ಬುಮ್ರಾ, ಶಮಿ ಉರಿ ದಾಳಿಗೆ ಪತರುಗಟ್ಟಿದ ಕಿವೀಸ್: ಭಾರತಕ್ಕೆ ಮೊದಲ ಇನ್ನಿಂಗ್ಸ್ ಮುನ್ನಡೆ
Team Udayavani, Mar 1, 2020, 8:43 AM IST
ಕ್ರೈಸ್ಟ್ ಚರ್ಚ್: ಕಳೆದ ಟೆಸ್ಟ್ ಪಂದ್ಯದಲ್ಲಿ ಮಂಕಾಗಿದ್ದ ಭಾರತದ ವೇಗಿಗಳಾದ ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಕ್ರೈಸ್ಟ್ ಚರ್ಚ್ ಪಂದ್ಯದಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ. ಕಿವೀಸ್ ಮೊದಲ ಇನ್ನಿಂಗ್ಸ್ ನಲ್ಲಿ 235 ರನ್ ಗೆ ಆಲ್ ಔಟ್ ಆಗಿದೆ.
ವಿಕೆಟ್ ನಷ್ಟವಿಲ್ಲದೆ 63 ರನ್ ಗಳಿಸಿದ್ದಲ್ಲಿಂದ ಎರಡನೇ ದಿನದಾಟ ಆರಂಭಿಸಿದ ಕಿವೀಸ್ ಇಂದು ಕೇವಲ ಮೂರು ರನ್ ಸೇರಿಸಿ ಮೊದಲ ವಿಕೆಟ್ ಕಳೆದುಕೊಂಡಿತು. 30 ರನ್ ಗಳಿಸಿದ ಟಾಮ್ ಬ್ಲಂಡೆಲ್ ಉಮೇಶ್ ಯಾದವ್ ಗೆ ಬಲಿಯಾದರು. ಕೇನ್ ವಿಲಿಯಮ್ಸನ್, ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ವ್ಯಾಟ್ಲಿಂಗ್, ಸೌಥಿ ಬೇಗನೇ ವಿಕೆಟ್ ಒಪ್ಪಿಸಿದರು. ಆರಂಭಿಕ ಟಾಮ್ ಲ್ಯಾಂಥಮ್ 52 ರನ್ ಗಳಿಸಿದರೆ, ಗ್ರಾಂಡ್ ಹೋಮ್ 26 ಮತ್ತು ಕೊನೆಯಲ್ಲಿ ಮಿಂಚಿದ ಜ್ಯಾಮಿಸನ್ 49 ರನ್ ಬಾರಿಸಿದರು. ಅಂತಿಮವಾಗಿ ಕಿವೀಸ್ 43.1 ಓವರ್ ನಲ್ಲಿ 235 ರನ್ ಗೆ ಆಲ್ ಔಟ್ ಆಯಿತು.
ಬುಮ್ರಾ ಮೂರು ವಿಕೆಟ್, ಶಮಿ ನಾಲ್ಕು ವಿಕೆಟ್ ಜಡೇಜಾ ಎರಡು ವಿಕೆಟ್ ಮತ್ತು ಉಮೇಶ್ ಯಾದವ್ ಒಂದು ವಿಕೆಟ್ ಪಡೆದರು. ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 7 ರನ್ ಗಳ ಅಲ್ಪ ಮುನ್ನಡೆ ಸಾಧಿಸಿದೆ.
ಭಾರತ ಮೊದಲ ಇನ್ನಿಂಗ್ಸ್: 242-10
ನ್ಯೂಜಿಲ್ಯಾಂಡ್ ಮೊದಲ ಇನ್ನಿಂಗ್ಸ್: 235-10