ಬೀದರ: ಸುತ್ತಮುತ್ತಲು ಹಚ್ಚಹಸಿರಿನ ಕಾಡು, ಸದಾ ಪಕ್ಷಿಗಳ ಚಿಲಿಪಿಲಿ ಕಲರವ, ಜೋಗ ಜಲಪಾತದಂತೆ ಮನಮೋಹಕವಾಗಿ ಧುಮ್ಮಿಕ್ಕುವ ನೀರಿನ ರಮಣೀಯ ದೃಶ್ಯ, ನಿಸರ್ಗದ ಮಡಿಲಲ್ಲಿ...